ನ್ಯೂಯಾರ್ಕ್‌ನ ಸ್ಟೇಟನ್ ಐಲ್ಯಾಂಡ್‌ನಲ್ಲಿ ನಡೆದ ಮೊಟ್ಟಮೊದಲ ಮಿಸ್ ಶ್ರೀಲಂಕಾ ಸೌಂದರ್ಯ ಸ್ಪರ್ಧೆಯಲ್ಲಿ ಭಾರೀ ಕೋಲಾಹಲ ಕಂಡುಬಂದಿತ್ತು. ಸುಮಾರು 300 ಅತಿಥಿಗಳು ಭಾಗವಹಿಸಿದ್ದ ಕಾರ್ಯಕ್ರಮವು ಹುಚ್ಚು ಕಾದಾಟದಲ್ಲಿ ಕೊನೆಗೊಂಡಿತು.
ಇದನ್ನೂ ಓದಿ: ಭೋಪಾಲ್‌ನಲ್ಲಿ ನೀರಿನ ಟ್ಯಾಂಕ್‌ನಿಂದ ಕ್ಲೋರಿನ್ ಗ್ಯಾಸ್ ಸೋರಿಕೆ: ಹಲವರು ಆಸ್ಪತ್ರೆಗೆ ದಾಖಲು
ನ್ಯೂಯಾರ್ಕ್‌ನಲ್ಲಿರುವ ಸ್ಟೇಟನ್ ದ್ವೀಪವು ಯುನೈಟೆಡ್ ಸ್ಟೇಟ್ಸ್‌ಗೆ (US) ವಲಸೆ ಬಂದ ಅನೇಕ ಶ್ರೀಲಂಕಾದವರಿಗೆ ನೆಲೆಯಾಗಿದೆ. ಸಂಘಟಕರ ಪ್ರಕಾರ, ಶ್ರೀಲಂಕಾದ ಸಂಸ್ಥೆಯೊಂದಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆದರೆ ಇಲ್ಲಿ ಅತಿಥಿಗಳು ಪರಸ್ಪರ ಕಾದಾಡಿಕೊಂಡು ಅಪಕೀರ್ತಿ ತಂದಿದ್ದಾರೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಘರ್ಷಣೆಗೆ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ, ಇನ್ನು ಈ ಘಟನೆಗೆ ಕಾರಣರಾದವರನ್ನು ಬಂಧಿಸಲಾಗಿದೆ.
Miss Sri Lanka New York after party. 🤦♂️🤦♂️🤦♂️🤦♂️🤦♂️👊🤛 pic.twitter.com/VIG09wgSPx
— Under The Coconut Tree (@Toddy_Lad) October 23, 2022
ಸ್ಪರ್ಧೆಯ ಸಂಘಟಕರಲ್ಲಿ ಒಬ್ಬರಾದ ಸುಜಾನಿ ಫೆರ್ನಾಂಡೋ ನ್ಯೂಯಾರ್ಕ್ ಪೋಸ್ಟ್‌ನೊಂದಿಗೆ ಮಾತನಾಡಿದ್ದು, 14 ಸ್ಪರ್ಧಿಗಳಲ್ಲಿ ಯಾರೂ ಜಗಳದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದರು. “ಶ್ರೀಲಂಕಾದವರು ಒಳ್ಳೆಯ ಜನರು. ಇಂತಹ ಗಲಾಟೆಗಳೂ ಎಲ್ಲಾ ಸಂಸ್ಕೃತಿಯಲ್ಲಿ, ರಾಷ್ಟ್ರೀಯತೆಯಲ್ಲಿ ನಡೆಯುತ್ತದೆ. ಅದು ಶ್ರೀಲಂಕನ್ನರಾಗಿರಬೇಕಾಗಿಲ್ಲ. ನಾವು ಅಂತಹ ಜನರಲ್ಲ” ಎಂದು ಹೇಳಿದ್ದಾರೆ.
ಈ ಘಟನೆಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಖಂಡಿಸಿದ್ದಾರೆ. "ಸಂಪೂರ್ಣವಾಗಿ ಅವಮಾನಕರ" ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರರು ವೀಡಿಯೊಗೆ ಹೀಗೆ ಪ್ರತಿಕ್ರಿಯಿಸಿದ್ದು, "ಶ್ರೀಲಂಕಾದ ಸೌಂದರ್ಯ ಸ್ಪರ್ಧೆಗಳು ಸಾಮಾನ್ಯವಾಗಿ ಜಗಳಗಳಲ್ಲಿ ಕೊನೆಗೊಳ್ಳುತ್ತವೆ. ಅಸಾಮಾನ್ಯ ಏನೂ ಇಲ್ಲ" ಎಂದಿದ್ದಾರೆ.
ಇದನ್ನೂ ಓದಿ: Donkey Mela: ಕತ್ತೆಗಳ ಈ ಸಂತೆಯಲ್ಲಿ ಯಾವ ಬೆಲೆಗೆ ಮಾರಾಟವಾದ್ರು 'ಶಾರುಕ್', 'ಸಲ್ಮಾನ್', 'ಕತ್ರೀನಾ' ಗೊತ್ತಾ?
ದೇಶದ ಕ್ಯಾನ್ಸರ್ ಆಸ್ಪತ್ರೆಗೆ ನಿಧಿ ಸಂಗ್ರಹಿಸಲು ನಡೆದ ಸ್ಪರ್ಧೆಯಲ್ಲಿ ಮಿಸ್ ಶ್ರೀಲಂಕಾ ನ್ಯೂಯಾರ್ಕ್ ಏಂಜೆಲಿಯಾ ಗುಣಶೇಖರ ಕಿರೀಟವನ್ನು ಪಡೆದರು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.