ಢಾಕಾ: ಯಾವುದೇ ಮುನ್ಸೂಚನೆಯಿಲ್ಲದೆ ಈರುಳ್ಳಿ ರಫ್ತು (Onion export) ನಿಷೇಧಿಸುವ ಭಾರತದ ನಿರ್ಧಾರದ ಬಗ್ಗೆ ಬಾಂಗ್ಲಾದೇಶ ಅಧಿಕೃತವಾಗಿ ತನ್ನ ತೀವ್ರ ಕಳವಳ ವ್ಯಕ್ತಪಡಿಸಿದೆ.


COMMERCIAL BREAK
SCROLL TO CONTINUE READING

ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ (Onion) ಲಭ್ಯತೆಯನ್ನು ಹೆಚ್ಚಿಸಲು ಮತ್ತು ಬೆಲೆಗಳನ್ನು ನಿಗ್ರಹಿಸಲು ಭಾರತ ಸರ್ಕಾರ ಸೋಮವಾರ ಎಲ್ಲಾ ರೀತಿಯ ಈರುಳ್ಳಿಯನ್ನು ರಫ್ತು ಮಾಡುವುದನ್ನು ನಿಷೇಧಿಸಿದೆ.


ದೇಶದಲ್ಲಿ ಈರುಳ್ಳಿ ಬೆಲೆ ಅಗ್ಗವಾಗಿಸಲು ಸರ್ಕಾರ ಕೈಗೊಂಡಿದೆ ಈ ನಿರ್ಧಾರ


ಬಾಂಗ್ಲಾದೇಶ (Bangladesh) ವಿದೇಶಾಂಗ ಸಚಿವಾಲಯವು ಢಾಕಾ ಮೂಲದ ಭಾರತ ಹೈಕಮಿಷನ್ ಮೂಲಕ ಕಳುಹಿಸಿದ ಪತ್ರದಲ್ಲಿ, "ಈ ಸಂಬಂಧ ಎರಡು ಸ್ನೇಹಪರ ರಾಷ್ಟ್ರಗಳ ನಡುವೆ 2020ರ ಸೆಪ್ಟೆಂಬರ್ 14 ರಂದು ಭಾರತ ಸರ್ಕಾರವು 2019 ಮತ್ತು 2020ರಲ್ಲಿ ಹಠಾತ್ ಘೋಷಣೆ ನಡೆಸಿತು ಮತ್ತು ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಭಾರತ ಸರ್ಕಾರ ಕೈಗೊಂಡಿರುವ ನಿರ್ಧಾರ ಬಾಂಗ್ಲಾದೇಶದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ತಿಳಿಸಿದೆ.


ಜೊತೆಗೆ ಈರುಳ್ಳಿ ರಫ್ತು ಪುನರಾರಂಭಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪತ್ರದಲ್ಲಿ ಕೋರಲಾಗಿದೆ. ಈ ಪತ್ರವನ್ನು ಬುಧವಾರ ಸಂಜೆ ತಡವಾಗಿ ಬಾಂಗ್ಲಾದೇಶ ಮಾಧ್ಯಮಗಳಿಗೆ ಲಭ್ಯಗೊಳಿಸಲಾಯಿತು.


ಎಚ್ಚರ! ಈಗ ಈರುಳ್ಳಿಯಿಂದ ಹರಡುತ್ತಿದೆಯಂತೆ ಹೊಸ ಸೋಂಕು


ಬಾಂಗ್ಲಾದೇಶ ಮಾರುಕಟ್ಟೆಯಲ್ಲಿ ಅಗತ್ಯ ಆಹಾರ ಪದಾರ್ಥಗಳ ಪೂರೈಕೆಯು ಪರಿಣಾಮ ಬೀರುತ್ತದೆ
ಈ ನಿಟ್ಟಿನಲ್ಲಿ ಭಾರತದ ಹಠಾತ್ ಘೋಷಣೆಯು ಬಾಂಗ್ಲಾದೇಶ ಮಾರುಕಟ್ಟೆಯಲ್ಲಿ ಅಗತ್ಯ ಆಹಾರ ಪದಾರ್ಥಗಳ ಪೂರೈಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.


ಪತ್ರದ ಪ್ರಕಾರ 2020ರ ಜನವರಿ 15–16 ರಂದು ಢಾಕಾದಲ್ಲಿ ನಡೆದ ಉಭಯ ದೇಶಗಳ ವಾಣಿಜ್ಯ ಸಚಿವಾಲಯಗಳ ಕಾರ್ಯದರ್ಶಿ ಮಟ್ಟದ ಸಭೆಯಲ್ಲಿ ಅಗತ್ಯ ಆಹಾರ ಪದಾರ್ಥಗಳ ಮೇಲೆ ರಫ್ತು ನಿರ್ಬಂಧ ಹೇರಬಾರದೆಂದು ಬಾಂಗ್ಲಾದೇಶ ಭಾರತವನ್ನು ಕೋರಿತ್ತು. ಅಂತಹ ನಿಷೇಧ ಅಗತ್ಯವಿದ್ದರೆ ಅದನ್ನು ಮೊದಲೇ ತಿಳಿಸುವಂತೆ ಬಾಂಗ್ಲಾದೇಶ ಭಾರತಕ್ಕೆ ಮನವಿ ಮಾಡಿತ್ತು.


2019 ರ ಅಕ್ಟೋಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಕೂಡ ಈ ವಿಷಯವನ್ನು ಪ್ರಸ್ತಾಪಿಸಿದ್ದರು.