Bird Nests in Woman Hair: ಕೂದಲಲ್ಲಿ ಗೂಡುಕಟ್ಟಿದ ಹಕ್ಕಿ, ಮಹಿಳೆಯ ಸ್ಥಿತಿ ಏನಾಯ್ತು ಗೊತ್ತಾ..!
Bird Nests in Woman Hair: ಯುಕೆ ಮೂಲದ ಹಾನಾ ಬೌರ್ನ್ ಟೇಲರ್ ಲಂಡನ್‌ನಿಂದ ಘಾನಾಗೆ ಸ್ಥಳಾಂತರಗೊಂಡಿದ್ದರು. ಇಲ್ಲಿ ಅವರು ಒಂದು ಸಣ್ಣ ಹಕ್ಕಿಯನ್ನು ಕಂಡುಕೊಂಡರು. ಈ ಹಕ್ಕಿಯೊಂದಿಗಿನ ಹನಾ ಅವರ ಸ್ನೇಹ ಎಷ್ಟು ಗಾಢವಾಯಿತು ಎಂದರೆ ಅವರ ಸ್ನೇಹ ಪ್ರಪಂಚದಾದ್ಯಂತ ಸುದ್ದಿಯಾಯಿತು.
Bird Nests in Woman Hair: ಬ್ರಿಟನ್‌ನಲ್ಲಿ ವಾಸಿಸುವ ಮಹಿಳೆಯೊಬ್ಬರು ಈಗ ಪ್ರಪಂಚದಾದ್ಯಂತ ಸುದ್ದಿಯಲ್ಲಿದ್ದಾರೆ. ವಾಸ್ತವವಾಗಿ, ಸಣ್ಣ ಹಕ್ಕಿಯೊಂದಿಗೆ ಈಕೆ ಸ್ನೇಹಿತರಾಗಿದ್ದರು. ಇದಾದ ಬಳಿಕ ಮಹಿಳೆಯ ಕೂದಲಿನಲ್ಲಿ ಹಕ್ಕಿ ಗೂಡು ಕಟ್ಟಿತ್ತು. ಹೆಂಗಸಿನ ಕೂದಲಲ್ಲಿ ಗೂಡು ಕಟ್ಟಿಕೊಂಡು 84 ದಿನಗಳ ಕಾಲ ಈ ಹಕ್ಕಿ ಅಲ್ಲಿಯೇ ಉಳಿದುಕೊಂಡಿತ್ತು ಎಂದು ತಿಳಿದರೆ ಅಚ್ಚರಿ ಆಗದೇ ಇರದು!
ಡೈಲಿ ಸ್ಟಾರ್‌ನ ಸುದ್ದಿ ಪ್ರಕಾರ, ಬ್ರಿಟನ್‌ನ ನಿವಾಸಿ ಹಾನಾ ಬೌರ್ನ್ ಟೇಲರ್ ಲಂಡನ್‌ನಿಂದ ಘಾನಾಗೆ ಸ್ಥಳಾಂತರಗೊಂಡಿದ್ದರು. ಇಲ್ಲಿ ಅವರಿಗೆ ಪುಟ್ಟ ಹಕ್ಕಿಯೊಂದು (Small Bird) ಸಿಕ್ಕಿತ್ತು. ಬಳಿಕ ಇವರು ಹಕ್ಕಿಯೊಂದಿಗೆ ಸ್ನೇಹ ಬೆಳೆಸಿದ್ದರು. ಈ ಹಕ್ಕಿಯೊಂದಿಗಿನ ಹಾನಾ ಅವರ ಸ್ನೇಹ ಎಷ್ಟು ಗಾಢವಾಯಿತು ಎಂದರೆ ಅವರ ಸ್ನೇಹ ಪ್ರಪಂಚದಾದ್ಯಂತ ಸುದ್ದಿಯಾಯಿತು.
ಇದನ್ನೂ ಓದಿ- Chimpanzee Dance: ಅಲ್ಲು ಅರ್ಜುನ್ ಸ್ಟೈಲ್ ನಲ್ಲಿ ಕುಣಿದು ಕುಪ್ಪಳಿಸಿದ ಚಿಂಪಾಂಜಿ
ಹಾನಾ 2013 ರಲ್ಲಿ ತನ್ನ ಪತಿಯೊಂದಿಗೆ ಘಾನಾಗೆ ತೆರಳಿದರು. ಪತಿ ರಾಬಿನ್ ತಮ್ಮ ಕೆಲಸದಲ್ಲಿ ನಿರತರಾಗಿದ್ದರಿಂದ ಹನಾಗೆ ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಹನಾ ಅವರಿಗೆ ತುಂಬಾ ಒಂಟಿತನ ಕಾಡುತ್ತಿತ್ತು. ತನ್ನ ಒಂಟಿತನವನ್ನು ಹೋಗಲಾಡಿಸಲು ಹನಾ ಪ್ರಕೃತಿಯೊಂದಿಗೆ ಬೆರೆಯಲು ಮನಸ್ಸು ಆರಂಭಿಸಿದರು. ಅಷ್ಟರಲ್ಲಿ ಘಾನಾಗೆ ಚಂಡಮಾರುತ ಅಪ್ಪಳಿಸಿತು. ಈ ಚಂಡಮಾರುತದ ಸಮಯದಲ್ಲಿ, ಅವರು ಪುಟ್ಟ ಹಕ್ಕಿಯೊಂದು ನೆಲದ ಮೇಲೆ ಮಲಗಿರುವುದನ್ನು ಕಂಡುಕೊಂಡರು. ಈ ಹಕ್ಕಿ ತನ್ನ ಹಿಂಡಿನಿಂದ ಬೇರ್ಪಟ್ಟಿದೆ ಎಂದು ಹಾನಾ ಹೇಳುತ್ತಾರೆ. ಚಂಡಮಾರುತದಲ್ಲಿ ಹಕ್ಕಿಯ ಗೂಡು ಕೂಡ ನಾಶವಾಗಿತ್ತು. ಹಾನಾ ಈ ಪಕ್ಷಿಯನ್ನು ಕಂಡುಕೊಂಡಾಗ, ಅವರು ತುಂಬಾ ದುರ್ಬಲಳಾಗಿದ್ದರಂತೆ...!
ಇದನ್ನೂ ಓದಿ- Viral Video: ಒಂದಲ್ಲ, 3 ಕೋಬ್ರಾ ಹಾವುಗಳ ಜೊತೆಗೆ ಯುವಕನ ಸ್ಟಂಟ್, ಮುಂದೇನಾಯ್ತು ನೀವೇ ನೋಡಿ
ಇನ್ನು ಪಕ್ಷಿ ಕುರಿತಂತೆ ಹಾನಾ ತಜ್ಞರೊಂದಿಗೆ ಮಾತನಾಡಿದಾಗ, ಕನಿಷ್ಠ 12 ವಾರಗಳ ನಂತರವೇ ಪಕ್ಷಿಯನ್ನು ಕಾಡಿಗೆ (Forest) ಕಳುಹಿಸಬಹುದು ಎಂದು ಅವರು ಹೇಳಿದ್ದರಂತೆ. ಇದಾದ ನಂತರ ಹಾನಾ ಈ ಹಕ್ಕಿಯ ಆರೈಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಹಕ್ಕಿಗಾಗಿ ಹಾನಾ ರಟ್ಟಿನ ಗೂಡನ್ನೂ ನಿರ್ಮಿಸಿದ್ದರು. ಈ ಸಂದರ್ಭದಲ್ಲಿ ಹಕ್ಕಿ ಕೂಡಾ ಹಾನಾಳನ್ನು ತುಂಬಾ ಹಚ್ಚಿಕೊಂಡಿತ್ತು. ವಿಚಿತ್ರವಾದ ಸಂಗತಿಯೆಂದರೆ, ಸದಾ ಹಾನಾ ಜೊತೆಗೆ ಕಾಲ ಕಳೆಯುತ್ತಿದ್ದ ಹಕ್ಕಿ ಆಕೆ ಮಲಗಿದ್ದಾಗ ಅವರ ಕೂದಲಿನಲ್ಲೇ ಗೂಡು ಕಟ್ಟಲು ಆರಂಭಿಸಿತ್ತು. ಪಕ್ಷಿ ತಮ್ಮ ಉದ್ದನೆಯ ಕೂದಲನ್ನು ಗೂಡಿನಂತೆ ಮಾಡಿ ಒಳಗೆ ಪ್ರವೇಶಿಸುತ್ತಿತ್ತು. ಹಾನಾ ಕೂಡ ಇದೊಂದು ಸುಂದರ ಅನುಭವ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.