ನವದೆಹಲಿ: ಕರೋನಾ ಲಸಿಕೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಒಂದು  ಸಕಾರಾತ್ಮಕ ಸುದ್ದಿ ಪ್ರಕಟಗೊಂಡಿದ್ದು, ಇದು ಈ ವೈರಸ್ ವಿರುದ್ಧ ಹೋರಾಡುವ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುತ್ತದೆ. ಯುಎಸ್ ಔಷಧಿ ತಯಾರಕ ಕಂಪನಿ ಫೈಜರ್ (Pfizer) ಮೂರನೇ ಹಂತದ ಕರೋನಾ ಲಸಿಕೆಯ ಅಂತಿಮ ವಿಶ್ಲೇಷಣೆಯು 95 ಪ್ರತಿಶತದಷ್ಟು ಪರಿಣಾಮಕಾರಿ ಎಂದು ತೋರಿಸಿದೆ ಎಂದು ಹೇಳಿದೆ. ಇದರೊಂದಿಗೆ, ಕಂಪನಿಯು ಸುರಕ್ಷತಾ ಮಾನದಂಡಗಳಿಗೆ ಸಹ ಮೆಟ್ಟಿ ನಿಂತಿದೆ ಎಂದು ಹೇಳಿಕೊಂಡಿದೆ. ಬುಧವಾರ ಕಂಪನಿಯ ಬಗ್ಗೆ ಮಾಹಿತಿ ನೀಡಿ, ವಿಶ್ಲೇಷಣೆಯಲ್ಲಿ ಇದು ವಯಸ್ಕರಲ್ಲಿಯೂ ಸಹ ಪರಿಣಾಮಕಾರಿಯಾಗಿದೆ ಮತ್ತು ಯಾವುದೇ ರೀತಿಯ ಗಂಭೀರ ಅಡ್ಡಪರಿಣಾಮಗಳನ್ನು ಹೊಂದಿಲ್ಲ  ಎಂದು ಅದು ಹೇಳಿದೆ. ಈಗ ಕಂಪನಿಯು ಈ ಲಸಿಕೆಯ ತುರ್ತು ಪರಿಸ್ಥಿತಿಯನ್ನು ಬಳಸಲು ಅನುಮತಿ ಕೋರಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- Pfizer corona vaccine: ಮೈನಸ್ 70 ಡಿಗ್ರಿ ಸೆಲ್ಸಿಯಸ್ ನಲ್ಲಿ ಇಟ್ಟರೆ ಮಾತ್ರ ಈ ಲಸಿಕೆ ಸುರಕ್ಷಿತ..!


ಕಂಪನಿಯ ಪ್ರಕಾರ ಟ್ರಯಲ್ ನಲ್ಲಿ ಭಾಗಿಯಾಗಿರುವ 170 ವಾಲೆಂಟಿಯರ್ ಮೇಲೆ ಕೊರೊನಾ ಸೋಂಕು ಪತ್ತೆಯಾಗಿದೆ. ಇದಾಲ್ಲಿ 160 ಜನರಿಗೆ ಪ್ಲೆಸಿಬೋ ಅಥವಾ ಪ್ಲೇನ್ ಲಸಿಕೆಯ ಶಾಟ್ ನೀಡಲಾಗಿದ್ದು, ಉಳಿದ 8 ಜನರಿಗೆ ನಿಜವಾದ ವ್ಯಾಕ್ಸಿನ್ ಅನ್ನು ನೀಡಲಾಗಿತ್ತು ಎಂದು ಹೇಳಿದೆ. ಕೊನೆಯ ಫಲಿತಾಂಶಗಳಲ್ಲಿ ಶೇ.95ರಷ್ಟು ವ್ಯಾಕ್ಸಿನ್ ಯಶಸ್ವಿಯಾಗಿದೆ ಎಂದು ಕಂಪನಿ ಹೇಳಿದೆ.


ಮೂರನೇ ಟ್ರಯಲ್ ಯಾವಾಗ ಆರಂಭಗೊಂಡಿತ್ತು
ಮಾಹಿತಿಯ ಪ್ರಕಾರ, ಈ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಜುಲೈ 27 ರಂದು ಪ್ರಾರಂಭವಾಗಿತ್ತು. ಇದರಲ್ಲಿ 43 ಸಾವಿರ 661 ಸ್ವಯಂಸೇವಕರು ಭಾಗಿಯಾಗಿದ್ದಾರೆ ಎಂದು ಫೈಜರ್ ಹೇಳಿದೆ. ಇದರಲ್ಲಿ 41 ಸಾವಿರ 135 ಸ್ವಯಂಸೇವಕರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.


ಇದನ್ನು ಓದಿ-  Good News: Pfizer ಈ ಕೊರೊನಾ ವ್ಯಾಕ್ಸಿನ್ ಶೇ.90ರಷ್ಟು ಯಶಸ್ವಿ, ಶೀಘ್ರದಲ್ಲಿಯೇ ಅನುಮೋದನೆ ಸಿಗುವ ಸಾಧ್ಯತೆ


ನಿಖರವಾಗಿ ಒಂದು ವಾರದ ಹಿಂದೆ ಫೈಸರ್ ತನ್ನ ಲಸಿಕೆ 90 ಪ್ರತಿಶತದಷ್ಟು ಪರಿಣಾಮಕಾರಿಲಸಿಕೆಯಾಗಿದೆ ಎಂದು ಘೋಷಿಸಿತ್ತು. ಫೈಜರ್  ಮತ್ತು ಮಾಡರ್ನಾ ಲಸಿಕೆಗಳು ಮೆಸೆಂಜರ್ RNA ಅನ್ನು ಬಳಸುತ್ತವೆ.


ಭಾರತದಲ್ಲಿ  ಎದುರಾಗಲಿದೆ ದೊಡ್ಡ ಸವಾಲು
ಫೈಜರ್ ಕಂಪನಿಯ ಹಕ್ಕು ಒಂದು ಕಡೆ ಭರವಸೆಯನ್ನು ಹುಟ್ಟುಹಾಕಿದ್ದರೆ, ಅದರ ಶೇಖರಣೆಯ ಬಗ್ಗೆಯೂ ಒಂದು ಸವಾಲು ಇದೆ. ಈ ಕುರಿತು ಮಂಗಳವಾರ ಹೇಳಿಕೆ ನೀಡಿದ್ದ ಭಾರತ ಸರ್ಕಾರ, ಫೈಜರ್ ಕಂಪನಿಯ ಕೊವಿಡ್ 19 ಲಸಿಕೆ ಶೂನ್ಯದಿಂದ 70 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಶೇಖರಣೆ ಮಾಡಬೇಕಾಗಿರುವುದು ಒಂದು ದೊಡ್ಡ ಸವಾಲಾಗಿದೆ. ಒಂದು ವೇಳೆ ಭಾರತ ಈ ಲಸಿಕೆಯನ್ನು ಆಮದು ಮಾಡಿಕೊಂಡರೆ ಅದಕ್ಕೆ ಬೇಕಾಗಿರುವ ವ್ಯವಸ್ಥೆಗಳ ಸಮೀಕ್ಷೆ ಈಗಾಗಲೇ ನಡೆಸುತ್ತಿದೆ. ಆದರೆ, ಫೈಜರ್ ಕಂಪನಿಯ ಈ ಲಸಿಕೆ ಭಾರತಕ್ಕೆ ಬರಲು ಹಲವು ತಿಂಗಳುಗಳ ಕಾಲಾವಕಾಶ ಬೇಕಾಗಲಿದೆ.