ಆಕ್ಸ್ಫರ್ಡ್ / ಅಸ್ಟ್ರಾಜೆನೆಕಾ ಅಥವಾ ಫಿಜರ್ ಲಸಿಕೆಯ ಎರಡು ಪ್ರಮಾಣಗಳು ಭಾರತದಲ್ಲಿ ಮೊದಲು ಪತ್ತೆಯಾದ COVID-19 ರ B1.617.2 ರೂಪಾಂತರದಿಂದ ಸೋಂಕನ್ನು ತಡೆಗಟ್ಟುವಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಪರಿಣಾಮಕಾರಿ ಎಂದು ಯುಕೆ ಸರ್ಕಾರದ ಹೊಸ ಅಧ್ಯಯನವು ಕಂಡುಹಿಡಿದಿದೆ.
Vaccine Mix And Match Study - ಸ್ಪೇನ್ ನಲ್ಲಿ ಅಸ್ಟ್ರಾಜೆನಿಕಾ ವ್ಯಾಕ್ಸಿನ್ ನ ಮೊದಲ ಡೋಸ್ ನೀಡಿದವರಿಗೆ ಫೈಜರ್ ಲಸಿಕೆಯನ್ನು ಎರಡನೇ ಡೋಸ್ ರೂಪದಲ್ಲಿ ನೀಡಲಾಗುವುದು. ಅಲ್ಲಿನ ಆರೋಗ್ಯ ಸಚಿವರ ಈ ಪ್ರಸ್ತಾವನೆಗೆ ಅಲ್ಲಿನ ಜನ ಆರೋಗ್ಯ ಆಯೋಗ ಅನುಮೊಂದನೆ ನೀಡಿದೆ.
23 ವರ್ಷದ ಇಟೆಲಿಯ ಯುವತಿಗೆ ಫೈಜರ್ ಬಯೋಟೆಕ್ ಕಂಪನಿಯ ಫೈಜರ್ ವ್ಯಾಕ್ಸಿನ್ 6 ಡೋಸ್ ನೀಡಲಾಗಿದೆ. ಅದು ಕೂಡಾ ಒಂದೇ ಸಲಕ್ಕೆ. ವ್ಯಾಕ್ಸಿನ್ ಸೆಂಟರ್ ನಲ್ಲಿರುವ ನರ್ಸ್ ಮಾಡಿದ ತಪ್ಪಿಗೆ ಈ ಯುವತಿ ಬೆಲೆ ತೆರಬೇಕಾಗಿದೆ.
Foreigner Vaccine - ಫೈಜರ್ (Pfizer), ಮಾಡರ್ನಾ (Moderna) ಮತ್ತು ಜಾನ್ಸನ್ ಅಂಡ್ ಜಾನ್ಸನ್ ಕಂಪನಿಗಳು ತಯಾರಿಸಿರುವ ಲಸಿಕೆಗಳು ಶೀಘ್ರದಲ್ಲೇ ಭಾರತದ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಸೇರ್ಪಡೆಯಾಗಲಿವೆ. ಏಕೆಂದರೆ ಭಾರತದಲ್ಲಿ ಈ ಲಸಿಕೆಗಳಿಗೆ ಅನುಮತಿ ನೀಡುವ ಕುರಿತು ನ್ಯಾಷನಲ್ ಎಕ್ಸ್ ಪರ್ಟ್ ಗ್ರೂಪ್ ಆನ್ ವ್ಯಾಕ್ಸಿನ್ ಅಡ್ಮಿನಿಸ್ಟ್ರೆಶನ್ ಫಾರ್ Covid 19 ನೀಡಿರುವ ಸಲಹೆಗಳನ್ನು ಭಾರತ ಸರ್ಕಾರ ಒಪ್ಪಿಕೊಂಡಿದೆ. ಇದರಿಂದಾಗಿ ವಿದೇಶಿ ವ್ಯಾಕ್ಸಿನ್ ಗಳ ಭಾರತ ಪ್ರವೇಶಕ್ಕೆ ದಾರಿ ಸುಗಮವಾದಂತಾಗಿದೆ.
ಫಿಜರ್ನ COVID-19 ಲಸಿಕೆಗಳನ್ನು ಹೊತ್ತ ಮೊದಲ ಟ್ರಕ್ಗಳು ಭಾನುವಾರ ಮಿಚಿಗನ್ ಉತ್ಪಾದನಾ ಕೇಂದ್ರದಿಂದ ಹೊರಬಂದಿದ್ದು, ಫಿಜರ್ ಲಸಿಕೆಯ ಸಾಗಣೆಗಳು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಇತಿಹಾಸದಲ್ಲಿ ಅತಿದೊಡ್ಡ ಲಸಿಕಾ ಕಾರ್ಯಕ್ರಮಕ್ಕೆ ಸಹಕಾರಿಯಾಗಲಿವೆ.ಕಾರ್ಖಾನೆಯಿಂದ ಅದರ ಅಂತಿಮ ಸ್ಥಾನಕ್ಕೆ ಸಾಗಣೆಯನ್ನು ಯುಎಸ್ ಮಾರ್ಷಲ್ಗಳ ಸುರಕ್ಷತೆಯಡಿಯಲ್ಲಿ ತಲುಪಿಸಲಾಗುವುದು ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.