ಬಿಜೆಪಿಯಲ್ಲಿರುವ ಬಹುತೇಕರು ಸಿ.ಟಿ.ರವಿಯರಂತೆ ಕೊಳಕು ಗಿರಾಕಿಗಳು: ದಿನೇಶ್ ಗುಂಡೂರಾವ್

ಹೆಂಡ ಕುಡಿದವರಿಗಿಂತಲೂ ಕಡೆಯಾಗಿ ಮಾತಾಡುವ ಸಿ.ಟಿ.ರವಿಯವರನ್ನು ಜನರು ಸುಮ್ಮನೆ O.T.ರವಿ ಎನ್ನುತ್ತಾರೆಯೇ? OT ಕುಡಿಯದೆ ರವಿಯವರ ಬಾಯಿಂದ ಇಂತಹ ಕೊಳಕು ಹೇಳಿಕೆಗಳು ಹೇಗೆ ಬರಲು ಸಾಧ್ಯವೆಂದು ದಿನೇಶ್ ಗುಂಡೂರಾವ್ ಕುಟುಕಿದ್ದಾರೆ.

Written by - Zee Kannada News Desk | Last Updated : Dec 27, 2022, 02:12 PM IST
  • ನಾವು ಸಿ.ಟಿ.ರವಿಯವರನ್ನು ನಿಮಾನ್ಸ್ ರೋಗಿಗಳ ಪಟ್ಟಿಯಲ್ಲಿಟ್ಟಿದ್ದೇವೆ
  • ತಲೆ ಸರಿ ಇಲ್ಲದವರ ಮಾತಿಗೆ ಯಾರಾದರೂ ತಲೆ ಕೆಡಿಸಿಕೊಳ್ಳುತ್ತಾರೆಯೇ?
  • ನಮಗೆ ಸಿ.ಟಿ.ರವಿ ಮಾತುಗಳು ಹುಚ್ಚನ ಕನವರಿಕೆಗಳಂತೆ ಎಂದ ದಿನೇಶ್ ಗುಂಡೂರಾವ್
ಬಿಜೆಪಿಯಲ್ಲಿರುವ ಬಹುತೇಕರು ಸಿ.ಟಿ.ರವಿಯರಂತೆ ಕೊಳಕು ಗಿರಾಕಿಗಳು: ದಿನೇಶ್ ಗುಂಡೂರಾವ್  title=
ಸಿ.ಟಿ.ರವಿಗೆ ದಿನೇಶ್ ಗುಂಡೂರಾವ್ ತಿರುಗೇಟು

ಬೆಂಗಳೂರು: ತನ್ನ ಮಾತುಗಳು ಕಾಂಗ್ರೆಸ್ ‌ನಾಯಕರಿಗೆ ಮರ್ಮಘಾತವಾದಂತೆ ಎಂದು ಸಿ.ಟಿ.ರವಿ ತಮನ್ನು ತಾವೇ ಆತ್ಮಪ್ರಶಂಸೆ ಮಾಡಿಕೊಂಡಿದ್ದಾರೆ. ನಾವು ಸಿ.ಟಿ.ರವಿಯವರನ್ನು ನಿಮಾನ್ಸ್ ರೋಗಿಗಳ ಪಟ್ಟಿಯಲ್ಲಿಟ್ಟಿದ್ದೇವೆ. ಹಾಗಾಗಿ ನಮಗೆ ರವಿ ಮಾತುಗಳು ಹುಚ್ಚನ ಕನವರಿಕೆಗಳಂತೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರ ಹೇಳಿಕೆಗೆ ತಿರುಗೇಟು ನೀಡಿ ಮಂಗಳವಾರ ಸರಣಿ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ‘ತಲೆ ಸರಿ ಇಲ್ಲದವರ ಮಾತಿಗೆ ಯಾರಾದರೂ ತಲೆ ಕೆಡಿಸಿಕೊಳ್ಳುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ. ‘ಸಿ.ಟಿ.ರವಿಯವರಿಗೆ ಸಂಸ್ಕಾರ ಎಂಬ ಪದದ ಅರ್ಥವೇ ಗೊತ್ತಿಲ್ಲ. ಕಾಂಗ್ರೆಸ್ ನಾಯಕರ ಬಗ್ಗೆ ಅಸಹ್ಯಕರ ಪದ ಬಳಕೆ ಮಾಡುವ ರವಿಯವರಿಗೆ ಯಾವ ಸಂಸ್ಕಾರವಿದೆ? ಹೆಂಡ ಕುಡಿದವರಿಗಿಂತಲೂ ಕಡೆಯಾಗಿ ಮಾತಾಡುವ ಸಿ.ಟಿ.ರವಿಯವರನ್ನು ಜನರು ಸುಮ್ಮನೆ O.T.ರವಿ ಎನ್ನುತ್ತಾರೆಯೇ? OT ಕುಡಿಯದೆ ರವಿಯವರ ಬಾಯಿಂದ ಇಂತಹ ಕೊಳಕು ಹೇಳಿಕೆಗಳು ಹೇಗೆ ಬರಲು ಸಾಧ್ಯ?’ವೆಂದು ಕುಟುಕಿದ್ದಾರೆ.

ಇದನ್ನೂ ಓದಿ: ಜನಾರ್ಧನ ರೆಡ್ಡಿ ಹೊಸ ಪಕ್ಷ ಸ್ಥಾಪನೆ: ಸ್ಪರ್ಧೆಗೆ ಟಾರ್ಗೆಟ್ ಯಾರು!?

‘ವಾಜಪೇಯಿ, ಅಡ್ವಾಣಿ ತೆರೆಗೆ ಸರಿದ ಮೇಲೆ BJPಯಲ್ಲಿ ಸಂಸ್ಕಾರಹೀನ, ಚಾರಿತ್ರ್ಯಶೂನ್ಯ ವ್ಯಕ್ತಿಗಳೇ ತುಂಬಿಕೊಂಡಿದ್ದಾರೆ. ಹಿರಿಯಕ್ಕನ ಚಾಳಿ ಮನೆ‌ ಮಂದಿಗೆಲ್ಲಾ ಎಂಬಂತೆ BJPಯಲ್ಲಿರುವ ಬಹುತೇಕರು ಸಿ.ಟಿ.ರವಿಯರಂತೆ ಕೊಳಕು ಗಿರಾಕಿಗಳೆ. BJPಯಲ್ಲಿ ಯಾರಾದರೂ ಸಭ್ಯಸ್ಥರಿದ್ದಿದ್ದರೆ ರವಿಯವರಿಗೆ ಇಷ್ಟೊತ್ತಿಗೆ ಬೈದು ಬುದ್ದಿ ಹೇಳಬೇಕಿತ್ತಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

‘ಸಿ.ಟಿ.ರವಿಯವರೆ,’ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದುಹುದು ಎನ್ನಬೇಕು’ ಎಂಬುದು ಬಸವಣ್ಣನ ವಾಣಿ. ಬಸವಣ್ಣ ಹುಟ್ಟಿದ ನಾಡಿನಲ್ಲಿ ನಿಮ್ಮಂತಹವರ ಬಾಯಿಂದ ಇಂತಹ ಕೊಳಕು‌ ಮಾತುಗಳೇ? ಮೊದಲು ಸಂಸ್ಕಾರ ಕಲಿಯಿರಿ. ಆಮೇಲೆ ಮರ್ಮಾಘಾತದ ಮಾತು’ ಎಂದು ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Halal certificate: ಹಲಾಲ್ ಪ್ರಮಾಣ ಪತ್ರ ನೀಡುತ್ತಿದ್ಯಾ ಸರ್ಕಾರ?? ಉತ್ತರ ಇಲ್ಲಿದೆ…

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News