ಲಸಿಕೆ ಬಂದರೂ ಮುಂದಿನ ಹತ್ತು ವರ್ಷ ಜಗತ್ತನ್ನು ಕಾಡಲಿದೆ ಕರೋನಾ

ಮುಂದಿನ ಹತ್ತು ವರ್ಷಗಳವರೆಗೆ ಕರೋನಾ ವೈರಸ್ ಅಸ್ತಿತ್ವದಲ್ಲಿರಲಿದೆ. ಕರೋನಾ ಮಹಾಮಾರಿಯಿಂದ ಸಂಭವಿಸಬಹುದಾದ ಆಪತ್ತಿನಿಂದ ರಕ್ಷಿಸಿಕೊಳ್ಳಬೇಕಾದರೆ, ಜಗತ್ತಿನ ಶೇ 60 ರಿಂದ 70 ರಷ್ಟು ಜನರಿಗೆ ಲಸಿಕೆ ನೀಡುವುದು ಅನಿವಾರ್ಯವಾಗಿದೆ. 

Written by - Zee Kannada News Desk | Last Updated : Dec 24, 2020, 06:05 PM IST
  • ಹತ್ತು ವರ್ಷಗಳವರೆಗೆ ಅಸ್ತಿತ್ವದಲ್ಲಿರಲಿದೆ ಕರೋನಾ
  • ಜಗತ್ತಿನ ಶೇ 60 ರಿಂದ 70 ರಷ್ಟು ಜನರಿಗೆ ಲಸಿಕೆ ನೀಡುವುದು ಅನಿವಾರ್ಯ
  • ವೈರಸ್ ನ ತೀವ್ರತೆ ಸಮಯಕ್ಕನುಗುಣವಾಗಿ ಬದಲಾಗಬಹುದು
ಲಸಿಕೆ ಬಂದರೂ ಮುಂದಿನ ಹತ್ತು ವರ್ಷ ಜಗತ್ತನ್ನು ಕಾಡಲಿದೆ ಕರೋನಾ title=
ಲಸಿಕೆ ಬಂದರೂ ಮುಂದಿನ ಹತ್ತು ವರ್ಷ ಜಗತ್ತನ್ನು ಕಾಡಲಿದೆ ಕರೋನಾ ಎಂದಿರುವ ಕರೋನಾ ಲಸಿಕೆ ತಯಾರಕ ತಂಡ ಮುಖ್ಯ ವಿಜ್ಞಾನಿ ಅಗುರ್ ಸಾಹಿನ್ (file photoe)

ನವದೆಹಲಿ : ವಿಶ್ವದ ಮೊದಲ ಕರೋನಾ ವೈರಸ್ ಲಸಿಕೆ  (Coronavirus Vaccine) ತಯಾರಕರು ಜಗತ್ತೇ ಬೆಚ್ಚಿ ಬೀಳುವ  ವಿಚಾರವನ್ನು ಬಯಲು ಮಾಡಿದ್ದಾರೆ. ಲಸಿಕೆ ತಯಾರಕರ ಪ್ರಕಾರ ಈ ವೈರಸ್ ಮುಂದಿನ ಅನೇಕ ವರ್ಷಗಳವರೆಗೆ ಅಸ್ತಿತ್ವದಲ್ಲಿ ಇರಲಿದೆ. ಸುಮಾರು ಹತ್ತು ವರ್ಷಗಳವರೆಗೆ ಕರೋನಾ ವೈರಸ್ ಅಸ್ತಿತ್ವದಲ್ಲಿ ಇರಲಿದೆ ಎಂದು ಅಮೆರಿಕಾದ  (USA)ಫೈಜರ್ ನ (Pfizer) ಕರೋನಾ ಲಸಿಕೆ ತಯಾರು ಮಾಡುವ ತಂಡದ ಪ್ರಮುಖ ವಿಜ್ಞಾನಿ ಅಗುರ್ ಸಾಹಿನ್ ಹೇಳಿದ್ದಾರೆ.

ಕರೋನಾ ವೈರಸ್  (COVID-19) ಬಗ್ಗೆ ಜಗತ್ತನ್ನು ಕಾಡುತ್ತಿದ್ದ ಅತಿ ದೊಡ್ಡ ಪ್ರಶ್ನೆಯೆಂದರೆ ಈ  ವೈರಸ್ ನಿಂದ  ಮುಕ್ತಿ ಯಾವಾಗ ಅನ್ನುವುದು. ಆದರೆ, ಫೈಜರ್ ನ ಪ್ರಮುಖ ವಿಜ್ಞಾನಿ ಹೇಳಿಕೆ ಪ್ರಕಾರ, ಕರೋನಾ ವೈರಸ್ ಇಷ್ಟು ಬೇಗ ನಿರ್ನಾಮವಾಗುವಂಥದ್ದಲ್ಲ. ಸಮಯಕ್ಕನುಗುಣವಾಗಿ ಈ ವೈರಸ್ ನ ಪ್ರಭಾವ ಹೆಚ್ಚು ಕಡಿಮೆ ಆಗುತ್ತಲೇ  ಇರುತ್ತದೆ. ಇದ್ದಕ್ಕಿಂದ್ದಂತೆ ವೈರಸ್ ನ ತೀವ್ರತೆ ಅಧಿಕವಾಗಲೂ ಬಹುದು. ಕರೋನಾ ವೈರಸ್ ಪ್ರಭಾವ ಇನ್ನೂ ಅನೇಕ ವರ್ಷಗಳವರೆಗೆ ಮುಂದುವರೆಯುತ್ತದೆ ಎಂದು ಆರಂಭದ ದಿನಗಳಲ್ಲಿಯೇ WHO ಸೇರಿದಂತೆ ಅನೇಕ ತಜ್ಞರು ಹೇಳಿದ್ದರು. 

ALSO READ: New Corona Strain: ಕ್ರಿಸ್‌ಮಸ್, ಹೊಸ ವರ್ಷದ ದೃಷ್ಟಿಯಿಂದ ಈ ನಗರಗಳಲ್ಲಿ Night Curfew

ಇನ್ನು ಈ ವೈರಸ್ ನ ನಂತರ ಜನರು  ಮೊದಲಿನಂತೆಯೇ ಸಾಮಾನ್ಯ ಜೀವನ ಸಾಗಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಅವರು ನೀಡಿರುವ ಉತ್ತರ ಕೂಡಾ ಸಾಮಾನ್ಯವಾಗಿರಲಿಲ್ಲ. ಇನ್ನು ಮುಂದೆ ಸಾಮಾನ್ಯ ಎಂಬ ಪದದ ಹೊಸ ಪರಿಭಾಷೆಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೆಕಾಗುತ್ತದೆ ಎಂದಿದ್ದಾರೆ. ಸಾಮಾನ್ಯ ಪದದ ಹೊಸ ಪರಿಭಾಷೆ ಅಂದರೆ ಜಗತ್ತಿನ ಎಲ್ಲಾ ದೇಶಗಳು ಮತ್ತೆ ಲಾಕ್ ಡೌನ್ ಜಾರಿಗೊಳಿಬೇಕು, ಎಲ್ಲವೂ ಬಂದ್ ಮಾಡಿ ಕುಳಿತುಕೊಳ್ಳಬೇಕು ಎಂದಲ್ಲ. ಇನ್ನೂ ಅನೇಕ ವರ್ಷಗಳವರೆಗೆ ಪ್ರತಿಯೊಬ್ಬರೂ ಕೂಡಾ ಎಚ್ಚರಿಕೆ ವಹಿಸಲೇಬೇಕು. ಜರ್ಮನಿಯ ಬಯೋಎನ್ ಟೆಕ್ ನ ಮುಖ್ಯ ಕಾರ್ಯಕಾರಿ ಅಧಿಕಾರಿ ಅಗುರ್ ಸಾಹಿನ್, ಅಮೆರಿಕಾದ ಔಷಧೀಯ  ಕಂಪನಿ ಫೈಜರ್ ಜೊತೆ ಸೇರಿ ಲಸಿಕೆ ಕಂಡು ಹಿಡಿಯುವ ಕಾರ್ಯ ಮಾಡಿದ್ದರು. ಅಲ್ಲದೆ ಅತಿ ಕಡಿಮೆ ಸಮಯದಲ್ಲಿ ಲಸಿಕೆ ತಯಾರಾಗಿದ್ದು, ಅವರು ತಯಾರಿಸಿದ ಲಸಿಕೆಗೆ ಅನುಮೋದನೆಯೂ ದೊರೆತಿದೆ. 

ALSO READ: Good News: ಆಕ್ಸ್‌ಫರ್ಡ್‌ COVID-19 ಲಸಿಕೆಯ ತುರ್ತು ಬಳಕೆಗೆ ಮುಂದಿನ ವಾರವೇ ಅನುಮತಿ ಸಾಧ್ಯತೆ

ಸಾಹಿನ್ ಪ್ರಕಾರ ಕರೋನಾ ಮಹಾಮಾರಿಯಿಂದ ಸಂಭವಿಸಬಹುದಾದ ಆಪತ್ತಿನಿಂದ ರಕ್ಷಿಸಿಕೊಳ್ಳಬೇಕಾದರೆ, ಜಗತ್ತಿನ ಶೇ 60 ರಿಂದ 70 ರಷ್ಟು ಜನರಿಗೆ ಲಸಿಕೆ ನೀಡುವುದು ಅನಿವಾರ್ಯವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G

iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News