Omicron New Symptoms: ದೇಶದಲ್ಲಿ ಕೊರೊನಾವೈರಸ್‌ನ ಮೂರನೇ ಅಲೆ ಉತ್ತುಂಗದಲ್ಲಿದೆ. ಏತನ್ಮಧ್ಯೆ, ಓಮಿಕ್ರಾನ್ ರೂಪಾಂತರಿಯ ಹೊಸ ಲಕ್ಷಣಗಳು ಇದೀಗ ಬೆಳಕಿಗೆ ಬರುತ್ತಿವೆ.


COMMERCIAL BREAK
SCROLL TO CONTINUE READING

ಸಂಶೋಧನೆಯಲ್ಲಿ ಬಹಿರಂಗಗೊಂಡ ಹೊಸ ಲಕ್ಷಣಗಳಿವು
'ದಿ ಸನ್' ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಓಮಿಕ್ರಾನ್ ರೂಪಾಂತರಿ ಕುರಿತು  ನಡೆಸಲಾಗುತ್ತಿರುವ ಸಂಶೋಧನೆಯಲ್ಲಿ ಹೊಸ ಲಕ್ಷಣಗಳು (Coronavirus New Symptom)  ಬಹಿರಂಗಗೊಂಡಿವೆ. ಈ ರೂಪಾಂತರಿ ಮೆದುಳು, ಹೃದಯ, ಕಣ್ಣುಗಳು ಮತ್ತು ಕಿವಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ಈ ರೂಪಾಂತರದಿಂದ ಬಳಲುತ್ತಿರುವ ಅನೇಕ ರೋಗಿಗಳಲ್ಲಿ, ಕಿವಿಗಳಲ್ಲಿ ಜುಮ್ಮೆನಿಸುವಿಕೆ, ಶಿಳ್ಳೆ ಅಥವಾ ಘಂಟೆಗಳ ನಾದ ಕೇಳಿಸುವುದು (Ear Problem) ಮುಂತಾದ ಲಕ್ಷಣಗಳು ವರದಿಯಾಗಿವೆ. ಇದರೊಂದಿಗೆ, ಈ ರೂಪಾಂತರದಿಂದ ಬಳಲುತ್ತಿರುವ ರೋಗಿಗಳಲ್ಲಿ ಶೀತದಂತಹ ಲಕ್ಷಣಗಳು ಕಂಡುಬರುತ್ತವೆ.


ಕಿವಿಗಳಲ್ಲಿ ಶ್ರವಣ ದೋಷ ಉಂಟಾಗುತ್ತದೆ!
ವರದಿಯ ಪ್ರಕಾರ, ಹೆಚ್ಚಿನ ರೋಗಿಗಳಲ್ಲಿ ಇಂತಹ ಸಮಸ್ಯೆಗಳು ಕಂಡುಬರುತ್ತಿವೆ, ಅವರಲ್ಲಿ ಹೆಚ್ಚಿನವರು ಕರೋನಾ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಪ್ರಕಾರ, ಒಬ್ಬ ವ್ಯಕ್ತಿಗೆ ಕಳೆದ ಕೆಲವು ದಿನಗಳಲ್ಲಿ ಇದ್ದಕ್ಕಿದ್ದಂತೆ ಕಿವಿ ನೋವು ಕಾಣಿಸಿಕೊಂಡರೆ, ಜುಮ್ಮೆನಿಸುವಿಕೆ, ಶ್ರವಣ ಶಕ್ತಿ ಕಡಿಮೆಯಾದರೆ ಅಥವಾ ತಲೆತಿರುಗುವಿಕೆ ಪ್ರಾರಂಭವಾದರೆ, ಆ ಲಕ್ಷಣಗಳು ನಿರ್ಲಕ್ಷಿಸಬಾರದು ಎಂದು ಹೇಳಿದ್ದಾರೆ. 


ಇದನ್ನೂ ಓದಿ-Strangest Insurance Claims: 300 ವರ್ಷಗಳ ಇತಿಹಾಸದಲ್ಲೇ ವಿಚಿತ್ರ Insurance Claim, ಗ್ರಾಹಕರ ಹಕ್ಕು ಮಂಡನೆಗೆ ಬೆಚ್ಚಿಬಿದ್ದ ಕಂಪನಿ


ಹೊಸ ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ
ವೈದ್ಯರ ಪ್ರಕಾರ, ಅಂತಹ ಸಂದರ್ಭಗಳಲ್ಲಿ, ರೋಗಿಯು ತಕ್ಷಣ ಹತ್ತಿರದ ಆಸ್ಪತ್ರೆಗೆ ಹೋಗಿ ತನ್ನ ಕರೋನವೈರಸ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಕರೋನಾ ಸೋಂಕಿತರಾದ ಅನೇಕ ರೋಗಿಗಳಲ್ಲಿ ಈ ಎಲ್ಲಾ ಲಕ್ಷಣಗಳು ಕಂಡುಬಂದಿವೆ. ವಿಶೇಷವಾಗಿ ಕಿವಿಯಿಂದ ಹಠಾತ್ ಶ್ರವಣ ಶಕ್ತಿ ಕಡಿಮೆಯಾಗುವ ಲಕ್ಷಣ ಹೆಚ್ಚು ಕಂಡುಬಂದಿದೆ.  ಆದರೂ ಕೂಡ, ಇದು ಚಿಕಿತ್ಸೆಯ ನಂತರ ಗುಣಪಡಿಸಬಹುದಾದ ರೋಗಲಕ್ಷಣವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.


ಇದನ್ನೂ ಓದಿ-Third World War Fear: 3ನೇ ಮಹಾಯುದ್ಧದ ಮುನ್ಸೂಚನೆಯೇ ಇದು! ಪೂರ್ವ ಯುರೋಪ್ ಗೆ NATO ವತಿಯಿಂದ ಯುದ್ಧ ಸಾಮಗ್ರಿಗಳ ರವಾನೆ


ಓಮಿಕ್ರಾನ್ ಕೂಡ ಕರುಳಿನ ಮೇಲೆ ದಾಳಿ ಮಾಡುತ್ತದೆ
ವರದಿಯ ಪ್ರಕಾರ, ಪ್ರೊಫೆಸರ್ ಟಿಮ್ ಸ್ಪೆಕ್ಟರ್ ಈ ರೂಪಾಂತರ ನಿಮ್ಮ ಮೂಗಿನ ಜೊತೆಗೆ  ನಿಮ್ಮ ಕರುಳಿನಲ್ಲಿ ಕೂಡ ಅಡಗಿ ಕುಳಿತಿರುವ ಸಾಧ್ಯತೆ ಇದೆ ಎಂದಿದ್ದಾರೆ. ಇದಕ್ಕೆ ಕಾರಣವೆಂದರೆ ಮೂಗು ಅಥವಾ ಬಾಯಿಯಿಂದ ಕರೋನವೈರಸ್ ಪರೀಕ್ಷೆಯನ್ನು ಮಾಡಿದ ನಂತರ ಅನೇಕ ಬಾರಿ ನೆಗೆಟಿವ್ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಆಗಾಗ್ಗೆ ಹೊಟ್ಟೆ ನೋವು ಅನುಭವಿಸಿದರೆ, ನೀವು ಈ ರೋಗಲಕ್ಷಣವನ್ನು ವೈದ್ಯರೊಂದಿಗೆ ಹಂಚಿಕೊಳ್ಳಬೇಕು. ಇದರ ನಂತರ, ಅವರು ಪರೀಕ್ಷೆಗೆ ಒಳಪಟ್ಟು ಕರೋನವೈರಸ್ನ ಈ ರೂಪಾಂತರದ ಚಿಕಿತ್ಸೆಯನ್ನು ಪ್ರಾರಂಭಿಸಬೇಕು ಎಂದು ಅವರು ಹೇಳಿದ್ದಾರೆ. 


ಇದನ್ನೂ ಓದಿ-Trending News: Internet ನಲ್ಲಿ ಎಲ್ಲರ ತಲೆ ಗಿರಕಿ ಹೊಡೆಸಿದ 7 ಆನೆಗಳ ಫೋಟೋ, ನಿಮಗೆಷ್ಟು ಆನೆಗಳು ಕಾಣಿಸುತ್ತಿವೆ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.