ಕಾನೂನಾತ್ಮಕವಾಗಿ ಅರುಣಾಚಲ ಪ್ರದೇಶವನ್ನು ನಿಯಂತ್ರಿಸುತ್ತಿರುವ ಭಾರತ; ಬಾಯಿ ಮಾತಲ್ಲಿ ತನ್ನದೆನ್ನುತ್ತಿದೆ ಚೀನಾ
`ಚೀನಾ ಭಾರತ ಮತ್ತು ಅದರ ನಡುವಿನ ಗಡಿರೇಖೆಯಾದ ಮ್ಯಾಕ್‌ಮೋಹನ್ ರೇಖೆಯನ್ನು ಅಲ್ಲಗಳೆಯುತ್ತದೆ. ಮ್ಯಾಕ್‌ಮೋಹನ್ ರೇಖೆಯನ್ನು ಚೀನಾ ಅಕ್ರಮ ಮತ್ತು ಒಪ್ಪಲು ಸಾಧ್ಯವಿಲ್ಲದ್ದು ಎಂದು ಕರೆಯುತ್ತದೆ. ಅದಕ್ಕಾಗಿ ಚೀನಾ ಕೆಳಗಿನ ಕಾರಣಗಳನ್ನು ನೀಡುತ್ತದೆ.
ಚೀನಾ ಅರುಣಾಚಲ ಪ್ರದೇಶ ತನ್ನ ಪ್ರಾಂತ್ಯ ಎಂದು ಪದೇ ಪದೇ ಹೇಳಿಕೆ ನೀಡುತ್ತಿದ್ದರೂ, ಭಾರತ ಅದನ್ನು ಕಾನೂನಾತ್ಮಕವಾಗಿ ನಿಯಂತ್ರಿಸುತ್ತಿದೆ ಎನ್ನುವುದನ್ನು ಮರೆತೇ ಬಿಟ್ಟಿದೆ. "ಅರುಣಾಚಲ ಪ್ರದೇಶ ಎನ್ನುವುದು ಭಾರತ ಅವಿಭಾಜ್ಯ ಮತ್ತು ಭಾರತದಿಂದ ಬೇರ್ಪಡಿಸಲು ಸಾಧ್ಯವಾಗದ ಭಾಗ" ಎಂದು ಮಣಿಪಾಲದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಂಸ್ಥೆಯ ಜಿಯೋಪೊಲಿಟಿಕ್ಸ್ ಮತ್ತು ಇಂಟರ್‌ನ್ಯಾಷನಲ್ ರಿಲೇಶನ್ಸ್ ವಿಭಾಗದ ಉಪನ್ಯಾಸಕರಾದ ಅಮೃತಾ ಜಶ್ ಬಾರ್ಡರ್ ಲೆನ್ಸ್‌ಗೆ ಸಲ್ಲಿಸಿದ ತನ್ನ ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನೇಪಾಳನ ನೂತನ ಪ್ರಧಾನಿಯಾಗಿ ಪ್ರಚಂಡ ಅಧಿಕಾರ ಸ್ವೀಕಾರ
"ಚೀನಾ ಭಾರತ ಮತ್ತು ಅದರ ನಡುವಿನ ಗಡಿರೇಖೆಯಾದ ಮ್ಯಾಕ್‌ಮೋಹನ್ ರೇಖೆಯನ್ನು ಅಲ್ಲಗಳೆಯುತ್ತದೆ. ಮ್ಯಾಕ್‌ಮೋಹನ್ ರೇಖೆಯನ್ನು ಚೀನಾ ಅಕ್ರಮ ಮತ್ತು ಒಪ್ಪಲು ಸಾಧ್ಯವಿಲ್ಲದ್ದು ಎಂದು ಕರೆಯುತ್ತದೆ. ಅದಕ್ಕಾಗಿ ಚೀನಾ ಕೆಳಗಿನ ಕಾರಣಗಳನ್ನು ನೀಡುತ್ತದೆ. ಮೊದಲನೆಯದಾಗಿ, ಭಾರತ - ಚೀನಾಗಳ ಗಡಿಯನ್ನು ಯಾವತ್ತೂ ಸರಿಯಾಗಿ ಗುರುತಿಸಲಾಗಿಲ್ಲ. ಚೀನಾದ ಕೇಂದ್ರೀಯ ಸರ್ಕಾರ ಮತ್ತು ಭಾರತ ಸರ್ಕಾರಗಳ ಮಧ್ಯ ಗಡಿಯ ಕುರಿತಾದ ಯಾವುದೇ ಅಧಿಕೃತ ಒಪ್ಪಂದ ನಡೆದಿಲ್ಲ. ಎರಡನೆಯದಾಗಿ, ಚೀನಾ ಮ್ಯಾಕ್‌ಮೋಹನ್ ರೇಖೆಯನ್ನು ಸಾಮ್ರಾಜ್ಯಶಾಹಿ ಪರಂಪರೆ ಎಂದು ನಂಬುತ್ತದೆ. ಆದರೆ ಕುತೂಹಲಕಾರಿ ಅಂಶವೆಂದರೆ, 1960ರಲ್ಲಿ ಚೀನಾ ಮ್ಯಾಕ್‌ಮೋಹನ್ ರೇಖೆಯನ್ನು ಒಪ್ಪಿಕೊಂಡಿತ್ತು. ಆದರೆ ಅರುಣಾಚಲ ಪ್ರದೇಶದ ವಿಚಾರಕ್ಕೆ ಬಂದಾಗ ಚೀನಾ ಮಯನ್ಮಾರ್ ಜೊತೆಗಿನ ತನ್ನ ಗಡಿ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಲು ಮ್ಯಾಕ್‌ಮೋಹನ್ ರೇಖೆಯನ್ನು ಬಲವಾಗಿ ವಿರೋಧಿಸುತ್ತದೆ" ಎಂದು ಆ ವರದಿ ತಿಳಿಸಿದೆ.ಅರುಣಾಚಲ ಪ್ರದೇಶದ ಹಲವು ಪ್ರಾಂತ್ಯಗಳ ಹೆಸರುಗಳನ್ನು ಬದಲಾಯಿಸಲಾಗಿದೆ. ಡಿಸೆಂಬರ್ 2021ರಲ್ಲಿ ಚೀನಾದ ವಿಮಾನಯಾನ ಸಚಿವಾಲಯ ಅರುಣಾಚಲ ಪ್ರದೇಶದ 15 ಪ್ರದೇಶಗಳ ಹೆಸರುಗಳನ್ನು ಬದಲಾಯಿಸಿ ಉಪಯೋಗಿಸಿತ್ತು. ಅದರೊಡನೆ ಭಾರತೀಯ ನಾಯಕರು ಹಾಗೂ ದಲೈ ಲಾಮಾ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವುದನ್ನೂ ಚೀನಾ ವಿರೋಧಿಸಿತ್ತು.
ಇದನ್ನೂ ಓದಿ: Brain Eating Amoeba: ಕೋವಿಡ್ ಭೀತಿ ನಡುವೆ, ಮೆದುಳು ತಿನ್ನುವ 'ಅಮೀಬಾ'ಗೆ ವ್ಯಕ್ತಿ ಬಲಿ
ಇತ್ತೀಚಿನ ದಿನಗಳಲ್ಲಿ ಬಂದ ವರದಿಯ ಪ್ರಕಾರ, ಅಕ್ಟೋಬರ್ 2021ರಲ್ಲಿ ಮಾಜಿ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವುದನ್ನು ಚೀನಾ ವಿರೋಧಿಸಿತ್ತು. ಆದರೆ ಅರುಣಾಚಲ ಪ್ರದೇಶ ಭಾರತದ ಒಂದು ಅಧಿಕೃತ ರಾಜ್ಯವಾಗಿರುವುದರಿಂದ ಈ ವಿಚಾರದಲ್ಲಿ ಚೀನಾದ ವಿರೋಧಕ್ಕೆ ಅರ್ಥವೇ ಇರುವುದಿಲ್ಲ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಭಾರತದ ವಿದೇಶಾಂಗ ಸಚಿವಾಲಯ "ಭಾರತೀಯ ನಾಯಕರು, ಭಾರತದ ರಾಜ್ಯವೊಂದಕ್ಕೆ ಭೇಟಿ ನೀಡುವುದಕ್ಕೆ ಚೀನಾ ತನ್ನ ವಿರೋಧ ವ್ಯಕ್ತಪಡಿಸುವುದರ ಕುರಿತು ಭಾರತ ಚರ್ಚೆ ನಡೆಸುವ ಅಗತ್ಯ ಬರುವುದಿಲ್ಲ ಮತ್ತು ಭಾರತೀಯರಿಗೂ ಚೀನಾದ ವಿರೋಧ ಅರ್ಥವಾಗದ ವಿಚಾರ" ಎಂದು ತಿಳಿಸಿದೆ ಎಂದು ಜಶ್ ನಮೂದಿಸಿದ್ದಾರೆ.
ಇತ್ತೀಚೆಗೆ ತವಾಂಗ್‌ನ ಯಾಂಗ್‌ಟ್ಸೆ ಪ್ರದೇಶದಲ್ಲಿ ಭಾರತ ಮತ್ತು ಚೀನಾದ ಸೈನಿಕರು ಕಾದಾಟ ನಡೆಸಿದ್ದರೂ, ಅಲ್ಲಿನ ಜ಼ೆಮಿತಾಂಗ್ ಗ್ರಾಮದ ಜನತೆ ಇಂತಹ ಘಟನೆಯ ಕುರಿತು ಯಾವುದೇ ಆತಂಕ ವ್ಯಕ್ತಪಡಿಸುತ್ತಿಲ್ಲ. ಯಾಕೆಂದರೆ ಅವರಿಗೆ ಭಾರತ ಸರ್ಕಾರ ಮತ್ತು ಭಾರತೀಯ ಸೇನೆಯ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ನಮ್ಮನ್ನು ಕಾಪಾಡುತ್ತಾರೆ, ಸುರಕ್ಷಿತವಾಗಿಡುತ್ತಾರೆ ಎಂಬ ದೃಢ ನಂಬಿಕೆಯಿದೆ. ಅಂದಾಜು 5,000 ಜನಸಂಖ್ಯೆ ಹೊಂದಿರುವ ಜ಼ೆಮಿತಾಂಗ್ ಭಾರತದ ಕೊನೆಯ ಹಳ್ಳಿಯಾಗಿದೆ. ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿರುವ ಈ ಹಳ್ಳಿ ಎಲ್ಎಸಿಯಿಂದ ಕೇವಲ ಹತ್ತು ಕಿಲೋಮೀಟರ್ ಅಷ್ಟೇ ದೂರದಲ್ಲಿದೆ. ಭಾರತ - ಚೀನಾ ಗಡಿಯಲ್ಲಿ ಜ಼ೆಮಿತಾಂಗ್ ಕೊಟ್ಟ ಕೊನೆಯ ಗಡಿ ಹಳ್ಳಿಯಾಗಿದೆ.
-ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.