Pakistan Flood: ಟೊಮೆಟೊ ಕೆಜಿಗೆ 500 ರೂಪಾಯಿ, 300 ರೂ. ಗಡಿ ಮುಟ್ಟಿದ ಈರುಳ್ಳಿ

Floods in Pakistan: ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಪ್ರವಾಹದಿಂದ ಭಾರೀ ಬೆಲೆ ಹಾನಿ ಆಗಿದೆ. ಇದರಿಂದಾಗಿ ಲಾಹೋರ್‌ನಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ಟೊಮ್ಯಾಟೋ ಬೆಲೆ ಪ್ರತಿ ಕೆಜಿಗೆ 500ರೂ. ತಲುಪಿದ್ದರೆ, ಈರುಳ್ಳಿ ದರ 300 ರೂ. ಗಡಿ ದಾಟಿದೆ.

Written by - Yashaswini V | Last Updated : Aug 29, 2022, 10:37 AM IST
  • ಪಾಕಿಸ್ತಾನದಲ್ಲಿ ಟೊಮ್ಯಾಟೊ ಬೆಲೆ ಆರು ಪಟ್ಟು ಹೆಚ್ಚಾಗಿದೆ.
  • ಸಿಂಧ್‌ನಲ್ಲಿನ ಸರ್ಕಾರಿ ಗೋಡೌನ್‌ಗಳಲ್ಲಿ ಸಂಗ್ರಹವಾಗಿರುವ ಕನಿಷ್ಠ ಎರಡು ಮಿಲಿಯನ್ ಟನ್ ಗೋಧಿ ಮಳೆ ಮತ್ತು ಪ್ರವಾಹದಿಂದಾಗಿ ಹಾಳಾಗಿದೆ
  • ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ಕಬ್ಬು ಮತ್ತು ಹತ್ತಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದೆ.
Pakistan Flood: ಟೊಮೆಟೊ ಕೆಜಿಗೆ 500 ರೂಪಾಯಿ, 300 ರೂ. ಗಡಿ ಮುಟ್ಟಿದ ಈರುಳ್ಳಿ  title=
Pakistan Flood

ಪಾಕಿಸ್ತಾನದಲ್ಲಿ ಪ್ರವಾಹ ಪರಿಣಾಮ: ಪಾಕಿಸ್ತಾನದಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದಿಂದಾಗಿ ಸಾಕಷ್ಟು ಬೆಳೆ ಹಾನಿ ಸಂಭವಿಸಿದೆ. ಇದರಿಂದಾಗಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ಸಮಾ ಟಿವಿ ವರದಿಯ ಪ್ರಕಾರ, ಪ್ರವಾಹದಿಂದ ಪೂರೈಕೆ ಸರಪಳಿಯು ಅಸ್ತವ್ಯಸ್ತಗೊಂಡ ನಂತರ ಟೊಮ್ಯಾಟೋ ಬೆಲೆ ಪ್ರತಿ ಕೆಜಿಗೆ 500 ರೂ. ತಲುಪಿದ್ದರೆ, ಈರುಳ್ಳಿ ದರ ರೂ.300 ಮತ್ತು ನಿಂಬೆಹಣ್ಣು ರೂ.400 ಪ್ರತಿ ಕೆಜಿಗೆ ಮಾರಾಟವಾಗುತ್ತಿದೆ. 

ವರದಿಯೊಂದರ ಪ್ರಕಾರ,  ಟೊಮ್ಯಾಟೊ ಬೆಲೆ ಕೆಜಿಗೆ 80 ರೂ.ಗಿಂತ ಕನಿಷ್ಠ ಆರು ಪಟ್ಟು ಹೆಚ್ಚಾಗಿದೆ. ಆದರೆ ಈರುಳ್ಳಿ ಕೆಜಿಗೆ ಅಧಿಕೃತ ದರ 61 ರೂ.ಗಿಂತ ಐದು ಪಟ್ಟು ಹೆಚ್ಚು ಮಾರಾಟವಾಗುತ್ತಿದೆ ಎನ್ನಲಾಗಿದೆ. ಇದಲ್ಲದೆ, ಶುಂಠಿ, ಬೆಳ್ಳುಳ್ಳಿ ಬೆಲೆಯೂ ಏರಿಕೆಯಾಗಿದೆ. 

ಇದನ್ನೂ ಓದಿ- ಮನೆಯಲ್ಲಿ ಅಮಿತಾಬ್ ಬಚ್ಚನ್ ಪ್ರತಿಮೆ.. ಇದು ಭಾರತೀಯ - ಅಮೆರಿಕನ್ ಕುಟುಂಬದ ಅಭಿಮಾನ

ಸಮಾ ಟಿವಿ ವರದಿಯ ಪ್ರಕಾರ, ಹಠಾತ್ ಪ್ರವಾಹಗಳು ಮತ್ತು ಉಕ್ಕಿ ಹರಿಯುವ ನದಿಗಳು ಪಾಕಿಸ್ತಾನದಲ್ಲಿ ವಿನಾಶವನ್ನುಂಟುಮಾಡಿದೆ, ಪ್ರಾಥಮಿಕ ಅಂದಾಜಿನ ಪ್ರಕಾರ ದೇಶವು ಈಗಾಗಲೇ $ 5.5 ಬಿಲಿಯನ್ ನಷ್ಟವನ್ನು ಅನುಭವಿಸಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ- Russia-Ukraine Conflict: ಪಾಶ್ಚಾತ್ಯ ರಾಷ್ಟ್ರಗಳ ಧ್ವಂದ್ವ ನೀತಿ ಪ್ರಶ್ನಿಸಿದ ರಷ್ಯಾ..!

ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ಕಬ್ಬು ಮತ್ತು ಹತ್ತಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು, ಈರುಳ್ಳಿ, ಟೊಮೆಟೊ ಮತ್ತು ಖಾರಿಫ್ ಮೆಣಸಿನಕಾಯಿಗಳು ಭಾಗಶಃ ಹಾನಿಗೊಳಗಾಗಿವೆ. ಹತ್ತಿ ಬೆಳೆಗಳ ನಷ್ಟ ಮಾತ್ರ $2.6 ಬಿಲಿಯನ್ ಎಂದು ಅಂದಾಜಿಸಲಾಗಿದೆ.  ಪಾಕಿಸ್ತಾನದ ಜವಳಿ ಮತ್ತು ಸಕ್ಕರೆ ರಫ್ತು ಒಂದು ಬಿಲಿಯನ್ ಡಾಲರ್‌ಗೆ ಕುಸಿಯಬಹುದು ಎಂದು ತಜ್ಞರು ನಂಬಿದ್ದಾರೆ. 

ಸಮಾ ಟಿವಿ ವರದಿಯ ಪ್ರಕಾರ, ಸಿಂಧ್‌ನಲ್ಲಿನ ಸರ್ಕಾರಿ ಗೋಡೌನ್‌ಗಳಲ್ಲಿ ಸಂಗ್ರಹವಾಗಿರುವ ಕನಿಷ್ಠ ಎರಡು ಮಿಲಿಯನ್ ಟನ್ ಗೋಧಿ ಮಳೆ ಮತ್ತು ಪ್ರವಾಹದಿಂದಾಗಿ ಹಾಳಾಗಿದೆ, ಇದು ದೇಶದ ಆಹಾರ ಭದ್ರತೆಗೆ ಅಪಾಯವನ್ನುಂಟುಮಾಡಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News