ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅತ್ಯುನ್ನತ ಮಿಲಿಟರಿ ಗೌರವಗಳಲ್ಲಿ ಒಂದಾದ ಲೀಜನ್ ಆಫ್ ಮೆರಿಟ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರತದ ನಾಯಕರಾಗಿ ಮಾಡಿದ ಅಸಾಧಾರಣವಾದ ಸೇವೆಯನ್ನು ಪರಿಗಣಿಸಿ ಪ್ರದಾನ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ನಂತರ ಟ್ರಂಪ್ ಟ್ವಿಟ್ಟರ್ ಫಾಲೋವರ್ ಸಂಖ್ಯೆಯಲ್ಲಿ ತೀವ್ರ ಕುಸಿತ...!


ಈ ಪದಕವನ್ನು ವಿರಳವಾಗಿ ನೀಡಲಾಗುತ್ತದೆ ಮತ್ತು ಅದನ್ನು ಯುಎಸ್ ಅಧ್ಯಕ್ಷರು ಮಾತ್ರ ನೀಡಬಹುದು.ಇದನ್ನು ಸಾಮಾನ್ಯವಾಗಿ ರಾಷ್ಟ್ರದ ಮುಖ್ಯಸ್ಥರಿಗೆ ಅಥವಾ ಸರ್ಕಾರದ ಮುಖ್ಯಸ್ಥರಿಗೆ ನೀಡಲಾಗುತ್ತದೆ.ಪ್ರಧಾನಿ ಪರವಾಗಿ ಈ ಪ್ರಶಸ್ತಿಯನ್ನು ಅಮೆರಿಕದ ಭಾರತದ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಸ್ವೀಕರಿಸಿದ್ದಾರೆ.


ಚೀನಾ ವಿರುದ್ಧ ಮತ್ತೆ ಸಿಡಿದೆದ್ದ Donald Trump, 59 ಕಂಪನಿಗಳ ನಿಷೇಧ


ಟ್ರಂಪ್ ಈ ಹಿಂದೆ ಸೆಪ್ಟೆಂಬರ್ 18 ರಂದು ಕುವೈಟ್‌ನ ಅಮೀರ್‌ನ ಶೇಖ್ ಸಬಾ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾ ಅವರಿಗೆ ಪದವಿ ಮುಖ್ಯ ಕಮಾಂಡರ್ ಲೀಜನ್ ಆಫ್ ಮೆರಿಟ್ ಪ್ರಶಸ್ತಿ ನೀಡಿದ್ದರು. ಇದಕ್ಕೂ ಮೊದಲು 1991 ರಲ್ಲಿ ಪದಕವನ್ನು ಕೊನೆಯದಾಗಿ ನೀಡಲಾಯಿತು.