ಪಾಟ್ನಾ: ಗಂಗಾ ನದಿಯಲ್ಲಿರುವ ಮಹಾತ್ಮ ಗಾಂಧಿ ಸೇತುಗೆ ಸಮಾನಾಂತರವಾಗಿ ಮಾಡಬೇಕಾದ ಮಹಾಸೇತು ಯೋಜನೆಗೆ ಸಂಬಂಧಿಸಿದ ಟೆಂಡರ್ ಅನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಈ ಯೋಜನೆಯಲ್ಲಿ ಚೀನಾದ ಕಂಪನಿಗಳು (Chinese companies) ಭಾಗಿಯಾಗಿದ್ದವು. ಈ ಯೋಜನೆಗೆ ಆಯ್ಕೆಯಾದ ನಾಲ್ಕು ಗುತ್ತಿಗೆದಾರರಲ್ಲಿ ಇಬ್ಬರು ಚೀನಾದ ಕಂಪೆನಿಗಳಾಗಿದ್ದರಿಂದ ಕೇಂದ್ರವು ಟೆಂಡರ್ ರದ್ದುಗೊಳಿಸಿದೆ ಎಂದು ಬಿಹಾರ ಸರ್ಕಾರದ ಉನ್ನತ ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ.
ಇಡೀ ಯೋಜನೆಗೆ ಬಂಡವಾಳ ವೆಚ್ಚ 2,900 ಕೋಟಿ ರೂ. ಇದು 5.6 ಕಿ.ಮೀ ಉದ್ದದ ಮುಖ್ಯ ಸೇತುವೆ, ಇತರ ಚಿಕ್ಕ ಸೇತುವೆಗಳು, ಅಂಡರ್‌ಪಾಸ್‌ಗಳು ಮತ್ತು ರೈಲು ಓವರ್‌ಪಾಸ್‌ಗಳನ್ನು ಒಳಗೊಂಡಿದೆ.
ಜೂನ್ 15 ರಂದು ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರೊಂದಿಗಿನ ಚಕಮಕಿಯಲ್ಲಿ ಭಾರತ ಮತ್ತು ಚೀನಾ (China) ನಡುವೆ ನಡೆಯುತ್ತಿರುವ ವಿವಾದ ಮತ್ತು 20 ಭಾರತೀಯ ಸೈನಿಕರ ಹುತಾತ್ಮತೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ವಿಶೇಷವೆಂದರೆ ಚೀನಾದ ಗಡಿಯಲ್ಲಿ ಘರ್ಷಣೆಗಳ ಹಿನ್ನೆಲೆಯಲ್ಲಿ ಚೀನಾದ ಉತ್ಪನ್ನಗಳು ಮತ್ತು ವ್ಯಾಪಾರ ಘಟಕಗಳನ್ನು ಬಹಿಷ್ಕರಿಸುವಂತೆ ರಾಷ್ಟ್ರವ್ಯಾಪಿ ಕರೆ ನೀಡಿದ ಹಿನ್ನೆಲೆಯಲ್ಲಿ ಹಲವಾರು ಚೀನಾದ ಯೋಜನೆಗಳು ಮತ್ತು ಟೆಂಡರ್‌ಗಳನ್ನು ರದ್ದುಪಡಿಸಲಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi)ಯವರ ಅಧ್ಯಕ್ಷತೆಯಲ್ಲಿ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು 2019ರ ಡಿಸೆಂಬರ್ 16 ರಂದು ಮಹಾಸೇತು ಯೋಜನೆಗೆ ಅನುಮೋದನೆ ನೀಡಿರುವುದು ಉಲ್ಲೇಖನೀಯ.
ಗಂಗೆ ನದಿಯಲ್ಲಿರುವ ಮಹಾತ್ಮ ಗಾಂಧಿ ಸೇತುಗೆ ಸಮಾನಾಂತರವಾಗಿ ಪ್ರಸ್ತಾವಿತ ಮಹಾಸೇತು ಮಾಡಲಿದ್ದು, ಇದು ಪಾಟ್ನಾ, ಸರನ್ ಮತ್ತು ವೈಶಾಲಿ ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆಯ ಪ್ರಕಾರ, ನಾಲ್ಕು ಸೇತುವೆಗಳು, ಒಂದು ರೈಲು ಓವರ್ ಸೇತುವೆ, 1.58 ಮಾರ್ಗ ಸೇತುವೆ, ಫ್ಲೈಓವರ್, ನಾಲ್ಕು ಸಣ್ಣ ಸೇತುವೆಗಳು, ಐದು ಬಸ್ ನಿಲ್ದಾಣಗಳು ಮತ್ತು 13 ರಸ್ತೆ ಜಂಕ್ಷನ್‌ಗಳನ್ನು ಮುಖ್ಯ ಸೇತುವೆಯ ಜೊತೆಗೆ ನಿರ್ಮಿಸಲಾಗುವುದು. ಯೋಜನೆಯ ನಿರ್ಮಾಣ ಅವಧಿ ಮೂರೂವರೆ ವರ್ಷವಾಗಿದ್ದು, ಜನವರಿ 2023 ರೊಳಗೆ ಪೂರ್ಣಗೊಳ್ಳಬೇಕಿತ್ತು.