ನವದೆಹಲಿ: ನೀವು ಹಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಅನ್ಯಗ್ರಹ ಜೀವಿಗಳನ್ನು ನೋಡಿರುತ್ತೀರಿ. ಆದರೆ, ನಿಜ ಜೀವನದಲ್ಲಿ ಅನ್ಯಗ್ರಹ ಜೀವಿಗಳ ಬಗ್ಗೆ ಇಲ್ಲಿವರೆಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ನಿಜವಾಗಲೂ ಏಲಿಯನ್ಸ್(Aliens)ಗಳು ಇವೆಯೋ, ಇಲ್ಲವೋ ಅಂತಾ ವಿಜ್ಞಾನಿಗಳು, ಸಂಶೋಧಕರು ತೆಲೆಕೆಡಿಸಿಕೊಂಡಿದ್ದಾರೆ. ಈ ಬಗ್ಗೆ ಅನೇಕ ದೇಶಗಳಲ್ಲಿ ಸಂಶೋಧನೆಗಳು ಕೂಡ ಮುಂದುವರೆದಿವೆ.
ಈ ಮಧ್ಯೆ ಪೂರ್ವ ಆಫ್ರಿಕಾ(East Africa)ದ ರುವಾಂಡಾ(Rwanda)ದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಮಹಿಳೆಯೊಬ್ಬಳು ವಿಚಿತ್ರ ಮಗುವಿಗೆ ಜನ್ಮ ನೀಡಿದ್ದಾಳೆ. ಕೆಲವರು ಆ ಮಗುವನ್ನು ಏಲಿಯನ್ಸ್(Aliens) ಎನ್ನುತ್ತಿದ್ದರೆ, ಇನ್ನು ಕೆಲವರು ಇದು ದೆವ್ವ ಎನ್ನುತ್ತಿದ್ದಾರಂತೆ. ಆದರೆ ತಂದೆ ಮಾತ್ರ ವಿಚಿತ್ರವಾಗಿ ಜನಿಸಿರುವ ಈ ಮಗುವನ್ನು ಸ್ವೀಕರಿಸಲು ಒಪ್ಪುತ್ತಿಲ್ಲವಂತೆ.
ಇದನ್ನೂ ಓದಿ: ISIS ನೆಲೆಗಳ ಮೇಲೆ ಅಮೇರಿಕಾ ಏರ್ ಸ್ಟ್ರೈಕ್, ಮಾಸ್ಟರ್ ಮೈಂಡ್ ಹತ್ಯೆ ಎಂದು ಹೇಳಿಕೊಂಡ ಅಮೇರಿಕಾ
ವರದಿಗಳ ಪ್ರಕಾರ, ವಿಚಿತ್ರವಾಗಿ ಜನಿಸಿದ ಮಗುವನ್ನು ಸ್ವೀಕರಿಸಲು ಅದರ ತಂದೆ ನಿರಾಕರಿಸಿದ್ದಾನಂತೆ. ಅಷ್ಟೇ ಅಲ್ಲದೆ ಮಗುವನ್ನು ಕೊಲ್ಲುವಂತೆ ಆತ ಆದೇಶವನ್ನೂ ನೀಡಿದ್ದನಂತೆ. ಆದರೆ ಮಗುವಿನ ತಾಯಿ ಬಜೆನೆಜಾ ಲಿಬರ್ಟಾ ಇದಕ್ಕೆ ಒಪ್ಪಿಲ್ಲ. ಮಗುವನ್ನು ಸ್ವೀಕರಿಸಿರುವ ತಾಯಿ, ಪತಿ ಮತ್ತು ಆತನ ಕುಟುಂಬದಿಂದ ದೂರವಾಗಿ ಏಕಾಂಗಿಯಾಗಿ ವಾಸಿಸುತ್ತಿದ್ದಾಳಂತೆ. ಮಗುವಿನ ಜೊತೆಗೆ ಬಂದರೆ ನಿನ್ನನ್ನು ಸ್ವೀಕರಿಸುವುದಿಲ್ಲವೆಂದು ಪತಿ ಹೇಳಿದ್ದಾನೆ. ನನ್ನ ಕುಟುಂಬದ ಜೊತೆಗಿರಲು ಬಯಸಿದರೆ ಮಗುವನ್ನು ಬಿಟ್ಟು ಬಾ ಅಂತಾ ಪತ್ನಿಗೆ ಆತ ಹೇಳಿದ್ದಾನಂತೆ.
ಮಗುವಿನ ತಾಯಿ ಬಜೆನೆಜಾ ಸೋಷಿಯಲ್ ಮೀಡಿಯಾ(Social Media)ದಲ್ಲಿ ತನ್ನ ದುಃಖದ ಕಥೆಯನ್ನು ಹಂಚಿಕೊಂಡಿದ್ದಾಳೆ. ಮಗುವನ್ನು ನೋಡಿಕೊಳ್ಳುವುದು ನನಗೆ ಕಷ್ಟವಾಗ್ತಿದೆ ಎಂದು ಆಕೆ ಅಳಲು ತೋಡಿಕೊಂಡಿದ್ದಾಳೆ. ಬಜೆನೆಜಾಗೆ ಈಗಾಗಲೇ ಹಲವಾರು ಮಕ್ಕಳಿದ್ದಾರಂತೆ. ಉಳಿದ ಎಲ್ಲಾ ಮಕ್ಕಳು ಸಾಮಾನ್ಯವಾಗಿದ್ದರೆ, ಈ ಮಗು ಮಾತ್ರ ವಿಚಿತ್ರವಾಗಿ ಜನಿಸಿದೆಯಂತೆ. ಈ ಕಾರಣದಿಂದ ಆಕೆಯ ಪತಿ ಮತ್ತು ಕುಟುಂಬ ಆಕೆಯನ್ನು ಬಿಟ್ಟುಹೋಗಿದೆಯಂತೆ. ಇದರಿಂದ ಮುಂದೇನು ಮಾಡುವುದು ಎಂದು ಬಜೆನೆಜಾ ತಲೆ ಮೇಲೆ ಕೈಹೊತ್ತು ಕುಳಿತಿದ್ದಾಳಂತೆ. ತನ್ನ ಮುಗುವಿಗೆ ಚಿಕಿತ್ಸೆ ನೀಡಬೇಕೆಂದು ಆನ್‌ಲೈನ್‌ನಲ್ಲಿ ಆಕೆ ಆರ್ಥಿಕ ನೆರವು ಕೇಳಿದ್ದಾಳೆ.
ಇದನ್ನೂ ಓದಿ: Covid Loan Fraud : 13 ಕೋಟಿ ರೂ. ವಂಚನೆ; ಭಾರತೀಯ ಮೂಲದ ವ್ಯಕ್ತಿಗೆ 2 ವರ್ಷ ಶಿಕ್ಷೆ
ಸದ್ಯ ಏಕಾಂಗಿಯಾಗಿ ವಾಸಿಸುತ್ತಿರುವ ಬಜೆನೆಜಾ ತನಗೆ ಜನಿಸಿರುವ ವಿಚಿತ್ರ ಮಗು ಸಾಕಲು ಹೆಣಗಾಡುತ್ತಿದ್ದಾಳೆ. ಎಲ್ಲರೂ ಮಗುವನ್ನು ಅನ್ಯಗ್ರಹ ಜೀವಿ ಎಂದೇ ಹೇಳುತ್ತಿದ್ದಾರಂತೆ. ಇದರಿಂದ ಆಕೆಗೆ ತುಂಬಾ ಬೇಸರ ಆಗಿದೆಯಂತೆ. ಏಲಿಯನ್ಸ್ ರೀತಿ ಹುಟ್ಟಿರುವ ಈ ಮಗು ನೋಡಲು ಅನೇಕರು ಬಜೆನೆಜಾ ಇರುವ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರಂತೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ