Weird News: ಹೆಚ್ಚಿನ ಹುಡುಗ ಹುಡುಗಿಯರಿಗೆ ಪ್ರೌಢಾವಸ್ಥೆಯು ವಿಚಿತ್ರ ಮತ್ತು ಕಷ್ಟಕರ ಸಮಯವಾಗಿದೆ. ಈ ಸಮಯದಲ್ಲಿ ಧ್ವನಿಯು ಭಾರವಾಗಲು ಪ್ರಾರಂಭಿಸುತ್ತದೆ, ಮೂಡ್ ಸ್ವಿಂಗ್ಸ್ ಮತ್ತು ಕೂದಲು ಹಿಂದೆಂದೂ ಅಸ್ತಿತ್ವದಲ್ಲಿಲ್ಲದ ಸ್ಥಳಗಳಲ್ಲಿ ಬರಲು ಪ್ರಾರಂಭಿಸುತ್ತದೆ. ಆದರೆ ವಿಶ್ವ ಭೂಪಟದಲ್ಲಿ ಅಂತಹ ಒಂದು ಹಳ್ಳಿ (ಲಾ ಸಲಿನಾಸ್ ವಿಲೇಜ್) ಇದೆ. ಇಲ್ಲಿ ನಿರ್ದಿಷ್ಟ ವಯಸ್ಸಿನ ನಂತರ ಹುಡುಗಿಯರು ಹುಡುಗರಾಗುತ್ತಾರೆ  (Girls turns into Boys) ಎಂದು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು. 


COMMERCIAL BREAK
SCROLL TO CONTINUE READING

ಹೌದು, ಇದು ಸತ್ಯ. ಡೊಮಿನಿಕನ್ ರಿಪಬ್ಲಿಕ್ (Dominican Republic)  ನಲ್ಲಿ ಲಾ ಸಲಿನಾಸ್ ವಿಲೇಜ್  (La Salinas Village)  ಎಂಬ ಗ್ರಾಮವಿದೆ. ಇಲ್ಲಿನ ಹುಡುಗಿಯರು ನಿರ್ದಿಷ್ಟ ವಯಸ್ಸಿನ ನಂತರ ಲಿಂಗ ಬದಲಾವಣೆಯನ್ನು  (Girls turns into Boys) ಹೊಂದಿರುತ್ತಾರೆ. ಇದಾದ ನಂತರ ಇಲ್ಲಿನ ಹುಡುಗಿಯರು ಹುಡುಗರಾಗುತ್ತಾರೆ. ಈ ಕಾರಣದಿಂದ ಇಲ್ಲಿನ ಜನರು ಗ್ರಾಮವನ್ನು ಶಾಪಗ್ರಸ್ತ ಗ್ರಾಮವೆಂದು ಪರಿಗಣಿಸುತ್ತಾರೆ. ವಿಜ್ಞಾನಿಗಳು ಸಹ ಈ ರಹಸ್ಯವನ್ನು ಇಲ್ಲಿಯವರೆಗೆ ಕಂಡುಹಿಡಿಯಲು ಸಾಧ್ಯವಾಗಿಲ್ಲ.


ಇದನ್ನೂ ಓದಿ- Viral News: 6 ತಿಂಗಳು ಹೊಟ್ಟೆಯೊಳಗಿತ್ತು ಮೊಬೈಲ್ ಫೋನ್, ಬೆಚ್ಚಿಬಿದ್ದ ವೈದ್ಯರು..!


12 ನೇ ವಯಸ್ಸಿನಲ್ಲಿ ಹುಡುಗರಾರುವ ಹುಡುಗಿಯರು!
ಲಾ ಸಲಿನಾಸ್ ಹಳ್ಳಿಯ  (La Salinas Village) ಅನೇಕ ಹುಡುಗಿಯರು 12 ನೇ ವಯಸ್ಸನ್ನು ತಲುಪುವ ಹೊತ್ತಿಗೆ ಹುಡುಗರಾಗಿ ಬದಲಾಗಲು ಪ್ರಾರಂಭಿಸುತ್ತಾರೆ. ಹಳ್ಳಿಯ ಹೆಣ್ಣುಮಕ್ಕಳು ಗಂಡು ಮಕ್ಕಳಾಗುವ ‘ರೋಗ’ದಿಂದಾಗಿ ಇಲ್ಲಿನ ಜನ ಕಂಗಾಲಾಗಿದ್ದಾರೆ. ಇದರಿಂದಾಗಿ ಇಲ್ಲಿ ಯಾವುದೋ ಅಗೋಚರ ಶಕ್ತಿಯ ಛಾಯೆ ಇದೆ ಎಂಬುದು ಗ್ರಾಮದ ಹಲವು ಜನರ ನಂಬಿಕೆ. ಇದಲ್ಲದೆ, ಕೆಲವು ಹಿರಿಯರು ಗ್ರಾಮವನ್ನು ಶಾಪಗ್ರಸ್ತವೆಂದು ಪರಿಗಣಿಸುತ್ತಾರೆ. ಅಂತಹ ಮಕ್ಕಳನ್ನು 'ಗುವೆಡೋಸ್' ಎಂದು ಕರೆಯಲಾಗುತ್ತದೆ.


ಹಳ್ಳಿಯ ಯಾರದೋ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಆ ಕುಟುಂಬದಲ್ಲಿ ರೋದನ. ಏಕೆಂದರೆ ತಮ್ಮ ಮಗಳು ದೊಡ್ಡವಳಾದಾಗ ಗಂಡು ಮಗುವಾಗುತ್ತಾಳೆ ಎಂಬ ಭಯ ಅವರಿಗಿದೆ. ಈ ಕಾಯಿಲೆಯಿಂದ ಗ್ರಾಮದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಈ ನಿಗೂಢ ಕಾಯಿಲೆಯಿಂದ ಸಮೀಪದ ಗ್ರಾಮಗಳ ಜನರು ಈ ಗ್ರಾಮವನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಿದೆ.


ಇದನ್ನೂ ಓದಿ- Alert! Last Road on Earth: ಇದುವೇ ಭೂಮಿಯ ಕೊನೆಯ ದಾರಿ, ಅಪ್ಪಿ-ತಪ್ಪಿಯೂ ಒಂಟಿಯಾಗಿ ಹೋದರೆ ?


ಈ ರೋಗವು ಆನುವಂಶಿಕವಾಗಿದೆ:
ಈ ಕಡಲತೀರದ ಹಳ್ಳಿಯ ಜನಸಂಖ್ಯೆ ಸುಮಾರು 6 ಸಾವಿರ. ಅದರ ವಿಶಿಷ್ಟ ಅದ್ಭುತದಿಂದಾಗಿ, ಈ ಗ್ರಾಮವು ಪ್ರಪಂಚದಾದ್ಯಂತದ ಸಂಶೋಧಕರಿಗೆ ಸಂಶೋಧನೆಯ ವಿಷಯವಾಗಿ ಉಳಿದಿದೆ. ಮತ್ತೊಂದೆಡೆ, ಈ ರೋಗವು 'ವಂಶವಾಹಿ ಅಸ್ವಸ್ಥತೆ' ಎಂದು ವೈದ್ಯರು ಹೇಳುತ್ತಾರೆ. ಸ್ಥಳೀಯ ಭಾಷೆಯಲ್ಲಿ, ಈ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳನ್ನು 'ಸೂಡೋಹೆರ್ಮಾಫ್ರೋಡೈಟ್ಸ್' ಎಂದು ಕರೆಯಲಾಗುತ್ತದೆ. ಈ ಕಾಯಿಲೆ ಇರುವ ಎಲ್ಲಾ ಹುಡುಗಿಯರು, ವಯಸ್ಸಿಗೆ ಬಂದ ನಂತರ, ಅವರ ದೇಹವು ಪುರುಷರಂತೆ ಅಂಗಗಳನ್ನು ರೂಪಿಸಲು ಪ್ರಾರಂಭಿಸುತ್ತದೆ. ಅವರ ಧ್ವನಿಯು ಗಡುಸಾಗಲು ಪ್ರಾರಂಭಿಸುತ್ತದೆ ಮತ್ತು ಆ ಬದಲಾವಣೆಗಳು ದೇಹದಲ್ಲಿ ಬರಲು ಪ್ರಾರಂಭಿಸುತ್ತವೆ, ಅದು ಕ್ರಮೇಣ ಅವರನ್ನು ಹುಡುಗಿಯಿಂದ ಹುಡುಗನನ್ನಾಗಿ ಮಾಡುತ್ತದೆ. ಗ್ರಾಮದ 90 ಮಕ್ಕಳ ಪೈಕಿ ಒಂದು ಮಗು ಈ ನಿಗೂಢ ಕಾಯಿಲೆಯೊಂದಿಗೆ ಹೋರಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.