ಚೀನಾ ವಿರುದ್ಧ ಮತ್ತೆ ಸಿಡಿದೆದ್ದ Donald Trump, 59 ಕಂಪನಿಗಳ ನಿಷೇಧ

ಚೀನಾದ ಸೈನ್ಯದೊಂದಿಗೆ ಸಂಪರ್ಕ ಹೊಂದಿರುವ ಪ್ರತಿಯೊಂದು ಕಂಪನಿಯ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಹೇಳಿದರು.

Written by - Yashaswini V | Last Updated : Dec 19, 2020, 11:55 AM IST
  • ಸೆಮಿಕಂಡಕ್ಟರ್ ಮ್ಯಾನ್ಯೂಫ್ಯಾಕ್ಚರಿಂಗ್ ಇಂಟರ್ನ್ಯಾಷನಲ್ ಕಾರ್ಪೊರೇಷನ್ (ಎಸ್‌ಎಂಐಸಿ) ಸೇರಿದಂತೆ ಚೀನಾದ 59 ಕಂಪನಿಗಳ ಮೇಲೆ ನಿಷೇಧ ಹೇರಿದ ಅಮೇರಿಕ
  • ಈ ಹಿಂದೆಯೂ ಡೊನಾಲ್ಡ್ ಟ್ರಂಪ್ ಆಡಳಿತವು ಚೀನಾ ವಿರುದ್ಧ ಅನೇಕ ದೊಡ್ಡ ಕ್ರಮಗಳನ್ನು ತೆಗೆದುಕೊಂಡಿತ್ತು
  • ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಚೀನಾದ ನಾಲ್ಕು ಕಂಪನಿಗಳ ವಿರುದ್ಧ ನಿರ್ಬಂಧ ಹೇರಲಾಗುವುದು ಎಂದು ಪೊಂಪಿಯೊ ಹೇಳಿದ್ದಾರೆ
ಚೀನಾ ವಿರುದ್ಧ ಮತ್ತೆ ಸಿಡಿದೆದ್ದ Donald Trump, 59 ಕಂಪನಿಗಳ ನಿಷೇಧ title=
Donald Trump On China (File Photo)

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುವ ಮೊದಲು ಡೊನಾಲ್ಡ್ ಟ್ರಂಪ್ ಚೀನಾಕ್ಕೆ ಮತ್ತೊಂದು ಹೊಡೆತ ನೀಡಿದ್ದಾರೆ. ಸೆಮಿಕಂಡಕ್ಟರ್ ಮ್ಯಾನ್ಯೂಫ್ಯಾಕ್ಚರಿಂಗ್ ಇಂಟರ್ನ್ಯಾಷನಲ್ ಕಾರ್ಪೊರೇಷನ್ (ಎಸ್‌ಎಂಐಸಿ) ಸೇರಿದಂತೆ ಚೀನಾದ 59 ವೈಜ್ಞಾನಿಕ ಮತ್ತು ಕೈಗಾರಿಕಾ ಉತ್ಪಾದನಾ ಘಟಕಗಳ ಮೇಲೆ ನಿಷೇಧ ಹೇರಿ ಅಮೆರಿಕದ ವಾಣಿಜ್ಯ ಸಚಿವಾಲಯ ಪ್ರಕಟಣೆ ಹೊರಡಿಸಿದೆ. 

ಚೀನಾದ ಈ ಕಂಪನಿಗಳನ್ನು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಮತ್ತು ವಿದೇಶಿ ನೀತಿಗೆ ವಿರುದ್ಧವಾಗಿದೆ ಎಂದು ಯುಎಸ್ ಕರೆದಿದೆ. ಈ ಹಿಂದೆ ಡೊನಾಲ್ಡ್ ಟ್ರಂಪ್ ಆಡಳಿತವು ಚೀನಾ ವಿರುದ್ಧ ಅನೇಕ ದೊಡ್ಡ ಕ್ರಮಗಳನ್ನು ತೆಗೆದುಕೊಂಡಿತ್ತು.

ವಾಣಿಜ್ಯ ಇಲಾಖೆಯಲ್ಲಿ ಬ್ಯೂರೋ ಆಫ್ ಇಂಡಸ್ಟ್ರಿ ಅಂಡ್ ಸೆಕ್ಯುರಿಟಿ (ಬಿಐಎಸ್) ಹೊರಡಿಸಿದ ಹೇಳಿಕೆಯಲ್ಲಿ ಚೀನಾದ (China) ಮಿಲಿಟರಿಯೊಂದಿಗಿನ ಸಂಪರ್ಕದಿಂದಾಗಿ ಎಸ್‌ಎಂಐಸಿ ಸೇರಿದಂತೆ 59 ಕಂಪನಿಗಳನ್ನು ರಫ್ತು ನಿಯಂತ್ರಣ ಘಟಕದ ಪಟ್ಟಿಗೆ ಸೇರಿಸಲಾಗಿದೆ. ತನ್ನ ಮಿಲಿಟರಿ ಆಧುನೀಕರಣಕ್ಕಾಗಿ ಚೀನಾ ಅಮೆರಿಕದ ತಂತ್ರಜ್ಞಾನದ ಲಾಭವನ್ನು ಪಡೆದುಕೊಂಡಿದೆ. ಆದರೆ ಈಗ ಅದು ಆಗುವುದಿಲ್ಲ ಎಂದು ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಹೇಳಿದ್ದಾರೆ. ಚೀನಾದ ಸೈನ್ಯದೊಂದಿಗೆ ಸಂಪರ್ಕ ಹೊಂದಿರುವ ಪ್ರತಿಯೊಂದು ಕಂಪನಿಯ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ‌.

ಅಮೆರಿಕದ ತಂತ್ರಜ್ಞಾನದೊಂದಿಗೆ ಎಸ್‌ಎಂಐಸಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಯನ್ನು ಬಲಪಡಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅದನ್ನು ಈ ಪಟ್ಟಿಯಲ್ಲಿ ಸೇರಿಸುವುದು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭಾರತದ ಜೊತೆಗಿನ ಗಡಿ ವಿವಾದದ ಮಧ್ಯೆ ಯುದ್ಧಕ್ಕೆ ಸಿದ್ದರಾಗಿ ಎಂದ ಚೀನಾ ಅಧ್ಯಕ್ಷ !

ಈ ಪ್ರಕಟಣೆಯ ನಂತರ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಬಲಾತ್ಕಾರವನ್ನು ಕೊನೆಗೊಳಿಸಲು ಕೆಲವು ಕ್ರಮಗಳನ್ನು ಸಹ ತೆಗೆದುಕೊಳ್ಳಲಾಗುತ್ತಿದೆ ಎಂದು ಅಮೆರಿಕದ (America) ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ. 

ಚೀನಾದ ಶಿಪ್‌ಬಿಲ್ಡಿಂಗ್ ಕಾರ್ಪೊರೇಶನ್‌ಗೆ ಸಂಬಂಧಿಸಿದ 25 ಹಡಗು ನಿರ್ಮಾಣ ಸಂಶೋಧನಾ ಸಂಸ್ಥೆಗಳನ್ನು ವಾಣಿಜ್ಯ ಇಲಾಖೆಯು ಘಟಕದ ಪಟ್ಟಿಯಲ್ಲಿ ಸೇರಿಸಲಿದೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ ಪೀಪಲ್ಸ್ ಲಿಬರೇಶನ್ ಆರ್ಮಿಗೆ ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನಾ ಬೆಂಬಲವನ್ನು ಒದಗಿಸುವ ಇತರ ಆರು ಸಂಸ್ಥೆಗಳ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.

ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಚೀನಾದ ನಾಲ್ಕು ಕಂಪನಿಗಳ ವಿರುದ್ಧ ನಿರ್ಬಂಧ ಹೇರಲಾಗುವುದು ಎಂದು ಪೊಂಪಿಯೊ ಹೇಳಿದ್ದಾರೆ. ಉಯಿಘರ್ ಮುಸ್ಲಿಮರು ಸೇರಿದಂತೆ ಎಲ್ಲಾ ಅಲ್ಪಸಂಖ್ಯಾತರನ್ನು ಚೀನಾ ಗೌರವಿಸಬೇಕು. ಮಾನವ ಹಕ್ಕುಗಳ ರಕ್ಷಣೆಗೆ ಅಮೆರಿಕ ಬದ್ಧವಾಗಿದ್ದು, ಅವುಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಂಪಿಯೊ ತಿಳಿಸಿದ್ದಾರೆ.

ಕ್ಸಿ ಜಿನ್‌ಪಿಂಗ್ ನೇತೃತ್ವದ ಚೀನೀ ಕಮ್ಯುನಿಸ್ಟ್ ಪಾರ್ಟಿ (ಸಿ.ಸಿ.ಪಿ) ಕ್ಸಿನ್‌ಜಿಯಾಂಗ್‌ನಲ್ಲಿ ಸುಮಾರು 11 ಮಿಲಿಯನ್ ಉಯಿಘರ್ ಮುಸ್ಲಿಮರ ಹಕ್ಕುಗಳ ಮೇಲೆ ವ್ಯಾಪಕ ಮತ್ತು ದೂರಗಾಮಿ ನಿರ್ಬಂಧಗಳನ್ನು ಪರಿಚಯಿಸಿದೆ. ಅವರನ್ನು ದೊಡ್ಡ ಪ್ರಮಾಣದಲ್ಲಿ ಶೋಷಣೆಗೆ ಒಳಪಡಿಸಲಾಗುತ್ತದೆ ಮತ್ತು ಕೈದಿಗಳಂತೆ ಶಿಬಿರಗಳಲ್ಲಿ ಇರಿಸಲಾಗುತ್ತದೆ.

ಇದನ್ನೂ ಓದಿ: ಭಾರತೀಯರಿಗೆ ಗುಡ್ ನ್ಯೂಸ್: H-1B Visa ಕುರಿತಂತೆ ಟ್ರಂಪ್ ನಿರ್ಧಾರ ರದ್ದುಪಡಿಸಿದ US ನ್ಯಾಯಾಲಯ

ಹಲವಾರು ವರ್ಷಗಳಿಂದ ಚೀನಾ ಸರ್ಕಾರವು ಮೂಲಭೂತ ಮಾನವ ಹಕ್ಕುಗಳನ್ನು ಮೊಟಕುಗೊಳಿಸಿದೆ. ವಿಶೇಷವಾಗಿ ಈ ಜನಾಂಗೀಯ ಅಲ್ಪಸಂಖ್ಯಾತರ ಧರ್ಮದ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದೆ. ಉಯಿಘರ್ ಗುರುತು, ಸಂಸ್ಕೃತಿ ಮತ್ತು ಸ್ವಾತಂತ್ರ್ಯದ ಯಾವುದೇ ರೀತಿಯ ಅಭಿವ್ಯಕ್ತಿಗಳನ್ನು ಸಿ.ಸಿ.ಪಿ ತನ್ನ ಶಕ್ತಿಗೆ ಬೆದರಿಕೆಯೆಂದು ಪರಿಗಣಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

Trending News