ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ನಂತರ ಟ್ರಂಪ್ ಟ್ವಿಟ್ಟರ್ ಫಾಲೋವರ್ ಸಂಖ್ಯೆಯಲ್ಲಿ ತೀವ್ರ ಕುಸಿತ...!

ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡನ್‌ಗೆ ಸೋತಾಗಿನಿಂದ ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ಅನುಯಾಯಿಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.ಈಗ ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬಿಡೆನ್ ಫಾಲೋವರ್ಸ್ ಗಳ ಸಂಖ್ಯೆ ಅಧಿಕವಾಗುತ್ತಿದೆ ಎನ್ನಲಾಗಿದೆ.

Last Updated : Dec 1, 2020, 11:46 PM IST
ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ನಂತರ ಟ್ರಂಪ್ ಟ್ವಿಟ್ಟರ್ ಫಾಲೋವರ್ ಸಂಖ್ಯೆಯಲ್ಲಿ  ತೀವ್ರ ಕುಸಿತ...!  title=
file photo

ನವದೆಹಲಿ: ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡನ್‌ಗೆ ಸೋತಾಗಿನಿಂದ ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ಅನುಯಾಯಿಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.ಈಗ ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬಿಡೆನ್ ಫಾಲೋವರ್ಸ್ ಗಳ ಸಂಖ್ಯೆ ಅಧಿಕವಾಗುತ್ತಿದೆ ಎನ್ನಲಾಗಿದೆ.

ಟ್ರಂಪ್ ಒಪ್ಪಿಕೊಳ್ಳದಿದ್ದರೂ ಜ.20 ರಂದು ಜೋ ಬಿಡನ್‌ಗೆ @POTUS ಖಾತೆ ಹಸ್ತಾಂತರಿಸಲಿದೆ ಟ್ವಿಟರ್..!

ಫ್ಯಾಕ್ಟ್‌ಬೇಸ್‌ ವೆಬ್‌ಸೈಟ್ ನ ಪ್ರಕಾರ, ನವೆಂಬರ್ 17 ರಿಂದ ಅಧ್ಯಕ್ಷರು 133,902 ಅನುಯಾಯಿಗಳನ್ನು ಕಳೆದುಕೊಂಡಿದ್ದಾರೆ ಮತ್ತು ಜೋ ಬಿಡೆನ್ 1,156,610 ಗಳಿಸಿದ್ದಾರೆ.ಭಾನುವಾರದ ಟ್ವೀಟ್‌ನಲ್ಲಿ, ಸಿಎನ್‌ಎನ್ ಆತಿಥೇಯ ಮತ್ತು ಮಾಧ್ಯಮ ವರದಿಗಾರ ಬ್ರಿಯಾನ್ ಸ್ಟೆಲ್ಟರ್, ಟ್ವಿಟ್ಟರ್ ಅನುಯಾಯಿಗಳು ಖಂಡಿತವಾಗಿಯೂ ವಿಶ್ವದ ಪ್ರಮುಖ ಮೆಟ್ರಿಕ್ ಅಲ್ಲ, ಇದು ಇನ್ನೂ ಗಮನಿಸಬೇಕಾದ ಸಂಗತಿ: 2015 ರ ನಂತರ ಮೊದಲ ಬಾರಿಗೆ ಟ್ರಂಪ್ ನಿರಂತರವಾಗಿ ಅನುಯಾಯಿಗಳನ್ನು ಕಳೆದುಕೊಳ್ಳುತ್ತಿದ್ದಾರೆ 'ಎಂದು ಟ್ವೀಟ್ ಮಾಡಿದ್ದಾರೆ.

ಪದತ್ಯಾಗಕ್ಕೂ ಮುನ್ನ Chinaಗೆ ಭಾರಿ ಪೆಟ್ಟು ನೀಡಿದ Donald Trump, ಕೈಗೊಂಡ ನಿರ್ಣಯ ಏನು ಗೊತ್ತಾ?

ಫ್ಯಾಕ್ಟ್‌ಬೇಸ್ ಪ್ರಕಾರ 11 ದಿನಗಳಲ್ಲಿ ಡೊನಾಲ್ಡ್ ಟ್ರಂಪ್ ಫಾಲೋವರ್ಸ್ ಗಳ ಸಂಖ್ಯೆ ಅಪಾರ ಪ್ರಮಾಣದಲ್ಲಿ ಕುಸಿದಿದೆ ಎನ್ನಲಾಗಿದೆ.ಇನ್ನೊಂದೆಡೆಗೆ ಟ್ರಂಪ್ ಅವರು ಚುನಾವಣೆಯಲ್ಲಿ ಸೋತರು ಸಹಿತ ತಮ್ಮ ಸೋಲನ್ನು ಒಪ್ಪಿಕೊಳ್ಳದೆ ಕಾನೂನಾತ್ಮಕವಾಗಿ ಎದುರಿಸುವುದಾಗಿ ಹೇಳಿದ್ದಾರೆ.

Trending News