Pakistan Inflation 2020: ಹಸಿವಿಂದ ಕಂಗಾಲಾದ ಪಾಕಿಸ್ತಾನ...! ಇಲ್ಲಿದೆ ಒಂದು ಮೊಟ್ಟೆಯ ಬೆಲೆ
Pakistan Inflation 2020: ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ರೂಪಿಯಾ ಮೌಲ್ಯ ನಿರಂತರವಾಗಿ ಕುಸಿಯುತ್ತಿದ್ದು, ದೇಶದ ಆರ್ಥಿಕ ಸ್ಥಿತಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ಇದರಲ್ಲಿ ಬೆಚ್ಚಿಬೀಳಿಸುವ ಅಂಕಿ ಎಂದರೆ ಅದು ಮೊಟ್ಟೆ ಬೆಲೆ.
ಇಸ್ಲಾಮಾ ಬಾದ್: Pakistan Inflation 2020: ದಾಖಲೆ ಮಟ್ಟದ ಹಣದುಬ್ಬರ, ಸಾಲದ ಬಿಕ್ಕಟ್ಟು, ಕುಸಿಯುತ್ತಿರುವ ಆರ್ಥಿಕತೆ ಮತ್ತು ಹಸಿವಿನಿಂದ ಬಳಲುತ್ತಿರುವ ಜನ, ಇದು ಇಮ್ರಾನ್ ಖಾನ್ ಅವರ ಹೊಸ ಪಾಕಿಸ್ತಾನದ ಇತ್ತೀಚಿನ ಚಿತ್ರಣ. ಪ್ರಸ್ತುತ ಪಾಕಿಸ್ತಾನದಲ್ಲಿ ಶೇ.25 ಕ್ಕೂ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಕೊರೊನಾ ಪ್ರಕೋಪ ಮತ್ತು ಚಳಿಯ ಹೊಡೆತಕ್ಕೆ ನಲುಗಿಹೋಗಿರುವ ಪಾಕಿಸ್ತಾನ ಇದೀಗ ಹಸಿವಿನಿಂದ ಬಳಲುತ್ತಿದೆ. ಪಾಕಿಸ್ತಾನದಲ್ಲಿ ಒಂದು ಮೊಟ್ಟೆಯ ಬೆಲೆ ರೂ.30 ಕ್ಕೆ ತಲುಪಿದ್ದರೆ, ಸಕ್ಕರೆ ಬೆಲೆ ಕೆ.ಜಿಗೆ 104 ರೂ. ಹಾಗೂ ಹಸಿ ಶುಂಟಿ ಬೆಲೆ 1000 ರೂ. ಪ್ರತಿ ಕೆ.ಜಿಗೆ ತಲುಪಿದೆ. ಅತ್ಯಾವಶ್ಯಕ ವಸ್ತುಗಳ ಬೆಲೆ ಇಳಿಕೆ ಮಾಡಿರುವುದಾಗಿ ಹೇಳಿ ಬೆನ್ನು ತಟ್ಟಿಕೊಳ್ಳುತ್ತಿರುವ ಇಮ್ರಾನ್ ಖಾನ್ ಅವರ ಹೊಸ ಪಾಕಿಸ್ತಾನದಲ್ಲಿ ಇದೆಲ್ಲಾ ನಡೆಯುತ್ತಿದೆ. ವಾಸ್ತವಿಕತೆಯನ್ನು ಗಮನಿಸಿದರೆ. ಇಲ್ಲಿ ಹಣದುಬ್ಬರ ಎಲ್ಲಾ ಹಳೆ ದಾಖೆಗಳನ್ನು ಮುರಿದಿದೆ.
ಇದನ್ನು ಓದಿ-Crisis In Pakistan:ನೂತನ ವರ್ಷದಲ್ಲಿ ಪಾಕಿಸ್ತಾನದಲ್ಲಿ ತಲೆದೂರಲಿದೆ ಮಹಾಸಂಕಟ
ಪಾಕ್ ನಲ್ಲಿ ಜನರು ಸದ್ಯ ಹಸಿವಿನಿಂದ ಬಳಲುತ್ತಿದ್ದಾರೆ. ರುಪಿಯಾ ಮೌಲ್ಯ ಡಾಲರ್ ಎದುರು ನಿರಂತರವಾಗಿ ಕುಸಿಯುತ್ತಿದ್ದು, ದೇಶದ ಆರ್ಥಿಕ ಸ್ಥಿತಿ ಇದುವರೆಗಿನ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದರಲ್ಲಿ ಎಲ್ಲಕ್ಕಿಂತ ಬೆಚ್ಚಿಬೀಳಿಸುವ ಸಂಗತಿ ಎಂದರೆ ಅದು ಮೊಟ್ಟೆ ಬೆಲೆ. ಪಾಕ್ ವೃತ್ತಪತ್ರಿಕೆ 'ದಿ ಡಾನ್'ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ದೇಶದ ಬಹುತೇಕ ಭಾಗಗಳಲ್ಲಿ ಮೊಟ್ಟೆ ಬೇಡಿಗೆ ಗಣನೀಯವಾಗಿ ಏರಿಕೆಯಾಗಿದ್ದು, ಒಂದು ಡಜನ್ ಮೊಟ್ಟೆಯ ಬೆಲೆ ರೂ.350ಕ್ಕೆ ತಲುಪಿದೆ. ಪಾಕಿಸ್ತಾನದ ಬಹುತೇಕ ಜನರು ತಮ್ಮ ಆಹಾರದಲ್ಲಿ ಮೊಟ್ಟೆಯನ್ನು ಬಳಸುತ್ತಾರೆ. ಆದರೆ, ಒಂದು ಮೊಟ್ಟೆಯ ಬೆಲೆ ರೂ.30ಕ್ಕೆ ತಲುಪಿದ ಕಾರಣ ಜನರಿಗೆ ಬದುಕು ಕಷ್ಟಕರ ಎನಿಸಲಾರಂಭಿಸಿದೆ.
ಇದನ್ನು ಓದಿ- ಮಾಜಿ ಪತ್ನಿ ಸೇರಿದಂತೆ ಎಲ್ಲರನ್ನೂ ಟ್ವಿಟ್ಟರ್ ನಲ್ಲಿ Unfollow ಮಾಡಿದ ಇಮ್ರಾನ್ ಖಾನ್
ಎಲ್ಲಾ ದಾಖಲೆಗಳನ್ನು ಮುರಿದ ಗೋದಿ ಬೆಲೆ
ಸದ್ಯ ಅಲ್ಲಿನ ಜನರು ಪಾಕಿಸ್ತಾನದ ಜನರು ರೊಟ್ಟಿ ತಿನ್ನಲು ಸಹ ಯೋಚಿಸುತ್ತಿದ್ದಾರೆ. ಈ ವರ್ಷ ಪಾಕಿಸ್ತಾನದಲ್ಲಿ ಗೋಧಿಯ ಬೆಲೆ ಎಲ್ಲಾ ದಾಖಲೆಗಳನ್ನು ಮುರಿದಿದೆ. 40 ಕೆಜಿ ಗೋಧಿ ಕಟ್ಟಾವನ್ನು ಇಲ್ಲಿ 2400 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಅಂದರೆ 60 ರೂಪಾಯಿ ಕೆ.ಜಿ. ಕಳೆದ ಡಿಸೆಂಬರ್‌ನಲ್ಲಿ ದೇಶದ ಪರಿಸ್ಥಿತಿ ತುಂಬಾ ಹದಗೆಟ್ಟ ಕಾರಣ ಗೋಧಿಯ ಬೆಲೆ 40 ಕೆ.ಜಿ.ಗೆ 2000 ರೂ.ಗೆ ತಲುಪಿತ್ತು. ಈ ವರ್ಷದ ಅಕ್ಟೋಬರ್‌ನಲ್ಲಿ ಈ ದಾಖಲೆ ಸಹ ಮುರಿದಿದೆ. ಪಾಕಿಸ್ತಾನ ಸದ್ಯ ಎದುರಿಸುತ್ತಿರುವ ಆಹಾರದ ಕೊರತೆ ಯಾವುದೇ ಒಂದು ದುಸ್ವಪ್ನಕ್ಕಿಂತ ಕಡಿಮೆ ಇಲ್ಲ ಎನ್ನಲಾಗುತ್ತಿದೆ. ಈ ಮೊದಲು ಈರುಳ್ಳಿಯನ್ನು ಜಗತ್ತಿಗೆ ರಫ್ತು ಮಾಡುತ್ತಿದ್ದ ಪಾಕಿಸ್ತಾನ ಇಂದು ಈರುಳ್ಳಿ ಬೆಲೆಯನ್ನು ಕಡಿಮೆ ಮಾಡಲು ಸ್ವತಃ ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿದೆ. ಹಿಟ್ಟು ಮತ್ತು ಸಕ್ಕರೆಯ ಬೆಲೆಯನ್ನು ಕಡಿಮೆ ಮಾಡಲು, ಇಮ್ರಾನ್ ಖಾನ್ (Imran Khan) ಸಂಪುಟ ನಿರಂತರವಾಗಿ ಸಭೆ ನಡೆಸುತ್ತಿದೆ.
ಇದನ್ನು ಓದಿ- ಪಾಕಿಸ್ತಾನದಲ್ಲಿ ಮತ್ತೆ ಹಿಂದೂ ದೇವಾಲಯಗಳ ಮೇಲೆ ದಾಳಿ, ಸ್ಥಳೀಯ ಮುಸಲ್ಮಾನರಿಂದ ಹಿಂದೂಗಳ ರಕ್ಷಣೆ
ಒಲೆಯೂ ಹೊತ್ತಿ ಉರಿಯಲ್ಲ
ಸ್ಥಳೀಯ ಮಾಧ್ಯಮಗಳ ಪ್ರಕಾರ, ಜನವರಿ 4 ರಿಂದ 20 ರ ನಡುವೆ, ಅನಿಲದ ಕೊರತೆಯು ಅತ್ಯಧಿಕವಾಗಲಿದೆ, ಇದರಿಂದಾಗಿ ಜನರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮುಂದಿನ ಕೆಲವು ದಿನಗಳಲ್ಲಿ ಸೂಯಿ ನಾರ್ದರ್ನ್ ದಿನಕ್ಕೆ 500 ಮಿಲಿಯನ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಅಡಿಗಳಷ್ಟು ಅನಿಲ ಕೊರತೆಯನ್ನು ಎದುರಿಸಲಿದೆ. ಈ ಹಿನ್ನೆಲೆಯಲ್ಲಿ, ಕಂಪನಿಯು ವಿದ್ಯುತ್ ಕ್ಷೇತ್ರಕ್ಕೆ ಅನಿಲ ಸರಬರಾಜನ್ನು ನಿಲ್ಲಿಸುವ ಸಾಧ್ಯತೆ ಇದೆ. ಆದರೆ ಇದರಿಂದ ದೇಶೀಯ ಗ್ರಾಹಕರ ಸಮಸ್ಯೆ ಬಗೆಹರಿಯುವುದಿಲ್ಲ. ಹೀಗಾಗಿ ಪಾಕಿಸ್ತಾನದಲ್ಲಿ ಹೊಸ ವರ್ಷದ ಸಂದರ್ಭದಲ್ಲಿ, ಬಹುತೇಕ ಮನೆಗಳಲ್ಲಿ ಓಲೆ ಉರಿಯುವುದಿಲ್ಲ ಎಂದೇ ಅಂದಾಜಿಸಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.