Salt For Skin Problems: ಬೇಸಿಗೆಯಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ರಾಮಬಾಣ ಉಪ್ಪು

Salt For Skin Problems: ಈ ಋತುವಿನಲ್ಲಿ ಬೆವರುವಿಕೆಯು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಇದರಿಂದ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ನಿವಾರಿಸಲು ಉಪ್ಪು ನಿಮಗೆ ಪ್ರಯೋಜನಕಾರಿಯಾಗಿದೆ.

Written by - Yashaswini V | Last Updated : Jul 29, 2021, 12:30 PM IST
  • ಚರ್ಮದಲ್ಲಿ ಸಂಗ್ರಹವಾದ ಹೆಚ್ಚುವರಿ ಎಣ್ಣೆಯನ್ನು ಉಪ್ಪು ನಿಯಂತ್ರಿಸುತ್ತದೆ
  • ಹೆಣ್ಣು ಮಕ್ಕಳಿಗೆ ಸಾಮಾನ್ಯವಾಗಿ ಕಾಡುವ ಮೊಡವೆ ಸಮಸ್ಯೆಯನ್ನು ನಿವಾರಿಸಲೂ ಕೂಡ ಉಪ್ಪನ್ನು ಬಳಸಬಹುದು
  • ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ದೇಹದ ಆಯಾಸ ಕಡಿಮೆಯಾಗುತ್ತದೆ
Salt For Skin Problems: ಬೇಸಿಗೆಯಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ರಾಮಬಾಣ ಉಪ್ಪು title=
Salt For Skin Problems

Salt For Skin Problems: ಬೇಸಿಗೆಯಲ್ಲಿ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಋತುವಿನಲ್ಲಿ ನಿಮ್ಮ ಚರ್ಮವನ್ನು ಹೈಡ್ರೀಕರಿಸುವುದು ಬಹಳ ಮುಖ್ಯ. ಈ ಋತುವಿನಲ್ಲಿ ಬೆವರುವಿಕೆಯು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಇದರಿಂದ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ನಿವಾರಿಸಲು ಉಪ್ಪು ನಿಮಗೆ ಪ್ರಯೋಜನಕಾರಿಯಾಗಿದೆ.

ಬೇಸಿಗೆಯಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಉಪ್ಪನ್ನು ಈ ರೀತಿ ಬಳಸಿ:

ಉಪ್ಪನ್ನು ಟೋನರ್‌ ಆಗಿ ಬಳಸಿ- ನೀವು ಉಪ್ಪನ್ನು ಟೋನರ್‌ ಆಗಿ ಬಳಸಬಹುದು. ಚರ್ಮದಲ್ಲಿ ಸಂಗ್ರಹವಾದ ಹೆಚ್ಚುವರಿ ಎಣ್ಣೆಯನ್ನು ಉಪ್ಪು (Salt) ನಿಯಂತ್ರಿಸುತ್ತದೆ. ಇದು ಮುಖವನ್ನು ಬಿಗಿಗೊಳಿಸುತ್ತದೆ ಮತ್ತು ಹೊಳಪನ್ನು ತರುತ್ತದೆ. ಉಪ್ಪನ್ನು ಟೋನರ್‌ ಆಗಿ ಬಳಸಲು, ಸಣ್ಣ ಸ್ಪ್ರೆ ಬಾಟಲಿಯಲ್ಲಿ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದರಲ್ಲಿ ಒಂದು ಸಣ್ಣ ಚಮಚ ಉಪ್ಪನ್ನು ಬೆರೆಸಿ. ಉಪ್ಪು ಚೆನ್ನಾಗಿ ಕರಗಿದಾಗ ಅದನ್ನು ಮುಖದ ಮೇಲೆ ಸಿಂಪಡಿಸಿ.

ಇದನ್ನೂ ಓದಿ- ವರ್ಷಗಳು ಕಳೆದರೂ ಈ ಐದು ವಸ್ತುಗಳು ಕೆಡುವುದೇ ಇಲ್ಲ

ಮೊಡವೆ ನಿವಾರಣೆಗೆ ಉಪ್ಪು ಸಹಾಯಕ- ಹೆಣ್ಣು ಮಕ್ಕಳಿಗೆ ಸಾಮಾನ್ಯವಾಗಿ ಕಾಡುವ ಮೊಡವೆ ಸಮಸ್ಯೆಯನ್ನು ನಿವಾರಿಸಲೂ ಕೂಡ ಉಪ್ಪನ್ನು ಬಳಸಬಹುದು. ಇದಕ್ಕಾಗಿ 1 ಟೀಸ್ಪೂನ್ ಸಮುದ್ರದ ಉಪ್ಪನ್ನು 1 ಬಟ್ಟಲು ನೀರಿನಲ್ಲಿ ಬೆರೆಸಬೇಕಾಗುತ್ತದೆ. ಈ ನೀರಿನಲ್ಲಿ ಹತ್ತಿಯನ್ನು ಮುಳುಗಿಸಿ. ನಂತರ ಅದನ್ನು ಮೊಡವೆ ಇರುವ ಜಾಗದಲ್ಲಿ ಹಚ್ಚಿ. ಅದನ್ನು ಸ್ವಲ್ಪ ಸಮಯ ಒಣಗಲು ಒಣಗಲು ಬಿಡಿ, ಬಳಿಕ ಮುಖವನ್ನು ತೊಳೆಯಿರಿ. 

ಸ್ನಾನದ ನೀರಿನಲ್ಲಿ ಉಪ್ಪು ಬೆರೆಸಿ- ಬೇಸಿಗೆಯಲ್ಲಿ (Summer), ಸ್ನಾನದ ನೀರಿಗೆ ಉಪ್ಪು ಸೇರಿಸುವ ಮೂಲಕ ಸ್ನಾನ ಮಾಡಬಹುದು. ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ದೇಹದ ಕಲ್ಮಶಗಳನ್ನು ತೆಗೆದುಹಾಕಲಾಗುತ್ತದೆ. ಇದು ಚರ್ಮವನ್ನು ರಿಪೇರಿ ಮಾಡುತ್ತದೆ. ಇದಕ್ಕಾಗಿ, ಒಂದು ಬಕೆಟ್ ನೀರಿನಲ್ಲಿ ಅರ್ಧ ಕಪ್ ಉಪ್ಪನ್ನು ಹಾಕಿ. ಇದನ್ನು ಚೆನ್ನಾಗಿ ಬೆರೆಸಿ ನಂತರ ಈ ನೀರಿನಿಂದ ಸ್ನಾನ ಮಾಡಿ. ಇದು ದೇಹದ ಆಯಾಸವನ್ನೂ ತೆಗೆದುಹಾಕುತ್ತದೆ.

ಇದನ್ನೂ ಓದಿ- Salt Benefits : ಆರೋಗ್ಯಕ್ಕೆ ಅಷ್ಟೇ ಅಲ್ಲ ಸೌಂದರ್ಯಕ್ಕೂ ಪ್ರಯೋಜನಕಾರಿಯಾಗಿದೆ 'ಉಪ್ಪು'

ಸಾಲ್ಟ್ ಸ್ಕ್ರಬ್- ಬೇಸಿಗೆಯಲ್ಲಿ, ನೀವು ಉಪ್ಪಿನಿಂದ ಮಾಡಿದ ಸ್ಕ್ರಬ್ ಅನ್ನು ಬಳಸಬಹುದು. ಇದಕ್ಕಾಗಿ ನೀವು ಸಮುದ್ರ ಉಪ್ಪು ಮತ್ತು ಕಲ್ಲು ಉಪ್ಪನ್ನು ಬಳಸಬಹುದು. ಇದಕ್ಕಾಗಿ ಒಂದು ಚಮಚ ಬಾದಾಮಿ, ತೆಂಗಿನ ಎಣ್ಣೆ ಮತ್ತು ಉಪ್ಪು ಮಿಶ್ರಣ ಮಾಡಿ. ಇದರ ನಂತರ ಈ ಪೇಸ್ಟ್ ಅನ್ನು ದೇಹದಾದ್ಯಂತ ಅನ್ವಯಿಸಿ ಮತ್ತು 10-15 ನಿಮಿಷಗಳ ಕಾಲ ಸ್ಕ್ರಬ್ ಮಾಡಿ ನಂತರ ಸ್ನಾನ ಮಾಡಿ.

ಉಪ್ಪನ್ನು ಈ ರೀತಿ ಬಳಸುವುದರಿಂದ ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಡುವ ಚರ್ಮದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News