Pakistan flood : ಮಾನ್ಸೂನ್ ಮಳೆಯಿಂದಾಗಿ ಅತ್ಯಂತ ಭೀಕರ ಪ್ರವಾಹಕ್ಕೆ ಪಾಕಿಸ್ತಾನ ಸಾಕ್ಷಿಯಾಗಿದೆ. ದೇಶದ ಶೇಕಡಾ 70 ರಷ್ಟು ಭಾಗವು ಜಲಾವೃತವಾಗಿದೆ. ಭೀಕರ ನೆರೆಯಿಂದಾಗಿ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನೂರಾರು ಸಾವಿರ ಎಕರೆಗಳಲ್ಲಿದ್ದ ಬೆಳೆಗಳು ನಾಶವಾಗಿವೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಟ 35 ಶತಕೋಟಿ ಜನರು ಪ್ರವಾಹದಿಂದ ಸ್ಥಳಾಂತರಗೊಂಡಿದ್ದಾರೆ. ಪ್ರವಾಹವು ಗಿಲ್ಗಿಟ್ - ಬಾಲ್ಟಿಸ್ತಾನ್, ಖೈಬರ್ ಪುಖ್ತುನ್ಖ್ವಾ ಮತ್ತು ದಕ್ಷಿಣ ಪಂಜಾಬ್ ಪ್ರದೇಶದಲ್ಲಿ ಬಲೂಚಿಸ್ತಾನ್ ಮತ್ತು ಸಿಂಧ್ ಪ್ರಾಂತ್ಯದಲ್ಲಿ ಅಪಾರ ಹಾನಿಯನ್ನುಂಟು ಮಾಡಿದೆ. ಪಾಕಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೋಮವಾರ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ಕನಿಷ್ಟ 1,061 ಮಂದಿ ಸಾವನ್ನಪ್ಪಿದ್ದಾರೆ ಮತ್ತು 1,575 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಈ ದಿನಾಂಕಗಳಲ್ಲಿ ಜನಿಸಿದವರು ತುಂಬಾ ಅದೃಷ್ಟವಂತರು, ನೀವು ಎಷ್ಟು Lucky ಇಲ್ಲಿ ತಿಳಿಯಿರಿ


ಮೊದಲೇ ಆರ್ಥಿಕ ಕುಸಿತದಿಂದ ತತ್ತರಿಸಿರುವ ಪಾಕಿಸ್ತಾನಕ್ಕೆ ಪ್ರವಾಹದಿಂದಾಗಿ USD 10 ಶತಕೋಟಿಗಳಷ್ಟು ನಷ್ಟವಾಗಿದೆ ಎಂದು ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಹೇಳಿದ್ದಾರೆ. ಭೀಕರ ದುರಂತಗಳಲ್ಲಿ ಒಂದನ್ನು ನಿಭಾಯಿಸಲು ಸಾಧ್ಯವಾಗದೆ, ಪಾಕಿಸ್ತಾನವು ಅಂತಾರಾಷ್ಟ್ರೀಯ ಸಹಾಯವನ್ನು ಕೋರಿದೆ ಮತ್ತು ಜಗತ್ತು ಪ್ರತಿಕ್ರಿಯಿಸಿದೆ, ಹಲವಾರು ದೇಶಗಳಿಂದ ಮಾನವೀಯ ನೆರವು ಮತ್ತು ಒಗ್ಗಟ್ಟಿನ ಸಂದೇಶಗಳು ಬರುತ್ತಿವೆ.


ವಿಪತ್ತಿನ ಕಾರಣ ಬಲೂಚಿಸ್ತಾನ್, ಸಿಂಧ್ ಮತ್ತು ದಕ್ಷಿಣ ಪಂಜಾಬ್‌ನಿಂದ ತರಕಾರಿಗಳ ಪೂರೈಕೆ ಮೇಲೆ ಪರಿಣಾಮ ಬೀರಿದೆ. ವಿನಾಶಕಾರಿ ಪ್ರವಾಹದಿಂದಾಗಿ ದೇಶವು ವಿವಿಧ ತರಕಾರಿಗಳು ಮತ್ತು ಹಣ್ಣುಗಳ ಬೆಲೆಗಳಲ್ಲಿ ಭಾರಿ ಏರಿಕೆಗೆ ಸಾಕ್ಷಿಯಾಗಿದೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಇಸ್ಮಾಯಿಲ್, ಇತ್ತೀಚಿನ ಪ್ರವಾಹಗಳು ದೇಶಾದ್ಯಂತ ಬೆಳೆಗಳನ್ನು ನಾಶಪಡಿಸಿದ ನಂತರ ಜನರಿಗೆ ಅನುಕೂಲವಾಗುವಂತೆ ಸರ್ಕಾರವು "ಭಾರತದಿಂದ ತರಕಾರಿಗಳು ಮತ್ತು ಇತರ ಖಾದ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳುವುದನ್ನು ಪರಿಗಣಿಸಬಹುದು" ಎಂದು ಹೇಳಿದರು ಎಂದು ಸರ್ಕಾರಿ ಸ್ವಾಮ್ಯದ ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ. ಭೀಕರ ಪ್ರವಾಹದಿಂದ ಬೆಳೆ ನಾಶವಾಗಿದ್ದು, ತರಕಾರಿ, ಹಣ್ಣುಗಳ ಬೆಲೆ ಗಗನಕ್ಕೇರಿದೆ. 


ಇದನ್ನೂ ಓದಿ : Google Chrome Feature: ಬ್ರೌಸಿಂಗ್ ಮಾತ್ರವಲ್ಲ, ಲೈಬ್ರೆರಿಯಾಗಿಯೂ ಕಾರ್ಯನಿರ್ವಹಿಸುತ್ತೆ ಗೂಗಲ್


ಭಾರತದಿಂದ ತರಕಾರಿಗಳು ಮತ್ತು ಇತರ ಖಾದ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳುವುದನ್ನು ಸರ್ಕಾರ ಪರಿಗಣಿಸಬಹುದು ಎಂದು ಇಸ್ಮಾಯಿಲ್ ಹೇಳಿದರು. ಇಸ್ಲಾಮಾಬಾದ್ 2019 ರಲ್ಲಿ ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ನವದೆಹಲಿಯೊಂದಿಗಿನ ವ್ಯಾಪಾರ ಸಂಬಂಧಗಳನ್ನು ಡೌನ್‌ಗ್ರೇಡ್ ಮಾಡಿತ್ತು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.