ನವದೆಹಲಿ: ಇದ್ದಕ್ಕಿದ್ದಂತೆ ಸೌದಿ ಅರೇಬಿಯಾ (Soudi Arabia) ಪಾಕಿಸ್ತಾನಕ್ಕೆ (Pakistan)ಶಾಕ್ ನೀಡಿದೆ. ಪಾಕಿಸ್ತಾನ  ನಕ್ಷೆಯಿಂದ ಪಾಕ್ ಆಕ್ರಮಿತ ಕಾಶ್ಮೀರ, ಗಿಲ್ಗಿಟ್ (Gilgit) ಮತ್ತು ಬಾಲ್ಟಿಸ್ತಾನಗಳನ್ನು (Baltistan )ತೆಗೆದು ಹಾಕುವ ಮೂಲಕ ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ ಸರಿಯಾದ ಏಟು ನೀಡಿದೆ.


ಈ ದೇಶದಿಂದ ಲಕ್ಷಾಂತರ ಪಾಕಿಸ್ತಾನಿಗಳು ಹೊರಕ್ಕೆ; ಇಮ್ರಾನ್ ಖಾನ್‌ಗೆ ಮರ್ಮಾಘಾತ


COMMERCIAL BREAK
SCROLL TO CONTINUE READING

ಮುಂದಿನ ತಿಂಗಳು 21 ಮತ್ತು 22ರಂದು ಸೌದಿ ಅರೇಬಿಯಾದ ರಿಯಾದ್ ನಲ್ಲಿ ಜಿ-20 ಶೃಂಗಸಭೆ ನಡೆಯಲಿದೆ. ಇದಕ್ಕಾಗಿ ಸೌದಿ ಅರೇಬಿಯಾ 20 ವಿಶೇಷ ನೋಟ್ ಗಳನ್ನು ಬಿಡುಗಡೆ ಮಾಡಿದೆ. ಈ ನೋಟ್ ಗಳ ಹಿಂಭಾಗದಲ್ಲಿ ಜಿ-20 ರಾಷ್ಟ್ರಗಳ ನಕ್ಷೆಯನ್ನು(Map) ಮುದ್ರಿಸಲಾಗಿದೆ.


ಈ ನಕ್ಷೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಗಿಲ್ಗಿಟ್,  ಬಾಲ್ಟಿಸ್ತಾನಗಳನ್ನು ಪಾಕಿಸ್ತಾನದಿಂದ ತೆಗೆದು ಹಾಕಲಾಗಿದೆ.ಆದರೆ ಇದುವರೆಗೆ ಪಾಕಿಸ್ತಾನ  ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೌದಿ ಅರೇಬಿಯಾದ  ನಡೆ ಪಾಕಿಸ್ತಾನಕ್ಕೆ ತೀವ್ರ ಮುಜುಗರ ತರುವಂಥದ್ದು ಎಂದು ಸೌದಿ ಮಾಧ್ಯಮಗಳು ವರದಿ ಮಾಡಿವೆ.