ಇಸ್ಲಾಮಾಬಾದ್: Crisis In Pakistan - ನೂತನ ವರ್ಷದ ಆರಂಭದಲ್ಲಿ ನೆರೆರಾಷ್ಟ್ರ ಪಾಕಿಸ್ತಾನದಲ್ಲಿ ಬಹುತೇಕ ಮನೆಗಳ ಓಲೆಗಳು ಹೊತ್ತಿ ಉರಿಯಲ್ಲ ಎನ್ನಲಾಗುತ್ತಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ನಿರ್ಲಕ್ಷವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಕಾಲಕಾಲಕ್ಕೆ ತಕ್ಕಂತೆ ಅನೀಲ ಖರೀದಿಯಲ್ಲಿ ಇಮ್ರಾನ್ ಅಷ್ಟೊಂದು ಆಸಕ್ತಿ ತೋರಿಲ್ಲ. ಹೀಗಾಗಿ ಪಾಕ್ ನಲ್ಲಿ ಗಂಭೀರ ಅನಿಲ ಕ್ಷಾಮ ತಲೆದೂರಲಿದೆ. ಪಾಕ್ ನಲ್ಲಿ ಅನಿಲ ಪೂರೈಕೆ ಮಾಡುವ ಕಂಪನಿ ಸುಯಿ ನಾರ್ದರ್ನ್ (Sui Northern) ಅನಿಲ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಸಮಸ್ಯೆ ಮತ್ತಷ್ಟು ಉಲ್ಭಣಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಂಪನಿ ಬಳಿ ಅನಿಲ ಪೂರೈಕೆ ನಿಲ್ಲಿಸುವ ಹೊರತು ಬೇರೆ ದಾರಿಯೇ ಉಳಿದಿಲ್ಲ.
ಇದನ್ನು ಓದಿ- ಮಾಜಿ ಪತ್ನಿ ಸೇರಿದಂತೆ ಎಲ್ಲರನ್ನೂ ಟ್ವಿಟ್ಟರ್ ನಲ್ಲಿ Unfollow ಮಾಡಿದ ಇಮ್ರಾನ್ ಖಾನ್
...ಆದರೂ ಕೂಡ ಸಮಸ್ಯೆ ಬಗೆಹರಿಯಲ್ಲ
ಸ್ಥಳೀಯ ಮಾಧ್ಯಮಗಳು ಮಾಡಿರುವ ವರದಿಯ ಪ್ರಕಾರ ಜನವರಿ 4 ರಿಂದ ಜನವರಿ 20 ರ ನಡುವೆ ಈ ಅನಿಲ ಕ್ಷಾಮ ಹೆಚ್ಚಾಗಿರಲಿದ್ದು, ಜನಸಾಮಾನ್ಯರಿಗೆ ಭಾರಿ ಸಮಸ್ಯೆ ಎದುರಾಗಲಿದೆ. ಮುಂಬರುವ ದಿನಗಳಲ್ಲಿ ಸುಯಿ ನಾರ್ದನ್ ಕಂಪನಿ ನಿತ್ಯ ಸುಮಾರು 500 ಮಿಲಿಯನ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಅಡಿ ಅನಿಲ ಕೊರತೆಯ ವಿರುದ್ಧ ಹೋರಾಡಲಿದೆ. ಈ ಹಿನ್ನೆಲೆಯಲ್ಲಿ ಕಂಪನಿ ವಿದ್ಯುತ್ ಪೂರೈಕಾ ಕಂಪನಿಗಳಿಗೆ ಗ್ಯಾಸ್ ಸಪ್ಲೈ ನಿಲ್ಲಿಸುವ ಸಾಧ್ಯತೆ ಇದೆ. ಆದರೆ ಇದರಿಂದಲೂ ಕೂಡ ಸ್ಥಳೀಯ ಗ್ರಾಹಕರ ಕೊರತೆ ನೀಗಲ್ಲ. ಇದರರ್ಥ ಹೊಸವರ್ಷದ ಆರಂಭದಲ್ಲಿ ಪಾಕಿಸ್ತಾನದ ಬಹುತೇಕ ಮನೆಗಳಲ್ಲಿ ಓಲೆ ಹೊತ್ತಿ ಉರಿಯಲ್ಲ .
ಇದನ್ನು ಓದಿ- ಪಾಕಿಸ್ತಾನದಲ್ಲಿ ಮತ್ತೆ ಹಿಂದೂ ದೇವಾಲಯಗಳ ಮೇಲೆ ದಾಳಿ, ಸ್ಥಳೀಯ ಮುಸಲ್ಮಾನರಿಂದ ಹಿಂದೂಗಳ ರಕ್ಷಣೆ
ಹಲವು ಕೈಗಾರಿಕೆಗಳಿಗೆ ಅನಿಲ ಸರಬರಾಜು ನಿಲ್ಲಿಸಲಾಗಿದೆ
ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಇಮ್ರಾನ್ ಖಾನ್(Imran Khan) ಅವರ ಸರ್ಕಾರವು ಸಮಯಕ್ಕೆ ಸರಿಯಾಗಿ ಅನಿಲವನ್ನು ಖರೀದಿಸಲಿಲ್ಲ, ಇದರಿಂದಾಗಿ ಬಿಕ್ಕಟ್ಟು ತೀವ್ರವಾಗಿದೆ. ರಸಗೊಬ್ಬರ ಸೇರಿದಂತೆ ಹಲವು ಕೈಗಾರಿಕೆಗಳಿಗೆ ಈಗಾಗಲೇ ಅನಿಲ ಸರಬರಾಜನ್ನು ನಿಲ್ಲಿಸಲಾಗಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ. ನೈಜೀರಿಯಾದಿಂದ ಅನಿಲ ಸಾಗಿಸುವ ಟ್ಯಾಂಕರ್ಗಳ ವಿಳಂಬದಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ ಎಂದು ಅವರು ಹೇಳಿದ್ದಾರೆ. ಅನಿಲ ಪೂರೈಕೆ ಅಸ್ತವ್ಯಸ್ತಗೊಂಡಿದ್ದರಿಂದ ಪಂಜಾಬ್ನ ಜನರು ಹೆಚ್ಚಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸರ್ಕಾರ ಈಗ ಕೈಗಾರಿಕೆಗಳ ಅನಿಲವನ್ನು ನಿಲ್ಲಿಸಿ ಜನರ ಮನೆಗಳಿಗೆ ಅನಿಲ ಪೂರೈಕೆ ಮಾಡುವಲ್ಲಿ ನಿರತವಾಗಿದೆ.
ಇದನ್ನು ಓದಿ- ಇಮ್ರಾನ್ ಖಾನ್ ಮಾದಕ ವ್ಯಸನಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ
ಹೊಸ ಪಾಕಿಸ್ತಾನದಲ್ಲಿ ಜನರ ಪರದಾಟ
ಇಮ್ರಾನ್ ಖಾನ್ ಅಧಿಕಾರಕ್ಕೆ ಬರುವ ಮೊದಲು 'ಹೊಸ ಪಾಕಿಸ್ತಾನ' ವಾಗ್ದಾನ ಮಾಡಿದ್ದರು. ಆದರೆ ಅವರ ಆಡಳಿತ ಕಾಲದಲ್ಲಿ ಜನರ ಸಮಸ್ಯೆಗಳು ಕಡಿಮೆಯಾಗುವುದಕ್ಕಿಂತ ಹೆಚ್ಚಾಗಿದೆ. ಪಾಕಿಸ್ತಾನದಲ್ಲಿ ಹಣದುಬ್ಬರ ಹೆಚ್ಚಾಗಿದೆ, ತರಕಾರಿಗಳ ಬೆಲೆ ಭಾರಿ ಗಗನಮುಖಿಯಾಗಿವೆ. ಪರಿಸ್ಥಿತಿ ಯಾವ ಮಟ್ಟಕ್ಕೆ ಬಿಗಡಾಯಿಸಿದೆ ಎಂದರೆ ಎಂದರೆ, ಜನರು ತರಕಾರಿಗಳನ್ನು ಖರೀದಿಸುವ ಮೊದಲು ನೂರು ಬಾರಿ ಯೋಚಿಸಬೇಕು. ಇದರ ಹೊರತಾಗಿಯೂ, ಖಾನ್ ಸರ್ಕಾರಕ್ಕೆ ಯಾವುದೇ ಚಿಂತೆ ಇಲ್ಲ. ಸಮಯಕ್ಕೆ ಸರಿಯಾಗಿ ಅನಿಲವನ್ನು ಖರೀದಿಸದ ಕಾರಣ ಅವರ ನಿರ್ಲಕ್ಷ್ಯದ ತೀವ್ರತೆಯನ್ನುಈಗ ಸಾರ್ವಜನಿಕರು ಭರಿಸಬೇಕಾದ ಪರಿಸ್ಥಿತಿ ಇದೆ.
ಇದನ್ನು ಓದಿ- ಪುಲ್ವಾಮಾ ದಾಳಿ ಮಾಡಿದ್ದೇ ನಾವು, ಇದು ನಮ್ಮ ಮಹತ್ಸಾಧನೆ ಎಂದ ಪಾಕಿಸ್ತಾನ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.