ನವದೆಹಲಿ: ಚೀನಾದ ಟಿಕ್‌ಟಾಕ್ ಸ್ಟಾರ್ ಕ್ಸಿಯಾವೋ ಕ್ಯುಮಿ ಕ್ರೇನ್‌ನಿಂದ 160 ಅಡಿ ಕಳೆಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸೋಷಿಯಲ್ ಮೀಡಿಯಾ ಪೋಸ್ಟ್ ಗಾಗಿ ಕ್ಸಿಯಾವ್‌ನ ಜಿಯಾಂಗ್‌ಶಾನ್ ನಲ್ಲಿ ಶೂಟಿಂಗ್ ಮಾಡುತ್ತಿದ್ದ ವೇಳೆ ಕ್ರೇನ್‌ನಿಂದ ಆಯತಪ್ಪಿ ಕೆಳಗೆ ಬಿದ್ದು ಕ್ಯುಮಿ ಮೃತಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಟಿಕ್‌ಟಾಕ್ ಸ್ಟಾರ್(TikTok Star) ಕ್ಯುಮಿ ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿದ್ದರು. 23 ವರ್ಷದ ಕ್ಯುಮಿ ದುರಂತ ಸಾವನ್ನಪ್ಪಿರುವುದು ಅವರ ಅಭಿಮಾನಿಗಳಿಗೆ ಆಘಾತ ತಂದಿದೆ. ಕ್ಯಾಮೆರಾದ ಎದುರು ನೋಡುತ್ತಾ ಮಾತನಾಡುತ್ತಿದ್ದ ವೇಳೆ ಕ್ರೇನ್ ಕ್ಯಾಬಿನ್ ಗೆ ಆಗಮಿಸಿದ ಅವರು ನೋಡ ನೋಡುತ್ತಿದ್ದಂತೆಯೇ ಆಯತಪ್ಪಿ 160 ಅಡಿ ಮೇಲಿಂದ ಕೆಳಕ್ಕೆ ಬಿದ್ದಿದ್ದಾರೆ.


ಇದನ್ನೂ ಓದಿ: ಕೇವಲ 24 ಗಂಟೆಯಲ್ಲಿಯೇ 262 ತಾಲಿಬಾನ್ ಭಯೋತ್ಪಾದಕರ ಹತ್ಯೆ..!


ಕ್ರೇನ್‌ನಿಂದ ಕೆಳಕ್ಕೆ ಕ್ಯುಮಿ ಬೀಳುತ್ತಿದ್ದಂತೆ ಅವರ ಕ್ಯಾಮೆರಾ ಇದ್ದಕ್ಕಿದ್ದಂತೆ ಬ್ಲರ್ ಆಗಿದೆ. ಬಳಿಕ ಶೂಟಿಂಗ್(Shooting) ಗೆ ಬಳಸುತ್ತಿದ್ದ ಕ್ಯಾಮೆರಾದ ಎಲ್ಲ ಉಪಕರಣಗಳು ಒಡೆದು ಚೂರು ಚೂರಾಗಿ ಹಾರಿ ಹೋಗಿವೆ. ಅವರ ಕುಟುಂಬದವರು ಕ್ಯುಮಿ ಸಾವನ್ನಪ್ಪಿರುವ ವಿಷಯವನ್ನು ದೃಢಪಡಿಸಿದ್ದಾರೆ. ಶೂಟಿಂಗ್ ಮಾಡುತ್ತಿದ್ದ ವೇಳೆ ಎಚ್ಚರ ತಪ್ಪಿ ಇಟ್ಟ ಹೆಜ್ಜೆಯಿಂದಾಗಿ ಅವಳು ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾಳೆ ಅಂತಾ ತಿಳಿಸಿದ್ದಾರೆ. ಕ್ಯುಮಿ ಚೀನಾದ ಟಿಕ್‌ಟಾಕ್ ಸ್ಟಾರ್ ಆಗಿ ಖ್ಯಾತಿ ಗಳಿಸಿದ್ದರು. ಇಬ್ಬರ ಮಕ್ಕಳ ತಾಯಿಯಾಗಿರುವ ಕ್ಯುಮಿ ತಮ್ಮ ಡ್ಯಾನ್ಸ್ ವಿಡಿಯೋ(Dance Video)ಗಳಿಂದ ಪ್ರಸಿದ್ಧಿಯಾಗಿದ್ದರು.


ಇದನ್ನೂ ಓದಿ: Swiss Bankನಲ್ಲಿ ಭಾರತೀಯರು ಹೊಂದಿರುವ ಕಪ್ಪು ಹಣ ಎಷ್ಟು? ನಿಜಾಂಶ ಹೊರಹಾಕಿದ ಸರ್ಕಾರ


ತಮ್ಮ ಟಿಕ್‌ಟಾಕ್ ಖಾತೆ(Tik Tok)ಯಲ್ಲಿ ಹಾಕುತ್ತಿದ್ದ ಡ್ಯಾನ್ ವಿಡಿಯೋಗಳನ್ನು ಲಕ್ಷಾಂತರ ಜನರು ವೀಕ್ಷಿಸುತ್ತಿದ್ದರು. ಸಾವಿರಾರು ಜನರು ಅವರ ಟಿಕ್‌ಟಾಕ್ ಖಾತೆಗೆ ಫಾಲೋವರ್ಸ್ ಆಗಿದ್ದರು. ಕ್ರೇನ್ ಮೇಲಿಂದ 160 ಅಡಿ ಕೆಳಕ್ಕೆ ಬಿದ್ದು ಕ್ಯುಮಿ ದುರಂತ ಅಂತ್ಯ ಕಂಡಿದ್ದಾರೆ. ತಮ್ಮ ಫೋನ್ ಅನ್ನು ಕೈಯಲ್ಲಿ ಹಿಡಿದುಕೊಂಡೇ ಅವರು ಬಿದ್ದಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.


ಇತ್ತೀಚೆಗೆ ಸೋಷಿಯಲ್ ಮೀಡಿಯಾ(Social Media) ಫೋಸ್ಟ್ ಗಳಿಗಾಗಿ ಸಾಹಸ ಮಾಡಲು ಹೋಗಿ ಅನೇಕ ಟಿಕ್‌ಟಾಕ್ ಸ್ಟಾರ್ ಗಳು ಸಾವನ್ನಪ್ಪುತ್ತಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಪಾತದಿಂದ, ನೀರಿನಲ್ಲಿ ಬಿದ್ದು ಅನೇಕರು ಸಾವನ್ನಪ್ಪಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.