Kabul Attack: ಕಾಬೂಲ್ ದಾಳಿಗೆ ಸ್ನೇಹಿತರ ನಡುವೆ ಘರ್ಷಣೆ, ಬ್ರಿಟನ್ ವಿರುದ್ಧ ಗಂಭೀರ ಆರೋಪ ಮಾಡಿದ ಅಮೆರಿಕ
ಕಾಬೂಲ್ ವಿಮಾನ ನಿಲ್ದಾಣದ ಮೇಲೆ ದಾಳಿಗೆ ಸಂಬಂಧಿಸಿದಂತೆ ಅಮೆರಿಕ ಬ್ರಿಟನ್ ಅನ್ನು ಗುರಿಯಾಗಿಸಿಕೊಂಡಿದೆ. ವಿಮಾನ ನಿಲ್ದಾಣದ ಗೇಟ್ ಅನ್ನು ಮುಚ್ಚಬೇಕೆಂದು ಯುಎಸ್ ಬಯಸಿತು, ಆದರೆ ಬ್ರಿಟನ್ ಅದಕ್ಕೆ ಸಿದ್ಧವಿರಲಿಲ್ಲ. ಏಕೆಂದರೆ ಬ್ರಿಟನ್ ತನ್ನ ರಕ್ಷಣಾ ಕಾರ್ಯಾಚರಣೆಯನ್ನು ಆದಷ್ಟು ಬೇಗ ಮುಗಿಸಬೇಕಿತ್ತು. ಈ ಕಾರಣದಿಂದ ಭಯೋತ್ಪಾದಕರಿಗೆ ದಾಳಿ ಮಾಡಲು ಅವಕಾಶ ಸಿಕ್ಕಿತು ಎಂದು ಯುಎಸ್ ಆರೋಪಿಸಿದೆ.
ಲಂಡನ್: ಕಾಬೂಲ್ ವಿಮಾನ ನಿಲ್ದಾಣದ ಮೇಲೆ ನಡೆದ ಆತ್ಮಾಹುತಿ ದಾಳಿಗೆ (Kabul Airport Blast) ಸಂಬಂಧಿಸಿದಂತೆ ಯುಎಸ್ ಮತ್ತು ಯುಕೆ ನಡುವೆ ಸಂಘರ್ಷ ಭುಗಿಲೆದ್ದಿದೆ. ಬ್ರಿಟನ್‌ನ ಒತ್ತಾಯದಿಂದಾಗಿ ಈ ದಾಳಿ ನಡೆದಿದೆ, ಇದರಲ್ಲಿ 13 ಸೈನಿಕರು ಸೇರಿದಂತೆ 170 ಜನರು ಸಾವನ್ನಪ್ಪಿದ್ದಾರೆ ಎಂದು ಯುಎಸ್ ಹೇಳಿದೆ. ಸೋರಿಕೆಯಾದ ಪೆಂಟಗನ್ ದಾಖಲೆಗಳ ಪ್ರಕಾರ ಬ್ರಿಟನ್ ವಿಮಾನ ನಿಲ್ದಾಣದ ಗೇಟ್ ಮುಚ್ಚಲು ಒಪ್ಪಿಕೊಂಡಿದ್ದರೆ, ಅಷ್ಟೊಂದು ಜನರು ಸಾಯುತ್ತಿರಲಿಲ್ಲ ಎಂದಿದೆ.
ದಾಳಿಯ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದ ಯುಎಸ್:
ಡೈಲಿ ಮೇಲ್ ವರದಿಯ ಪ್ರಕಾರ, ಕಾಬೂಲ್ ವಿಮಾನ ನಿಲ್ದಾಣದ ಗೇಟ್ ಮುಚ್ಚುವಂತೆ ಅಮೆರಿಕವು (America) ಬ್ರಿಟಿಷ್ ಸೈನಿಕರಿಗೆ ಹಲವು ಬಾರಿ ವಿನಂತಿಸಿದೆ, ಆದರೆ ಬ್ರಿಟನ್ ಇದಕ್ಕೆ ಕಿವಿಗೊಡಲೇ ಇಲ್ಲ. ಯುಎಸ್ ನಿಂದ ಪದೇ ಪದೇ ಎಚ್ಚರಿಕೆ ನೀಡಿದರ ಹೊರತಾಗಿಯೂ, ಬ್ರಿಟನ್ ರಕ್ಷಣಾ ಕಾರ್ಯಾಚರಣೆ ವೇಗವಾಗಿ ಮುಂದುವರಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಗೇಟ್ ಅನ್ನು ತೆರೆದಿಡಲು ಹಠ ಹಿಡಿದಿತ್ತು. ಇದರಿಂದಾಗಿ ಭಯೋತ್ಪಾದಕರು ಆತ್ಮಹತ್ಯಾ ದಾಳಿಯ ಅವಕಾಶವನ್ನು ಪಡೆದರು ಎಂದು ಸೋರಿಕೆಯಾದ ದಾಖಲೆಗಳಲ್ಲಿ ಹೇಳಲಾಗಿದೆ.
ಇದನ್ನೂ ಓದಿ- Viral News: ಏಲಿಯನ್ಸ್ ರೀತಿಯ ಮಗುವಿಗೆ ಜನ್ಮ ನೀಡಿದ ಮಹಿಳೆ..!
ಯುಕೆ ಯಾವುದೇ ಗಮನ ನೀಡಲಿಲ್ಲ :
ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಪೆಂಟಗನ್ (Pentagon) ಒಂದು ದೊಡ್ಡ ದಾಳಿಯ ಭಯವಿದೆ ಎಂದು ಸೋರಿಕೆಯಾದ ದಾಖಲೆಗಳು ಹೇಳುತ್ತವೆ. ದಾಳಿಗೆ 24 ಗಂಟೆಗಳ ಮೊದಲು ನಡೆದ ಸಭೆಯಲ್ಲಿ ವಿಮಾನ ನಿಲ್ದಾಣದ ಅಬ್ಬೆ ಗೇಟ್ (Abbey Gate) ಹೆಚ್ಚಿನ ಅಪಾಯದಲ್ಲಿದೆ, ಆದ್ದರಿಂದ ಗೇಟ್ ಮುಚ್ಚಿರಬೇಕು ಎಂದು ಅಮೇರಿಕ ಸ್ಪಷ್ಟವಾಗಿ ಹೇಳಿದ್ದರು. ಇದಲ್ಲದೇ, ದಾಳಿಯ ದಿನ ನಡೆದ ಕಾನ್ಫರೆನ್ಸ್ ಕರೆಯಲ್ಲಿ, ವಿಮಾನ ನಿಲ್ದಾಣದ ಗೇಟ್ ಮುಚ್ಚುವಂತೆ ಅಮೇರಿಕ ಪುನರುಚ್ಚರಿಸಿತು, ಆದರೆ ಬ್ರಿಟನ್ ಈ ಎಚ್ಚರಿಕೆಗಳನ್ನು ನಿರ್ಲಕ್ಷಿಸಿತು ಎನ್ನಲಾಗಿದೆ.
ಎಚ್ಚರಿಕೆ ನೀಡಿದ 6 ಗಂಟೆಗಳ ನಂತರ ದಾಳಿ ನಡೆದಿದೆ:
ಬ್ರಿಟಿಷ್ ಸೈನಿಕರು ವಿಮಾನ ನಿಲ್ದಾಣದ ಬಳಿ ಇರುವ ಬ್ಯಾರನ್ ಹೋಟೆಲ್ ಅನ್ನು ತಮ್ಮ ನೆಲೆಯನ್ನಾಗಿಸಿಕೊಂಡರು ಮತ್ತು ವಿಮಾನ ನಿಲ್ದಾಣದ ಗೇಟ್ ತೆರೆದಿರಬೇಕೆಂದು ಬಯಸಿದ್ದರು. ಇದರಿಂದ ಅವರು ಅಫ್ಘಾನಿಸ್ತಾನದಿಂದ ಜನರನ್ನು ಆದಷ್ಟು ಬೇಗ ಸ್ಥಳಾಂತರಿಸಬಹುದು ಎಂದು ಭಾವಿಸಿದ್ದರು. ಪೆಂಟಗನ್ ಎಚ್ಚರಿಕೆಯ ಆರು ಗಂಟೆಗಳ ನಂತರ ವಿಮಾನ ನಿಲ್ದಾಣದ ಮೇಲೆ ಐಸಿಸ್-ಕೆ (ISIS-K) ತನ್ನ ಆತ್ಮಾಹುತಿ ದಾಳಿಯನ್ನು ಪ್ರಾರಂಭಿಸಿತು. ಈ ದಾಳಿಯಲ್ಲಿ 13 ಯುಎಸ್ ಸೈನಿಕರು ಸೇರಿದಂತೆ 170 ಜನರು ಪ್ರಾಣಕಳೆದುಕೊಂಡಿದ್ದಾರೆ. ಅಮೆರಿಕದ ಈ ಆರೋಪಕ್ಕೆ ಬ್ರಿಟನ್ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇಡೀ ಕಾರ್ಯಾಚರಣೆಯ ಸಮಯದಲ್ಲಿ ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಿವೆ ಎಂದು ಮಾತ್ರ ಅವರ ಕಡೆಯಿಂದ ಹೇಳಲಾಗಿದೆ.
ಇದನ್ನೂ ಓದಿ- Kabul Airport Alert: ತನ್ನ ನಾಗರಿಕರಿಗೆ ಕಾಬೂಲ್ ವಿಮಾನ ನಿಲ್ದಾಣ ಪ್ರದೇಶ ತೊರೆಯುವಂತೆ ಹೇಳಿದ ಅಮೆರಿಕ
ಕುಟುಂಬವನ್ನು ಕರೆದುಕೊಂಡು ಹೋಗಲು ಬಂದ ಚಾಲಕನ ಸಾವು :
ಅದೇ ಸಮಯದಲ್ಲಿ, ದಾಳಿಗೆ ಬಲಿಯಾದವರು ಅಮೆರಿಕನ್ ಸೈನಿಕರು ಅಮಾಯಕ ಜನರನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಆತ್ಮಾಹುತಿ ದಾಳಿಯ ನಂತರ, ವಿಮಾನ ನಿಲ್ದಾಣದಲ್ಲಿದ್ದ ಯುಎಸ್ ಸೈನಿಕರು ಗಾಬರಿಗೊಂಡರು ಮತ್ತು ತಾಲಿಬಾನ್‌ನಿಂದ ತಪ್ಪಿಸಿಕೊಳ್ಳಲು ವಿಮಾನ ನಿಲ್ದಾಣವನ್ನು ತಲುಪಿದ ಜನರ ಮೇಲೆ ಗುಂಡು ಹಾರಿಸಿದರು. ಈ ಗುಂಡಿನ ದಾಳಿಯಲ್ಲಿ ಬ್ರಿಟಿಷ್ ನಾಗರಿಕ ಸೇರಿದಂತೆ ಅನೇಕ ಮುಗ್ಧ ಜನರು ಪ್ರಾಣ ಕಳೆದುಕೊಂಡರು. ಮೃತರಲ್ಲಿ ಲಂಡನ್ ಮೂಲದ ಟ್ಯಾಕ್ಸಿ ಚಾಲಕ ಮುಹಮ್ಮದ್ ನಿಯಾಜಿ ಕೂಡ ಒಬ್ಬರು. ಆತ ತನ್ನ ಕುಟುಂಬವನ್ನು ಕಾಬೂಲ್‌ನಿಂದ ಸ್ಥಳಾಂತರಿಸಲು ಅಫ್ಘಾನಿಸ್ತಾನಕ್ಕೆ ಮರಳಿದ್ದರು. ಆತನ ಪತ್ನಿ ಕೂಡ ಸ್ಫೋಟದಲ್ಲಿ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ