ನವದೆಹಲಿ: ಜಗತ್ತಿನಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಚೀನಾ ಈಗ ಭಾರತದಲ್ಲಿ ಮಾತ್ರವಲ್ಲದೆ ಇತರ ದೇಶಗಳಲ್ಲೂ ಬೇಹುಗಾರಿಕೆ ಜಾಲವನ್ನು ವಿಸ್ತರಿಸುತ್ತಿದೆ. ಚೀನಾದ ಪತ್ತೇದಾರಿ ಜಾಲವು ತನ್ನ ನೆರೆಯ ರಾಷ್ಟ್ರವಾದ ಅಫ್ಘಾನಿಸ್ತಾನದಲ್ಲಿಯೂ ಬಹಿರಂಗಗೊಂಡಿದೆ. ದೇಶದಲ್ಲಿ ಗುಪ್ತಚರ ಮಾಹಿತಿ ಸಂಗ್ರಹಿಸುತ್ತಿದ್ದ 10 ಚೀನಾದ ಗೂಢಚಾರರ ಮೇಲೆ ಕಾಬೂಲ್ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಎನ್‌ಡಿಎಸ್ ಕಾಬೂಲ್‌ನಲ್ಲಿ 10 ಚೀನೀ ಗೂಢಚಾರರನ್ನು ಬಂಧಿಸಿದೆ:
ಮೂಲಗಳ ಪ್ರಕಾರ ಬೇಹುಗಾರಿಕೆ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿ ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯ (ಎನ್‌ಡಿಎಸ್) ಡಿಸೆಂಬರ್ 10 ರಂದು ಚೀನಾದ 10 ಜನರನ್ನು ಬಂಧಿಸಿದೆ. ಸಿಕ್ಕಿಬಿದ್ದವರೆಲ್ಲರೂ ಚೀನಾದ ಗುಪ್ತಚರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಪೈಕಿ ಇಬ್ಬರು ಭಯೋತ್ಪಾದಕ ಸಂಘಟನೆ ಹಕ್ಕಾನಿ ನೆಟ್‌ವರ್ಕ್‌ನೊಂದಿಗೆ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ. ಹಕ್ಕಾನಿ ಜಾಲವನ್ನು ತಾಲಿಬಾನ್‌ನ (Taliban) ಭೀಕರ ಮುಖವೆಂದು ಪರಿಗಣಿಸಲಾಗಿದೆ.


ಚೀನಾದ ಬೇಡಿಕೆಯನ್ನು ಒಪ್ಪದ ಅಫ್ಘಾನಿಸ್ತಾನ :
ಅಮೆರಿಕ ಅಫ್ಘಾನಿಸ್ತಾನದಿಂದ ಹಿಂದೆ ಸರಿಯುವ ಮಧ್ಯೆ ಚೀನಾ (China) ಅಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸುವಲ್ಲಿ ನಿರತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಪತ್ತೇದಾರಿ ಜಾಲದ ಬಹಿರಂಗಪಡಿಸುವಿಕೆಯು ಚೀನಾಕ್ಕೆ ಮುಜುಗರವಾಗಿ ಪರಿಣಮಿಸಿದೆ. ಅಫ್ಘಾನಿಸ್ತಾನದ ಮೇಲೆ ಪ್ರಭಾವ ಬೀರಿದ ಚೀನಾದ ಅಧಿಕಾರಿಗಳು ಈ ಪ್ರಕರಣವನ್ನು ನಿಗ್ರಹಿಸಲು ಮತ್ತು ಚೀನಾದ ನಾಗರಿಕರನ್ನು ಬಿಡುಗಡೆ ಮಾಡಲು ಪ್ರಯತ್ನಿಸಿದರು. ಆದರೆ ಅವರ ಬೇಡಿಕೆಯನ್ನು ಅಫ್ಘಾನಿಸ್ತಾನ ಪರಿಗಣಿಸಲಾಗಿಲ್ಲ.


ಇದನ್ನೂ ಓದಿ: ರೂಪಾಂತರಿ ಕೊರೊನಾ ನಡುವೆಯೂ ಭಾರತಕ್ಕೆ ಬರ್ತಾರಾ ಬ್ರಿಟನ್ ಪ್ರಧಾನಿ...?


ಅಮ್ರುಲ್ಲಾ ಸಲೇಹ್ ತನಿಖೆಯ ಮೇಲ್ವಿಚಾರಣೆ ನಡೆಸಲಿದ್ದಾರೆ:
ಏತನ್ಮಧ್ಯೆ ಪತ್ತೇದಾರಿ ಜಾಲ ಬಹಿರಂಗವಾದ ನಂತರ, ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಅಮ್ರುಲ್ಲಾ ಸಲೇಹ್ ಅವರಿಗೆ ಹಸ್ತಾಂತರಿಸಿದರು. ಅಮ್ರುಲ್ಲಾ ಸಲೇಹ್ ಅವರು ಅಫಘಾನ್ ಗುಪ್ತಚರ ಸಂಸ್ಥೆಯ ಮಾಜಿ ಮುಖ್ಯಸ್ಥರಾಗಿದ್ದಾರೆ. ಇಂತಹ  ಸೂಕ್ಷ್ಮ ಪ್ರಕರಣಗಳ ತನಿಖೆ ಬಗ್ಗೆ ಅವರಿಗೆ ಸಾಕಷ್ಟು ಅನುಭವವಿದೆ.


ಇದನ್ನೂ ಓದಿ: ಲಸಿಕೆ ಬಂದರೂ ಮುಂದಿನ ಹತ್ತು ವರ್ಷ ಜಗತ್ತನ್ನು ಕಾಡಲಿದೆ ಕರೋನಾ


ಅಫ್ಘಾನಿಸ್ತಾನವು ಚೀನಾಕ್ಕೆ ಅಲ್ಟಿಮೇಟಮ್ ನೀಡಿತು:
ಅಮುರುಲ್ಲಾ ಸಲೇಹ್ ಅವರು ಚೀನಾದ ರಾಯಭಾರಿ ವಾಂಗ್ ಯು ಅವರನ್ನು ಕಾಬೂಲ್‌ನಲ್ಲಿ ಭೇಟಿ ಮಾಡಿ ಚೀನಾದ ನಾಗರಿಕರ ಬಂಧನದ ಬಗ್ಗೆ ಮಾಹಿತಿ ನೀಡಿದರು. ಮೂಲಗಳ ಪ್ರಕಾರ ಈ ಪ್ರಕರಣದಲ್ಲಿ ಚೀನಾ ಕ್ಷಮೆಯಾಚಿಸಿದರೆ ಅಫ್ಘಾನಿಸ್ತಾನ (Afghanistan) ಚೀನೀ ನಾಗರಿಕರಿಗೆ ದಯೆ ತೋರಬಹುದು ಎಂದು ಅಮ್ರುಲ್ಲಾ ಸಲೇಹ್ ಚೀನಾದ ರಾಯಭಾರಿಗೆ ತಿಳಿಸಿದರು. ಒಂದೊಮ್ಮೆ ಚೀನಾ ಕ್ಷಮೆಯಾಚಿಸದಿದ್ದರೆ ಆಫ್ಘಾನ್ ತನ್ನ ದೇಶದ ಕಾನೂನಿನ ಅನ್ವಯ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಸಂದೇಶ ರವಾನಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.