Viral Video Of Cobra: ಹಾವುಗಳನ್ನು ಆಡಿಸುವುದು ಅಥವಾ ಅವುಗಳನ್ನು ಛೇಡಿಸುವುದು, ಎಷ್ಟೊಂದು ದುಬಾರಿಯಾಗಿ ಪರಿಣಮಿಸುತ್ತದೆ ಎಂಬುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ನೀವು ಅನೇಕ ಉದಾಹರಣೆಗಳನ್ನು ನೋಡಿರಬಹುದು. IFS ಅಧಿಕಾರಿ ಸುಶಾಂತ್ ನಂದಾ (Indian Forest Service officer Susanta Nanda) ಕೂಡ ಇತ್ತೀಚೆಗೆ ಅಂತಹ ವೀಡಿಯೊ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಒಂದಲ್ಲ, ಒಟ್ಟು ಮೂರು ನಾಗರ ಹಾವುಗಳೊಂದಿಗೆ ಸ್ಟಂಟ್ ಮಾಡುತ್ತಿರುವುದನ್ನು ನೀವು ನೋಡಬಹುದು. ಸ್ಟಂಟ್ ವೇಳೆ ಅವನು ಮಾಡುವ ಒಂದು ಸಣ್ಣ ತಪ್ಪು ಆತನ ಪಾಲಿಗೆ ದುಬಾರಿಯಾಗಿ ಪರಿಣಮಿಸುತ್ತದೆ. ವ್ಯಕ್ತಿಯ ಹೆಸರು ಮಾಜ್ ಸೈಯದ್ (Maaz Sayed) ಎಂದು ಹೇಳಲಾಗಿದೆ.
ವೈರಲ್ ಆಗುತ್ತಿರುವ ಈ ವೀಡಿಯೊದ ಆರಂಭದಲ್ಲಿ ಸೈಯದ್ ಮೂರು ನಾಗರ ಹಾವುಗಳನ್ನು ಸಾಲಿನಲ್ಲಿ ಕುಳ್ಳಿರಿಸಿ, ತಾನೂ ಕೂಡ ಹಾವುಗಳ ಮುಂದೆ ಕುಳಿತಿರುವುದನ್ನು ನೀವು ನೋಡಬಹುದು. ಇದರ ನಂತರ, ಅವನು ಮೊದಲು ಚಿಕ್ಕ ನಾಗರ ಹಾವಿನ ಬಾಲವನ್ನು ಎಳೆಯುತ್ತಾನೆ ಮತ್ತು ನಂತರ ಅದರ ಬಾಲವನ್ನು ಅತ್ತಿಂದಿತ್ತ ತಿರುಗಿಸಲು ಪ್ರಾರಂಭಿಸುತ್ತಾನೆ. ನಂತರ ಕುಳಿತುಕೊಂಡೆ ಆತ ತನ್ನ ಕೈಗಳನ್ನು ಮತ್ತು ಕಾಲುಗಳನ್ನು ಅಲ್ಲಾಡಿಸಲು ಆರಂಭಿಸುತ್ತಾನೆ. ಇದೇ ವೇಳೆ, ಅವನು ಇನ್ನೊಂದು ನಾಗರಹಾವನ್ನು ಹಿಡಿಯಲು ಯತ್ನಿಸಿದಾಗ, ಇದ್ದಕ್ಕಿದ್ದಂತೆ ಅವುಗಳಲ್ಲಿನ ಒಂದು ಹಾವು ಆತನ ಕಾಲಿನ ಮೇಲೆ ದಾಳಿ ಮಾಡುತ್ತದೆ. ಈ ದೃಶ್ಯ ನೋಡಿದವರ ಮೈ ಒಂದು ಕ್ಷಣ ಜುಂ ಎನ್ನುತ್ತದೆ.
ಇದನ್ನೂ ಓದಿ-Viral Video : ಎಷ್ಟು ದೂರ ಸರಿದರೂ ಮತ್ತೆ ಮತ್ತೆ ಸಿಂಹಕ್ಕೆ ಮುತ್ತಿಕ್ಕುತ್ತಿರುವ ಆಮೆ
ಹೇಗೆ ನಾಗರ ಹಾವು ವ್ಯಕ್ತಿಯ ಕಾಲನ್ನು ಗುರಿಯಾಗಿಸಿದೆ ಎಂಬುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಯುವಕ ತನ್ನನ್ನು ತಾನು ರಕ್ಷಿಸುವ ಪ್ರಯತ್ನ ಕೂಡ ನಡೆಸುತ್ತಾನೆ. ಆದರೆ, ಹಾವು ಇದರಲ್ಲಿ ತನ್ನ ಹಿಡಿತ ಸಾಧಿಸುತ್ತದೆ.
ಇನ್ನೊಂದೆಡೆ ವಿಡಿಯೋ ಅನ್ನು ಹಂಚಿಕೊಂಡಿರುವ IFS ಅಧಿಕಾರಿ, 'ಇದು ನಾಗರಹಾಗಿನ ಜೊತೆ ವ್ಯವಹರಿಸುವ ಒಂದು ಅಪಾಯಕಾರಿ ಮಾರ್ಗವಾಗಿದೆ' ಎಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ (Viral Video) ಆಗುತ್ತಿದೆ. ಇದುವರೆಗೆ ಲಕ್ಷಾಂತರ ಜನರು ವಿಡಿಯೋವನ್ನು ವೀಕ್ಷಿಸಿದ್ದಾರೆ ಮತ್ತು ಕಾಮೆಂಟ್ ಕೂಡ ಮಾಡುತ್ತಿದ್ದಾರೆ.
This is just horrific way of handling cobras…
The snake considers the movements as threats and follow the movement. At times, the response can be fatal pic.twitter.com/U89EkzJrFc— Susanta Nanda IFS (@susantananda3) March 16, 2022
ಇದನ್ನೂ ಓದಿ-Cheating Case: ಪತಿಗೆ ಮದುವೆಯ ಮೊದಲ ರಾತ್ರಿಯ ವಿಡಿಯೋ ವೈರಲ್ ಮಾಡುವುದಾಗಿ ಧಮ್ಕಿ ಹಾಕಿದ ಪತ್ನಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.