ಇಸ್ಲಾಮಾಬಾದ್: ಪಾಕಿಸ್ತಾನವು ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಭೀಕರ ಪ್ರವಾಹವನ್ನು ಅನುಭವಿಸುತ್ತಿದೆ ಮತ್ತು ದಿ ನ್ಯೂಸ್ ಇಂಟರ್ನ್ಯಾಷನಲ್ ಪ್ರಕಾರ, ಇದು ದೇಶದಲ್ಲಿ 5.7 ಮಿಲಿಯನ್‌ಗಿಂತಲೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
ಪಾಕ್ ನೆಲ್ಲೆಡೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ಪ್ರಾಂತ್ಯಗಳು ಈಗ ನೀರಿನಲ್ಲಿ ಮುಳುಗಿವೆ, ಅಷ್ಟೇ ಅಲ್ಲದೆ ಕಳೆದ ಕೆಲವು ದಿನಗಳಲ್ಲಿ ಲಕ್ಷಾಂತರ ಜನರನ್ನು ಸಂತ್ರಸ್ತರನ್ನಾಗಿ ಮಾಡಿದೆ.
ಇದನ್ನೂ ಓದಿ- ಬಾಲಕಿಯರ ಮೇಲೆ ದೌರ್ಜನ್ಯ ಆರೋಪ.. ಮುರುಘಾ ಶ್ರೀಗಳು ಪೊಲೀಸ್ ವಶಕ್ಕೆ!?
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಪ್ರಕಾರ ಸಾವಿನ ಸಂಖ್ಯೆ ಈಗಾಗಲೇ 1000 ದಾಟಿದೆ ಮತ್ತು ಜುಲೈ 14 ರಿಂದ ಸುಮಾರು 1500 ಜನರು ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲದೆ ಪ್ರವಾಹದಿಂದಾಗಿ 719,558 ಜಾನುವಾರುಗಳು ಸಾವನ್ನಪ್ಪಿದ್ದು, ಸುಮಾರು 949,858 ಮನೆಗಳು ನಾಶವಾಗಿವೆ ಎಂದು ನ್ಯೂಸ್ ಇಂಟರ್ನ್ಯಾಷನಲ್ ವರದಿ ಮಾಡಿದೆ.
Images from Chashma Barrage in #Mianwali district. Very High Flood alert is active in the area.#PakistanFloods pic.twitter.com/lfDsGsI8GS
— The Intel Consortium (@INTELPSF) August 27, 2022
ಇದನ್ನೂ ಓದಿ- ಇನ್ನು 24 ಗಂಟೆಗಳಲ್ಲಿ ಈ ರಾಶಿಯವರ ಭಾಗ್ಯ ಬದಲಿಸಲಿದ್ದಾನೆ ಶನಿ ಮಹಾತ್ಮ..! ತೆರೆಯಲಿದ್ದಾನೆ ಅದೃಷ್ಟದ ಬಾಗಿಲು
ಬಲೂಚಿಸ್ತಾನ್, ಖೈಬರ್ ಪಖ್ತುನ್ಖ್ವಾ, ಗಿಲ್ಗಿಟ್ ಬಾಲ್ಟಿಸ್ತಾನ್ ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ ಅತಿ ಹೆಚ್ಚಿನ ಹಾನಿಯಾಗಿದೆ ಎನ್ನಲಾಗಿದೆ.ಇದರಿಂದಾಗಿ ಈಗ ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು ಘೋಷಿಸಲಾಗಿದ್ದು, ಪೀಡಿತ ಪ್ರದೇಶಗಳಲ್ಲಿ ಸೈನ್ಯವನ್ನು ನಿಯೋಜಿಸಲಾಗಿದೆ.ಸೇನೆಯು ಪಾಕಿಸ್ತಾನದ ಸುತ್ತ ರಕ್ಷಣಾ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದೆ ಮತ್ತು ಇನ್ನೂ ಅನೇಕ ಪ್ರದೇಶಗಳು ನೀರಿನಲ್ಲಿ ಮುಳುಗಿವೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ಅಧಿಕಾರಿಗಳು ವಿಶ್ವದಾದ್ಯಂತ ಹಲವಾರು ರಾಷ್ಟ್ರಗಳಿಗೆ ನೆರವನ್ನು ಕೋರಿದ್ದಾರೆ.
ಈಗ ಮಳೆಯು ಸ್ವಲ್ಪಮಟ್ಟಿಗೆ ನಿಂತಿದ್ದರೂ, ಪಾಕಿಸ್ತಾನದ ಹವಾಮಾನ ಇಲಾಖೆ (ಪಿಎಂಡಿ) ಪ್ರವಾಹ ಮುನ್ಸೂಚನೆ ವಿಭಾಗ (ಎಫ್‌ಎಫ್‌ಡಿ) ಮತ್ತೊಮ್ಮೆ ನೌಶೇರಾ ಮತ್ತು ಇತರ ಹತ್ತಿರದ ಪ್ರದೇಶಗಳಿಗೆ ಎಚ್ಚರಿಕೆ ನೀಡಿದೆ. ಕಾಬೂಲ್ ನದಿಯು ಉಕ್ಕಿ ಹರಿಯುವ ನಿರೀಕ್ಷೆಯಿದೆ ಮತ್ತು ಈ ಪ್ರದೇಶದಲ್ಲಿ ಹೆಚ್ಚಿನ ಹಾನಿ ಉಂಟಾಗುತ್ತದೆ ಎಂದು ಅವರು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.