ಥಿಂಪು: ವಿನಾಶಕಾಲೇ ವಿಪರೀತ ಬುದ್ದಿ ಎಂಬಂತೆ ಚೀನಾ ತನ್ನ ದುಷ್ಕೃತ್ಯಗಳನ್ನು ಮುಂದುವರೆಸಿದ್ದು  ಈಗ ಭೂತಾನ್‌ನ ಹೊಸ ಭೂಮಿಗೆ ಹಕ್ಕು ಸ್ಥಾಪಿಸಿದ್ದಾರೆ. ಜಾಗತಿಕ ಪರಿಸರ ಸೌಲಭ್ಯ ಮಂಡಳಿಯ 58ನೇ ಸಭೆಯಲ್ಲಿ ಬೀಜಿಂಗ್ ಭೂತಾನ್‌ನ ಸಕ್ಟೆಂಗ್ ವನ್ಯಜೀವಿ ಅಭಯಾರಣ್ಯಕ್ಕೆ ಧನಸಹಾಯ ನೀಡುವುದನ್ನು ವಿರೋಧಿಸಿತು. ಆದರೆ ಚೀನಾದ ಈ ಕ್ರಮಕ್ಕೆ ಭೂತಾನ್ (Bhutan) ತೀವ್ರ ವಿರೋಧ ವ್ಯಕ್ತಪಡಿಸಿದ್ದು ಅಭಯಾರಣ್ಯದ ಭೂಮಿ ಯಾವಾಗಲೂ ತಮ್ಮದೇ ಆಗಿತ್ತು ಮತ್ತು ಇನ್ನು ಮುಂದೆಯೂ ತಮ್ಮದೇ ಆಗಿರುತ್ತದೆ ಎಂದು ಪ್ರತಿಪಾದಿಸಿದ್ದಾರೆ.


COMMERCIAL BREAK
SCROLL TO CONTINUE READING

ಭೂಮಿ ವಿವಾದಾಸ್ಪದವಾಗಿದೆ ಎಂದು ಚೀನಾ (China) ಹೇಳಿಕೊಳ್ಳುತ್ತಿರಬಹುದು, ಆದರೆ ಸತ್ಯವೆಂದರೆ ಸಕಾಟೆಂಗ್ ವನ್ಯಜೀವಿ ಅಭಯಾರಣ್ಯದ ಭೂಮಿಯ ಬಗ್ಗೆ ಯಾವುದೇ ವಿವಾದ ಉಂಟಾಗಿಲ್ಲ. ವಾಸ್ತವವಾಗಿ ಭೂತಾನ್ ಮತ್ತು ಚೀನಾ ನಡುವೆ ಯಾವುದೇ ಗಡಿರೇಖೆ ಇಲ್ಲ, ಬೀಜಿಂಗ್ ಇದರ ಲಾಭ ಪಡೆಯಲು ನೋಡುತ್ತಿದೆ. ಚೀನಾದ ಈ ಕ್ರಮಕ್ಕೆ ಭೂತಾನ್ ಸೂಕ್ತ ಉತ್ತರ ನೀಡಿದೆ. ಸಕಾಟೆಂಗ್ ವನ್ಯಜೀವಿ ಅಭಯಾರಣ್ಯವು ಭೂತಾನ್‌ನ ಅವಿಭಾಜ್ಯ ಮತ್ತು ಸಾರ್ವಭೌಮ ಭಾಗವಾಗಿದೆ ಎಂದು ಅವರು ಚೀನಾದ ಪ್ರತಿನಿಧಿಗೆ ಸ್ಪಷ್ಟವಾಗಿ ಹೇಳಿದ್ದಾರೆ.


LAC ಬಳಿ ಮಾರ್ಷಲ್ ಆರ್ಟ್ಸ್ ಟ್ರೈನರ್ಸ್ ನಿಯೋಜಿಸಿದ ಚೀನಾ, ಭಾರತೀಯ ಸೇನೆಯಿಂದ ಮೊದಲೇ ಸಿದ್ಧತೆ


ಗಮನಿಸಬೇಕಾದ ಅಂಶವೆಂದರೆ ಸಕ್ಟೆಂಗ್ ಅಭಯಾರಣ್ಯವು ಎಂದಿಗೂ ಜಾಗತಿಕ ಧನಸಹಾಯದ ಭಾಗವಾಗಿರಲಿಲ್ಲ. ಇದು ಮೊದಲ ಬಾರಿಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಒಂದು ಯೋಜನೆಯಾಗಿ ಕಾಣಿಸಿಕೊಂಡಾಗ, ಚೀನಾ ಈ ಅವಕಾಶವನ್ನು ಬಳಸಿಕೊಂಡಿತು ಮತ್ತು ಭೂ ಕಬಳಿಕೆಗೆ ತನ್ನ ಹಕ್ಕನ್ನು ಪಡೆದುಕೊಂಡಿತು. ಆದಾಗ್ಯೂ ಚೀನಾದ ವಿರೋಧದ ಹೊರತಾಗಿಯೂ ಈ ಯೋಜನೆಯನ್ನು ಹೆಚ್ಚಿನ ಕೌನ್ಸಿಲ್ ಸದಸ್ಯರು ಅನುಮೋದಿಸಿದ್ದಾರೆ.


ಚೀನಾ ಕಂಪನಿಗಳಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಶಾಕ್


ಕೌನ್ಸಿಲ್ನಲ್ಲಿ ಚೀನಾಕ್ಕೆ ಪ್ರತಿನಿಧಿ ಇದ್ದರೆ, ಭೂತಾನ್ಗೆ ನೇರ ಪ್ರತಿನಿಧಿ ಇಲ್ಲ. ವಿಶ್ವ ಬ್ಯಾಂಕ್‌ನಲ್ಲಿ ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾದ ಉಸ್ತುವಾರಿ ವಹಿಸಿರುವ ಭಾರತದ ಹಿರಿಯ ಐಎಎಸ್ ಅಧಿಕಾರಿ ಅಪರ್ಣ ಸುಬ್ರಮಣಿ ಅವರ ನೇತೃತ್ವ ವಹಿಸಿದ್ದರು. ಇದಕ್ಕೂ ಮುನ್ನ ಜೂನ್ 2 ರಂದು, ಯೋಜನಾವಾರು ಚರ್ಚೆ ನಡೆಯುತ್ತಿರುವಾಗ, ಪರಿಷತ್ತಿನ ಚೀನಾದ ಪ್ರತಿನಿಧಿ ಝಾಂಗ್‌ಜಿಂಗ್ ವಾಂಗ್, ಭೂತಾನ್ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದರು. ಆ ಸಮಯದಲ್ಲಿ ಅಪರ್ಣಾ ಸುಬ್ರಮಣಿ ಈ ಹಕ್ಕನ್ನು ಪ್ರಶ್ನಿಸಬಹುದು ಮತ್ತು ಭೂತಾನ್ ವಿವರಣೆಯಿಲ್ಲದೆ ಮುಂದುವರಿಯುವುದು ಸೂಕ್ತವಲ್ಲ ಎಂದು ಹೇಳಿದ್ದರು. ಸಭೆಯಲ್ಲಿ ಈ ವಿಷಯದ ಬಗ್ಗೆ ಕೂಲಂಕುಷವಾಗಿ ಚರ್ಚಿಸಿದ ಬಳಿಕ ಚೀನಾದ ವಿರೋಧದ ಹೊರತಾಗಿಯೂ ಹೆಚ್ಚಿನ ಸದಸ್ಯರು ಭೂತಾನ್ ಯೋಜನೆಗೆ ಅನುಮೋದನೆ ನೀಡಿದರು.