Afghanistan Crisis: ಕಾಬೂಲ್ (Kabul) ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನವನ್ನು (Afghanistan) ಯಾರು ಆಳುತ್ತಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ತಾಲಿಬಾನ್‌ನಲ್ಲಿ ಆಂತರಿಕ ಸಂಘರ್ಷ ಏರ್ಪಟ್ಟಿದೆ ಎನ್ನಲಾಗಿದೆ. ಇದು ಈಗಾಗಲೇ ರಕ್ತಸಿಕ್ತ ಮತ್ತು ಯುದ್ಧಪೀಡಿತ ಅಫ್ಘಾನಿಸ್ತಾನದ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ನ್ಯೂಯಾರ್ಕ್ ಪೋಸ್ಟ್‌ನಲ್ಲಿ ಪ್ರಕಟಗೊಂಡ  ವರದಿಯಲ್ಲಿ ಹೇಳಿಕೆ ನೀಡಿರುವ ಹೋಲಿ ಮೈಕೆ,   ಅವರು ಭೂಮಿಯ ಮೇಲಿನ ಹಲವು ಮೂಲಗಳು ಮತ್ತು ಮಾಜಿ ಗುಪ್ತಚರ ಇಲಾಖೆಗಳು ಹಾಗೂ ಮಿಲಿಟರಿ ಅಧಿಕಾರಿಗಳು ವಿವಿಧ ತಾಲಿಬಾನ್ ಬಣಗಳ (Factionalism In Taliban) ನಡುವಿನ ಸ್ಪಷ್ಟ ವಿಭಜನೆಯ ಕುರಿತು ಸಂಕೇತಗಳನ್ನು ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತು ಹೇಳಿಕೆ ನೀಡಿರುವ ಕಾಬೂಲಿನ ಮಾಜಿ ಸರ್ಕಾರಿ ಮೂಲವೊಂದು. "ನೆಲದ ಮೇಲಿನ ಪರಿಸ್ಥಿತಿ ತುಂಬಾ ಹದಗೆಡುತ್ತಿದೆ. ತಾಲಿಬಾನಿಗಳಲ್ಲಿ ಹೆಚ್ಚು ವಿಭಜನೆಗಳಾಗುತ್ತಿವೆ. ವಿವಿಧ ಬಣಗಳು ಈಗಾಗಲೇ ತಮ್ಮ ತಮ್ಮ ಸಭೆಗಳನ್ನು ನಡೆಸುತ್ತಿವೆ. ಇದರಿಂದ ತಾಲಿಬಾನಿಗಳ ನಡುವೆ ನೇತೃತ್ವದ ಬಗ್ಗೆ ಐಕ್ಯತೆಯ ಕೊರತೆ ಇರುವುದು ಸ್ಪಷ್ಟವಾಗುತ್ತದೆ.


ಮೂಲಗಳ ಪ್ರಕಾರ, " ಅಧಿಕಾರಕ್ಕೆ ಸಂಬಂಧಿಸಿದಂತೆ ದೊಡ್ಡ ವಿವಾದಗಳೇ ಇವೆ. ವಿಭಿನ್ನ ಜಾತಿಗಳು, ಸಮುದಾಯಗಳಿಗೆ ಅಧಿಕಾರ ಬೇಕಿದೆ ಮತ್ತು ತಾಲಿಬಾನಿಗಳ ಪಾಲಿಗೆ ಇದು ದೊಡ್ಡ ಹೊಡೆತವಾಗಿದೆ." ಎನ್ನಲಾಗಿದೆ . ಹಕ್ಕಾನಿ ನೆಟ್ವರ್ಕ್ (Hakkani Network) ಅನ್ನು ಈಗಾಗಲೇ ಕಾಬೂಲ್ ಸುರಕ್ಷತೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಇದು ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಎಲ್ಲ ವಿಷಯಗಳಲ್ಲಿ ರಾಜತಾಂತ್ರಿಕ ಹಾಗೂ ಸೈನ್ಯದ ರೂಪದಲ್ಲಿ ಪರದೆಯ ಹಿಂದೆ ತುಂಬಾ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಅಮೇರಿಕಾ ವತಿಯಿಂದ ಉಗ್ರ ಎಂದು ಘೋಷಿಸಲ್ಪಟ್ಟ ಖಲೀಲ್ ಹಕ್ಕಾನಿ ಮೇಲೆ ಅಮೇರಿಕಾ 50 ಲಕ್ಷ ಡಾಲರ್ ಬಹುಮಾನ ಕೂಡ ಘೋಷಿಸಲಾಗಿದ್ದು, ಆತನನ್ನು ಆಫ್ಥಾನಿಸ್ತಾನದಲ್ಲಿ ಭದ್ರತಾಪಡೆ ಮುಖ್ಯಸ್ಥ ಎಂದು ನೇಮಿಸಲಾಗಿದೆ.


ಇದನ್ನೂ ಓದಿ-Kabul Airport Alert: ತನ್ನ ನಾಗರಿಕರಿಗೆ ಕಾಬೂಲ್ ವಿಮಾನ ನಿಲ್ದಾಣ ಪ್ರದೇಶ ತೊರೆಯುವಂತೆ ಹೇಳಿದ ಅಮೆರಿಕ


ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ ಈ ಕುರಿತು ಹೇಳಿಕೆ ನೀಡಿರುವ ಆಫ್ಘನ್ ಇಂಟೆಲ್ ಇನ್ಸೈಡರ್, ಹಕ್ಕಾನಿಯ ನಿಷ್ಠಾವಂತರ ಬಳಿ ಅಮೆರಿಕಾದ ಶಸ್ತ್ರಾಸ್ತ್ರಗಳಿದ್ದವು. ಇವರು ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Hamid Karjai International Airport) ಒಳಗೆ ತಕ್ಷಣ ಅಧಿಕಾರ ಸ್ಥಾನಾಂತರಿಸುವ ಯೋಜನೆ ರೂಪಿಸುತ್ತಿದ್ದರು. ಅಮೇರಿಕಾ ಮೂಲದ ಮತ್ತೊಂದು ಗುಪ್ತಚರ ಮೂಲ ಶುಕ್ರವಾರ ವಿಮಾನ ನಿಲ್ದಾಣದ ಪರಿಧಿಯ ಹತ್ತಿರ ತಾಲಿಬಾನಿ ಗುಂಪುಗಳ ಮಧ್ಯೆ ಗುಂಡಿನ ಚಕಮಕಿ ಕೂಡ ನಡೆದಿದೆ ಎನ್ನಲಾಗಿದೆ.


ಇದನ್ನೂ ಓದಿ-Viral News: ಏಲಿಯನ್ಸ್ ರೀತಿಯ ಮಗುವಿಗೆ ಜನ್ಮ ನೀಡಿದ ಮಹಿಳೆ..!


ತಾಲಿಬಾನ್ ಮತ್ತು ಹಕ್ಕಾನಿಗಳ ನಡುವೆ ಯಾರು ನಿಯಂತ್ರಣ ಮತ್ತು ಅಧಿಕಾರವನ್ನು ನಿರ್ವಹಿಸುತ್ತಾರೆ ಎಂಬ ವ್ಯತ್ಯಾಸಗಳ ಜೊತೆಗೆ, ಪ್ರತಿಯೊಂದು ಗುಂಪುಗಳಲ್ಲಿಯೂ ಬಿರುಕುಗಳು ಕಾಣಿಸಿಕೊಳ್ಳುತ್ತಿದೆ.  ಈ ವಿಷಯದ ಬಗ್ಗೆ ಮಾಹಿತಿ ಹೊಂದಿರುವ ಕಾಬೂಲ್ ಮೂಲವೊಂದು, "ಹೆಲ್ಮಂಡೀಸ್ ಮತ್ತು ಕಂದಹರಿ ಎರಡೂ ಗುಂಪುಗಳಿಗೆ ಸವಾಲು ಹಾಕುತ್ತಿವೆ. ತಾಲಿಬಾನ್ (Afghanistan Crisis) ಅನೇಕ ಜನರನ್ನು ಉತ್ತಮ ಸ್ಥಾನಗಳಿಗೆ ನೇಮಿಸುವ ಮೂಲಕ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆ" ಎಂದು ಹೇಳಲಾಗಿದೆ.


ಇದನ್ನೂ ಓದಿ-ISIS ನೆಲೆಗಳ ಮೇಲೆ ಅಮೇರಿಕಾ ಏರ್ ಸ್ಟ್ರೈಕ್, ಮಾಸ್ಟರ್ ಮೈಂಡ್ ಹತ್ಯೆ ಎಂದು ಹೇಳಿಕೊಂಡ ಅಮೇರಿಕಾ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ