Labor Pain On Marriage Day: ಮದುವೆಯ ದಿನವೇ ವಧುವಿಗೆ ಹೆರಿಗೆ ನೋವು ಶುರುವಾಯ್ತು ಮತ್ತು ವಿವಾಹದ ಎಲ್ಲಾ ವಿಧಾನಗಳನ್ನು ಆಸ್ಪತ್ರೆಯಲ್ಲಿಯೇ ನೆರವೇರಿಸಲಾಯಿತು ಎಂಬುದನ್ನು ಎಲ್ಲಾದರೂ ಕೇಳಿದ್ದೀರಾ. ಹೌದು, ಇಂತಹದ್ದೊಂದು ಘಟನೆ ನೆದರ್ಲ್ಯಾಂಡ್ ನ ಡೋಡ್ರೆಕ್ ನಗರದಲ್ಲಿ ನಡೆದಿದೆ. ನಗರದಲ್ಲಿ ನಿಕೊಲ್ ಮತ್ತು ಮಾರ್ಕ್ ಹೆಸರಿನ ದಂಪತಿಗಳ ವಿವಾಹ ನೆರವೇರಬೇಕಿತ್ತು. ಆದರೆ, ನಿಕೊಲ್ ಮೊದಲೇ ಪ್ರೆಗ್ನೆಂಟ್ ಆಗಿದ್ದಳು. ಅದನ್ನು ಗಮನದಲ್ಲಿಟ್ಟುಕೊಂಡೇ ಇಬ್ಬರು ವಿವಾಹದ ಪ್ಲಾನಿಂಗ್ ಮಾಡಿಕೊಂಡಿದ್ದರು. ಆದರೆ, ಹುಟ್ಟುವ ಮಗುವಿಗೂ ಕೂಡ ತನ್ನ ಪೋಷಕರ ವಿವಾಹದಲ್ಲಿ ಶಾಮೀಲಾಗುವ ಬಯಕೆ ಎಂಬಂತೆ ತೋರುತ್ತಿದೆ . ಏಕೆಂದರೆ ವೈದ್ಯರು ನೀಡಿದ ದಿನಾಂಕದ 5 ವಾರ ಮುನ್ನವೇ ನಿಕೊಲ್ ಗೆ ಹೆರಿಗೆ ನೋವು ಶುರುವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Swarm Of Bees: ಯುವಕನ ಕೈಮೇಲೆ ಗೂಡು ಕಟ್ಟಿದ ಜೇನುನೊಣಗಳು... ವಿಡಿಯೋ ನೋಡಿ

ಬದಲಾಯಿತು ಯೋಜನೆ
ನೆದರ್ಲ್ಯಾಂಡ್ಸ್ ಮೂಲದ ನಿಕೋಲ್ ಮತ್ತು ಮಾರ್ಕ್ ತಮ್ಮ ಮದುವೆಯನ್ನು ಅಕ್ಟೋಬರ್ 26 ರಂದು ಯೋಜಿಸಿದ್ದರು. ಆದರೆ ಅದೇ ದಿನ ನಿಕೋಲ್ ಗೆ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಅವಸರದಲ್ಲಿ, ಮಾರ್ಕ್ ಮತ್ತು ನಿಕೋಲ್ ತಮ್ಮ ಯೋಜನೆಯನ್ನು ಬದಲಾಯಿಸಿದ್ದಾರೆ. ಆದರೆ, ಈ ಎಲ್ಲಾ ವಿಷಯಗಳ ಹೊರತಾಗಿಯೂ, ಇಬ್ಬರೂ ಅದೇ ದಿನ ಮದುವೆಯಾಗಲು ನಿರ್ಧರಿಸಿದ್ದಾರೆ. ಆಗ ಇಡೀ ಆಸ್ಪತ್ರೆಯೇ ಮದುವೆಯ ತಾಣವಾಗಿ ಮಾರ್ಪಟ್ಟಿದೆ ಮತ್ತು ಮಾರ್ಕ್ ಮತ್ತು ನಿಕೋಲ್ ಪರಸ್ಪರರ ಒಪ್ಪಿಕೊಳ್ಳುವ ಮೂಲಕ ಆಲ್ಬರ್ಟ್ ಶ್ವೀಟ್ಜರ್ ಆಸ್ಪತ್ರೆಯಲ್ಲಿ ವಿವಾಹವಾಗಿದ್ದಾರೆ.


ಇದನ್ನೂ ಓದಿ-Viral News: ನೋಡನೋಡುತ್ತಲೇ ಮಹಿಳೆಯನ್ನ ಗಬಕ್ಕನೆ ನುಂಗಿದ ಹೆಬ್ಬಾವು: ಭಯಾನಕ ದೃಶ್ಯ ನೋಡಿ


ಆಸ್ಪತ್ರೆಯ ಪ್ರಾರ್ಥನಾ ಕೊಠಡಿಯಲ್ಲಿ ಮದುವೆ
ಆಸ್ಪತ್ರೆಯ ಪ್ರಾರ್ಥನಾ ಕೊಠಡಿಯಲ್ಲಿ ಇಬ್ಬರ ವಿವಾಹ ವಿಧಿವಿಧಾನಗಳ ಮೂಲಕ ನೆರವೇರಿದೆ. ಇಬ್ಬರೂ ಮದುವೆಗೆ ಅತಿಥಿಗಳನ್ನು ಕೂಡ ಕರೆದಿದ್ದ ಕಾರಣ. ಇಂತಹ ಪರಿಸ್ಥಿತಿಯಲ್ಲಿ ಅತಿಥಿಗಳು ಕೂಡ ಮೊದಲೇ ನಿರ್ಧರಿಸಿದ್ದ ಮದುವೆ ಸ್ಥಳದ ಬದಲು ಆಸ್ಪತ್ರೆ ತಲುಪಿದ್ದಾರೆ. ಅಷ್ಟೇ ಅಲ್ಲ, ಸಿವಿಲ್ ರಿಜಿಸ್ಟ್ರಿ ಆಫೀಸರ್ ಕೂಡ ಸ್ವತಃ ಆಸ್ಪತ್ರೆಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ರಿಜಿಸ್ಟ್ರಿ ಆಫೀಸರ್ ದಂಪತಿಗೆ ನಿಮ್ಮಿಬ್ಬರ ಮದುವೆಯ ದಿನಾಂಕವನ್ನು ಜೀವನ ಪರ್ಯಂತ ಮರೆಯುವುದಿಲ್ಲ ಎಂದು ಹೆಲಿಒದ್ದಾರೆ. ಇಂದಿನಿಂದ ಪ್ರತಿ ವರ್ಷ ಈ ದಿನವು ನಿಮಗೆ ಡಬಲ್ ಆಚರಣೆಯ ದಿನಾಂಕವಾಗಿರುತ್ತದೆ ಎಂದು ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ