ಮೆಕ್ಸಿಕೊ ನಗರ: ವರ್ಷದಿಂದ ಮೆರೆಯುತ್ತಿರುವ ಕರೋನಾವೈರಸ್ ಎಂಬ ಮಹಾಮಾರಿಯ ಅಟ್ಟಹಾಸ ಕಡಿಮೆ ಮಾಡಲು ಇಡೀ ಜಗತ್ತೇ ಲಸಿಕೆಗಾಗಿ ಎದುರು ನೋಡುತ್ತಿತ್ತು. ಇದೀಗ ಕರೋನಾವೈರಸ್ ತಡೆಗಟ್ಟುವಿಕೆಗಾಗಿ ಕೋವಿಡ್ -19 ಲಸಿಕೆ ಏನೋ ಬಂದಿವೆ. ಲಸಿಕೆ ಬಂದ ಬಳಿಕ ಸಾಂಕ್ರಾಮಿಕ ರೋಗದ ಪರಿಣಾಮ ಕಡಿಮೆಯಾಗಲಿದೆ ಎಂದು ವಿಶ್ವದಾದ್ಯಂತ ಹಲವು ಮಂದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಆದಾಗ್ಯೂ ಲಸಿಕೆ ಪಡೆಯುವ ಎಲ್ಲರೂ ಸಂಪೂರ್ಣವಾಗಿ ಸುರಕ್ಷಿತರೆಂದು ಹೇಳಲಾಗುವುದಿಲ್ಲ. ಏಕೆಂದರೆ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ಇತ್ತೀಚಿಗೆ ಸಾಕಷ್ಟು ವರದಿಯಾಗುತ್ತಿದೆ. ಏತನ್ಮಧ್ಯೆ, ಫಿಜರ್ ಲಸಿಕೆ ಬಗ್ಗೆ ಮೆಕ್ಸಿಕೊದಲ್ಲಿ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೋವಿಡ್ -19 ರ ಫಿಜರ್ ಲಸಿಕೆ (Pfizer vaccine) ಪಡೆದ ನಂತರ ಮಹಿಳಾ ವೈದ್ಯೆಯೊಬ್ಬರು ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ.


ಇದನ್ನೂ ಓದಿ : COVID Vaccine ತೆಗೆದುಕೊಳ್ಳುವ ಬಗ್ಗೆ ಜನ ಏನೇಳುತ್ತಾರೆ ಗೊತ್ತಾ?


ವೈದ್ಯೆಗೆ ಅಲರ್ಜಿ ಇತ್ತು : 
ಮೆಕ್ಸಿಕೊದಲ್ಲಿ ಮಹಿಳಾ ವೈದ್ಯ ಡಾ. ಕಾರ್ಲಾ ಎಂಬುವವರಿಗೆ ಕೋವಿಡ್ -19 ಲಸಿಕೆ (Covid 19 Vaccine) ಪಡೆದ ಅರ್ಧ ಘಂಟೆಯ ನಂತರ ದೇಹದಲ್ಲಿ ಅಲರ್ಜಿ ಉಂಟಾಗಿದ್ದು ನಂತರ ಸೆಳೆತ ಮತ್ತು ದೌರ್ಬಲ್ಯ ಕಾಣಿಸಿಕೊಂಡಿದೆ. ಇದಲ್ಲದೆ ಮಹಿಳೆಗೆ ಉಸಿರಾಟದ ತೊಂದರೆಯೂ ಇತ್ತು, ಬಳಿಕ ಆಕೆಯನ್ನು ಐಸಿಯುಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. 


ಡಾ. ಕಾರ್ಲಾ ಅವರ ಮೆದುಳು ಮತ್ತು ಬೆನ್ನುಹುರಿಯ ಉರಿಯೂತ (Encephalomyelitis) ಗೆ ಚಿಕಿತ್ಸೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಲಸಿಕೆ ತೆಗೆದುಕೊಳ್ಳುವ ಮೊದಲು ಡಾ. ಕಾರ್ಲಾ ಅವರು ಅಲರ್ಜಿಯನ್ನು ಹೊಂದಿದ್ದರು. ಹಾಗಾಗಿಯೇ ಲಸಿಕೆಯಿಂದ ಅವರಿಗೆ ತೀವ್ರ ಅಡ್ಡಪರಿಣಾಮ ಉಂಟಾಗಿದೆ ಎಂದು ಉನ್ನತ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ : COVID vaccineನಲ್ಲಿ ಹಂದಿ ಮಾಂಸ : ವದಂತಿಗೆ ತೆರೆಯೆಳೆಯಲು ಮುಂದಾದ ಮುಸ್ಲಿಂ ಸಮುದಾಯ


ಲಸಿಕೆ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ ಕುಟುಂಬ :
ಅನಾರೋಗ್ಯದ ಮಹಿಳಾ ವೈದ್ಯರ ಕುಟುಂಬ ಸದಸ್ಯರು ಲಸಿಕೆಯ ಗಂಭೀರ ಅಡ್ಡಪರಿಣಾಮಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಕೋರಿದ್ದಾರೆ. ಇದರ ನಂತರ ಮೆಕ್ಸಿಕೊದ ಆರೋಗ್ಯ ಸಚಿವಾಲಯವು ಲಸಿಕೆಗೆ ಸಂಬಂಧಿಸಿದ ಪ್ರಕರಣದ ತನಿಖೆ ಪ್ರಾರಂಭಿಸಿದೆ. "ಲಸಿಕೆಯಿಂದಾಗಿಯೇ ಡಾ. ಕಾರ್ಲಾ ಅವರಿಗೆ ಪಾರ್ಶ್ವವಾಯು ಉಂಟಾಗಿದೆ ಎಂಬುದಕ್ಕೆ ಯಾವುದೇ ನಿಖರವಾದ ಕಾರಣ ಕಂಡು ಬಂದಿಲ್ಲ" ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.


ಆದಾಗ್ಯೂ ಮಹಿಳಾ ವೈದ್ಯರಲ್ಲಿ ಕಾಣಿಸಿಕೊಂಡಿರುವ ಈ ಅಡ್ಡಪರಿಣಾಮಗಳು ಕರೋನಾ ಲಸಿಕೆ (Corona Vaccine) ಯಿಂದಲೇ ಸಂಬಂಧಿಸಿವೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ತನಿಖೆ ನಡೆಸುವುದು ಬಹಳ ಮುಖ್ಯ. ಸರಿಯಾದ ಕಾರಣವನ್ನು ಕಂಡುಹಿಡಿಯಲು ಸಂಶೋಧನೆ ಅಗತ್ಯವಿದೆ ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.