ನವದೆಹಲಿ: ಇತ್ತೀಚೆಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ ಡೊನಾಲ್ಡ್ ಟ್ರಂಪ್  ಈಗ ಮತ್ತಷ್ಟು ತೊಂದರೆಗೆ ಸಿಲುಕಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಟ್ರಂಪ್ ಆಡಳಿತದ ಮಾಜಿ ಸಹಾಯಕರ ಪ್ರಕಾರ ಮೆಲಾನಿಯಾ ಟ್ರಂಪ್ ' ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಪದವಿಯಿಂದ ಇಳಿದ ತಕ್ಷಣ ಅವರಿಗೆ ಡೈವೋರ್ಸ್ ನೀಡುವ ಸಾಧ್ಯತೆ ಇದೆ ಎಂದು ಎನ್ನುವ ವಿಚಾರವನ್ನು ಯುಕೆ ಡೈಲಿ ಮೇಲ್ ತನ್ನ ವರದಿಯಲ್ಲಿ ಪ್ರಕಟಿಸಿದೆ.


ಅಮೆರಿಕಾದ ಮಾಜಿ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರ ಹಿರಿಯ ಸಲಹೆಗಾರರಾಗಿ ನೇಮಕಗೊಂಡ ಮಾಜಿ ಸಹಾಯಕ ಸ್ಟೆಫನಿ ವೋಲ್ಕಾಫ್, ಟ್ರಂಪ್ಸ್ ಶ್ವೇತಭವನದಲ್ಲಿ ಪ್ರತ್ಯೇಕ ಮಲಗುವ ಕೋಣೆಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.


ಆದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ಸಹಾಯಕರಾಗಿದ್ದ ಮತ್ತೊಬ್ಬ ಮಾಜಿ ಸಹಾಯಕ ಒಮರೋಸಾ ಮನಿಗಾಲ್ಟ್ ನ್ಯೂಮನ್, ದಂಪತಿಗಳ 15 ವರ್ಷಗಳ ದಾಂಪತ್ಯ ಮುಗಿದಿದೆ ಎಂದು ಹೇಳಿದ್ದಾರೆ.'ಮೆಲಾನಿಯಾ ಅವರು ಕಚೇರಿಯಿಂದ ಹೊರಗುಳಿಯುವವರೆಗೆ ಪ್ರತಿ ನಿಮಿಷವನ್ನು ಎಣಿಸುತ್ತಿದ್ದಾರೆ ಮತ್ತು ಅವಳು ವಿಚ್ಚೇದನ ಪಡೆಯಬಹುದು ಎಂದು ತಿಳಿಸಿದ್ದಾರೆ.


2016 ರಲ್ಲಿ ಪತಿ ಜಯಗಳಿಸಿದಾಗ ಮೆಲಾನಿಯಾ ಟ್ರಂಪ್ ಕಣ್ಣೀರು ಸುರಿಸಿದ್ದಾರೆ ಎಂದು ಹೇಳಲಾಗುತ್ತದೆ, ತನ್ನ ಗೆಳೆತಿಯರು ತಾನು ಗೆಲ್ಲುತ್ತೇನೆಂದು ತಾನು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿಕೊಂಡಿದ್ದಾಳೆ.50 ರ ಹರೆಯದ ಮೆಲಾನಿಯಾ ಅವರು ತಮ್ಮ ಪತಿಯೊಂದಿಗೆ 'ಉತ್ತಮ ಸಂಬಂಧ' ಹೊಂದಿದ್ದಾರೆಂದು ಹೇಳಿದ್ದರೂ, ವಾಸ್ತವದಲ್ಲಿ ಅವರಿಬ್ಬರ ನಡುವೆ ಉತ್ತಮ ಸಂಬಂಧವಿಲ್ಲ ಎನ್ನಲಾಗುತ್ತಿದೆ.