ನವದೆಹಲಿ: ಕೋವಿಡ್ ಲಸಿಕೆ (Covid Vaccine)ಗಳಲ್ಲಿ ಹಂದಿ ಮಾಂಸದ ಅಂಶ (Essence of Pork) ಇದೆ ಎಂಬ ಗಾಳಿ ಸುದ್ದಿಗೆ ಕಿವಿಗೊಡದಂತೆ ಜಮಾತ್-ಎ-ಇಸ್ಲಾಂ-ಹಿಂದ್ (JIH) ಮಂಡಳಿ ಪ್ರಕಟಣೆ ಹೊರಡಿಸಿದೆ.
ಕೊರೋನಾ ಲಸಿಕೆಗಳಲ್ಲಿ ಹಂದಿ ಮಾಂಸದ ಅಂಶವಿದೆ. ಹಂದಿ ಮಾಂಸ ಸೇವನೆ ಧರ್ಮ ನಿಷಿದ್ಧವಾಗಿರುವ ಕಾರಣ ಮುಸ್ಲಿಮರು ಲಸಿಕೆ ಪಡೆಯಬಾರದು ಎಂಬ ವದಂತಿ ಎದ್ದಿದೆ. ಈ ಹಿನ್ನಲೆಯಲ್ಲಿ ಸ್ಪಷ್ಟೀಕರಣ ನೀಡಿರುವ ಜಮಾತ್-ಎ-ಇಸ್ಲಾಂ-ಹಿಂದ್, 'ಇದು ಆಧಾರರಹಿತ ಸುದ್ದಿ' ಎಂದು ಹೇಳಿದೆ.
ಕೊರೋನಾ ಲಸಿಕೆ (Corona Vaccine) ಗಳನ್ನು ಉತ್ಪಾದಿಸುತ್ತಿರುವ ಕಂಪನಿಗಳು 'ಲಸಿಕೆ ತಯಾರಿಕೆಯಲ್ಲಿ ಯಾವುದೇ ಬಗೆಯ ಹಂದಿ ಮಾಂಸ ಬಳಕೆ ಮಾಡುತ್ತಿಲ್ಲ. ಲಸಿಕೆಯನ್ನು ಸುರಕ್ಷಿತವಾಗಿ ಸಂಗ್ರಹಿಸಿಟ್ಟು ಸಾಗಾಣೆ ಮಾಡಲು ಹಂದಿ ಮಾಂಸದಿಂದ ತಯಾರಿಸಿದ ಜೆಲಾಟಿನ್ ಅನ್ನು ಸ್ಟೆಬಲೈಸರ್ ಆಗಿ ಬಳಕೆ ಮಾಡಲಾಗುತ್ತಿದೆಯಷ್ಟೇ' ಎಂದು ಸ್ಪಷ್ಟಪಡಿಸಿವೆ. ಅಲ್ಲದೆ ಇಸ್ಲಾಂ ಧರ್ಮದಲ್ಲಿ ಹಂದಿ ಮಾಂಸ ಮತ್ತು ಹೆಂಡವನ್ನು ನಿಷೇಧಿಸಿರುವುದು ಅವುಗಳನ್ನು ತಿನ್ನಲು ಮತ್ತು ಕುಡಿಯಲು ಮಾತ್ರ ಅನ್ವಯಿಸುತ್ತದೆ. ಇವುಗಳಿಂದ ತಯಾರಾದ ಉಪ ಉತ್ಪನ್ನಗಳ (By Products) ವಿಶೇಷವಾಗಿ ಜೀವ ರಕ್ಷಕವಾಗಲಿರುವ ಔಷಧೀಯ ಉತ್ಪನ್ನಗಳ (Medical Products) ಬಳಕೆಗೆ ಈ ನಿಯಮ ಅನ್ವಯಿಸುವುದಿಲ್ಲ. ಆದುದರಿಂದ ಮುಸ್ಲಿಮರು ಹಂದಿ ಮಾಂಸದ ಅಂಶ ಇದ್ದರೂ ಸಹ ಕೊರೋನಾ ಲಸಿಕೆಗಳನ್ನು ಪಡೆದುಕೊಳ್ಳಲು ಧರ್ಮದ ಯಾವುದೇ ನೀತಿ ನಿಯಮಗಳು ಅಡ್ಡಿ ಮಾಡುವುದಿಲ್ಲ ಎಂದು ಜಮಾತ್-ಎ-ಇಸ್ಲಾಂ-ಹಿಂದ್ ಮಂಡಳಿ ಹೇಳಿದೆ.
ಇದನ್ನೂ ಓದಿ : Corona Vaccine ನಿಮ್ಮ ಬಳಿ ಹೇಗೆ ತಲುಪಲಿದೆ ಗೊತ್ತೇ?
ಈ ಮುಖಾಂತರ ಜಮಾತ್-ಎ-ಇಸ್ಲಾಂ-ಹಿಂದ್ ಮಂಡಳಿ' ಕೊರೋನಾ ಲಸಿಕೆಗಳಲ್ಲಿ ಹಂದಿ ಮಾಂಸದ ಅಂಶವಿರುವುದರಿಂದ ಮುಸ್ಲಿಮರು ಲಸಿಕೆ ಪಡೆಯಬಾರದು' ಎಂಬ ವದಂತಿ ಬಗ್ಗೆ ಮುಸ್ಲಿಮರಲ್ಲಿ ಮೂಡಿದ್ದ ಗೊಂದಲ ಬಗೆಹರಿಸಲು ಮುಂದಾಗಿದೆ. ಜೊತೆಗೆ ಭಾರತದಲ್ಲಿ ಇಂತಹ ನಿರ್ಣಯ ಪ್ರಕಟಿಸಿದ ಮೊದಲ ಮುಸ್ಲಿಂ ಸಂಸ್ಥೆ ಕೂಡ ಆಗಿದೆ.
ಅನುಮತಿಸಲಾಗದ ವಸ್ತುಗಳನ್ನು ಸಂಪೂರ್ಣ ಮಾರ್ಪಾಟು ಮಾಡಿದ್ದರೆ, ಅದು ಪರಿಶುದ್ಧವಾಗಿದ್ದರೆ ಅದನ್ನು ದೇಹಕ್ಕೆ ಸೇರಿಸಬಹುದು. ಈ ಹಿನ್ನಲೆಯಲ್ಲಿ ಹರಾಮ್ ಪ್ರಾಣಿಯ ದೇಹದ ಭಾಗದಿಂದ ಪಡೆದ ಜೆಲಾಟಿನ್ ಬಳಕೆಯನ್ನು ಇಸ್ಲಾಮಿಕ್ ನ್ಯಾಯಶಾಸ್ತ್ರಜ್ಞರು ಹೇಳಿದ್ದಾರೆ. ಅಲ್ಲದೆ ಇಸ್ಲಾಂ ಧರ್ಮವು ಮನುಷ್ಯರ ಪ್ರಾಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತದೆ. ಜೀವ ರಕ್ಷಣೆಗೆ ಆದ್ಯತೆ ನೀಡುತ್ತದೆ ಎಂದು ಜಮಾತ್ -ಎ-ಇಸ್ಲಾಂ-ಹಿಂದ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮೊದಲ ಹಂತದಲ್ಲಿ 6.3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ
ಕೋವಿಡ್ -19 (Covid 19) ಸಂಕಟ ಸಾವು ಬದುಕಿನ ಪ್ರಶ್ನೆಯಾಗಿದೆ. ಬೇರೆ ಆಯ್ಕಗಳಿದ್ದರೆ ಅದು ಒಳ್ಳೆಯದು. ಆದರೆ ಜೀವ ಉಳಿಸಿಕೊಳ್ಳುವ ದೃಷ್ಟಿಯಲ್ಲಿ ಬೇರೆ ಯಾವುದೇ ಆಯ್ಕೆ ಇಲ್ಲದಿರುವ ಸಂದರ್ಭ ಬಂದೊದಗಿದರೆ ಹಂದಿ ಮಾಂಸದ ಅಂಶ ಇದ್ದರೂ ಲಸಿಕೆ ಪಡೆಯುವುದು ತಪ್ಪಾಗುವುದಿಲ್ಲ. ಬೇರೆ ಆಯ್ಕೆಯೇ ಇಲ್ಲದಿರುವ ಸಂದರ್ಭದಲ್ಲಿ ಪಾಪಪ್ರಜ್ಞೆ ಅನುಭವಿಸದೆ ಲಸಿಕೆಗಳನ್ನು ಪಡೆದುಕೊಳ್ಳುವುದರಲ್ಲಿ ತಪ್ಪಾಗುವುದಿಲ್ಲ ಎಂದು ಜಮಾತ್-ಎ-ಇಸ್ಲಾಂ-ಹಿಂದ್ ಮಂಡಳಿ ಉಪಾಧ್ಯಕ್ಷ ಸಲೀಂ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಖ್ಯಾತ ಕೋವಿಡ್ ಲಸಿಕೆಗಳ ಉತ್ಪಾದನಾ ಕಂಪನಿಗಳಾದ ಫೀಝರ್ (Pfizer), ಮೊಡ್ರೆನಾ (Modrena) ಹಾಗೂ ಅಸ್ಟ್ರಾಜೆನಿಕಾ (Astrazeneca) ವಕ್ತಾರರು 'ತಾವು ಉತ್ಪಾದಿಸುತ್ತಿರುವ ಲಸಿಕೆಯಲ್ಲಿ ಯಾವುದೇ ಬಗೆಯ ಹಂದಿ ಮಾಂಸದ ಅಂಶಗಳಿಲ್ಲ. ಲಸಿಕೆಯ ಸುರಕ್ಷಿತವಾಗಿ ಸಂಗ್ರಹಿಸಿಡಲು ಮತ್ತು ಸಾಗಾಣಿಕೆ ಮಾಡಲು ಹಂದಿ ಮಾಂಸದಿಂದ ತಯಾರಿಸಿದ ಜೆಲಾಟಿನ್ ಅನ್ನು ಸ್ಟೆಬಲೈಸರ್ ಆಗಿ ಬಳಸಲಾಗುತ್ತದಷ್ಟೇ' ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಜಮಾತ್-ಎ-ಇಸ್ಲಾಂ-ಹಿಂದ್ ಮಂಡಳಿ ಪ್ರಕಟಣೆ ಹೊರಡಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.