ವಾಷಿಂಗ್ಟನ್ : ಸೆಪ್ಟೆಂಬರ್ 20 ರ ಸೋಮವಾರ ಆಗಸದಲ್ಲಿ ಚಂದ್ರನ ಅದ್ಭುತ ದೃಶ್ಯ ಕಂಡು ಬಂತು. ಹುಣ್ಣಿಮೆಯೊಂದಿಗೆ, ಚಂದ್ರನು (Moon) ಭೂಮಿಯ ಉತ್ತರ ಗೋಳಾರ್ಧದಲ್ಲಿ ಅತ್ಯಂತ ಸುಂದರವಾಗಿ ಕಾಣಿಸಿಕೊಂಡಿದ್ದಾನೆ. ಸೆಪ್ಟೆಂಬರ್ ನಲ್ಲಿ ಕಾಣುವ ಚಂದ್ರ ತುಸು ವಿಶೇಷವೇ.  ಏಕೆಂದರೆ,ಈ ಮೂರೂ ದಿನಗಳಲ್ಲಿ ಚಂದ್ರ ಬಹಳ ಸುಂದರವಾಗಿ ಮತ್ತು ಪ್ರಕಾಶಮಾನವಾಗಿ ಕಾಣಿಸುತ್ತಾನೆ. 


COMMERCIAL BREAK
SCROLL TO CONTINUE READING

ಏನಿದು 'ಹಾರ್ವೆಸ್ಟ್ ಮೂನ್' ?  
 ಇದು ಉತ್ತರ ಗೋಳಾರ್ಧದಲ್ಲಿ ಬೇಸಿಗೆಯ (Summer) ಕೊನೆಯ ಹುಣ್ಣಿಮೆಯಾಗಿದೆ. ಇದನ್ನು 'ಹಾರ್ವೆಸ್ಟ್ ಮೂನ್' (Harvest moon) ಎಂದು ಕರೆಯಲಾಗುತ್ತದೆ.  ಇದನ್ನು ಸಾಮಾನ್ಯವಾಗಿ ಸೆಪ್ಟೆಂಬರ್ ಅಥವಾ ಕೆಲವೊಮ್ಮೆ ಅಕ್ಟೋಬರ್‌ನಲ್ಲಿ ಕಾಣಬಹುದು.


ಇದನ್ನೂ ಓದಿ : Pakistan: ಪಾಕಿಸ್ತಾನದಲ್ಲಿ ಇತಿಹಾಸ ಸೃಷ್ಟಿಸಿದ ಹಿಂದೂ ಹುಡುಗಿ


ಸುಗ್ಗಿಯ ಸಮಯ :
ಯುರೋಪ್ ಮತ್ತು ಅಮೆರಿಕದಲ್ಲಿ(America), ಇದು ಬೆಳೆಗಳ ಕೊಯ್ಲಿನ ಸಮಯ. ಅದಕ್ಕಾಗಿಯೇ ಇದನ್ನು ಹಾರ್ವೆಸ್ಟ್ ಮೂನ್ ಎಂದು ಹೆಸರಿಸಲಾಗಿದೆ. 'ಹಾರ್ವೆಸ್ಟ್ ಮೂನ್' ಸಮಯದಲ್ಲಿ, ಚಂದ್ರನು ಸೂರ್ಯಾಸ್ತದ (Sunset) ಸ್ವಲ್ಪ ಸಮಯದ ನಂತರ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತಾನೆ ಮತ್ತು ತಡರಾತ್ರಿಯವರೆಗೆ ಕಾಣಿಸುತ್ತಾನೆ.  


Autumn Equinox ಆರಂಭ :
ಸೋಮವಾರ, ಸೆಪ್ಟೆಂಬರ್ 20 ರಂದು, ಚಂದ್ರನು ಬಹಳ ದೊಡ್ಡದಾಗಿ ಮತ್ತು ಸುಂದರವಾಗಿ ಗೋಚರಿಸಿದ್ದಾನೆ. ಈ ವೇಳೆ  ಚಂದ್ರನ (moon) ಹೊಳಪು  ಸುಮಾರು 99.9%ಆಗಿತ್ತು. 21 ಸೆಪ್ಟೆಂಬರ್ ಮಂಗಳವಾರದಿಂದ, ಅದು ಮುಂದಿನ ಹಂತವನ್ನು ಪ್ರವೇಶಿಸುತ್ತದೆ. ಇದು ಸುಮಾರು ಮೂರು ದಿನಗಳ ಕಾಲ ಕಾಣಿಸುತ್ತದೆ. Autumn Equinox ಸೆಪ್ಟೆಂಬರ್ 22 ರಂದು ಆರಂಭವಾಗುತ್ತದೆ.


ಇದನ್ನೂ ಓದಿ : Corona Third Wave: ಮಕ್ಕಳ ಪಾಲಿಗೆ ಮಹತ್ವದ ಸುದ್ದಿ ಪ್ರಕಟ, ಈ ವ್ಯಾಕ್ಸಿನ್ ಮಕ್ಕಳ ಮೇಲೆ ಪ್ರಭಾವಶಾಲಿ


ಕಳೆದ ವಾರ ಗುರು ಮತ್ತು ಶನಿಯು (Saturn) ಚಂದ್ರನೊಂದಿಗೆ ತ್ರಿಕೋನದಲ್ಲಿ ಕಾಣಿಸಿಕೊಂಡಿಸಿತ್ತು. ಇವುಗಳ ಮಧ್ಯೆ, ಈಗ ಅಂತರ ಕಾಣಿಸುತ್ತಿದೆ. ಈ ಹಿಂದೆ ಡಿಸೆಂಬರ್ 21 ರಂದು, ಈ ದೃಶ್ಯ ಕಂಡುಬಂದಿತ್ತು. ಕಳೆದ 400 ವರ್ಷಗಳಿಂದ ಈ ಘಟನೆ ನಡೆದಿರಲಿಲ್ಲ. ಭೂಮಿಯಿಂದ ಗುರು ಮತ್ತು ಶನಿಯನ್ನು ಬಹಳ ಹತ್ತಿರದಿಂದ ನೋಡುವುದು ಸಾಧ್ಯವಾಗಿತ್ತು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.