Wagner Mutiny: ರಷ್ಯಾದಲ್ಲಿನ ವ್ಯಾಗ್ನರ್ ದಂಗೆಯ ಕುರಿತು ಅಮೆರಿಕಾಗೆ ಮೊದಲೇ ತಿಳಿದಿತ್ತು, ಯೆವೇನಿ ಪ್ರಿಗೋಝಿನ್ ಜೊತೆಗೆ ಸಿಕ್ರೆಟ್ ಒಪ್ಪಂದ?
Russia Wagner Mutiny: ದಂಗೆಯ ವಿಷಯ ಗೊತ್ತಿದ್ದೂ ಕೂಡ ಅಮೆರಿಕ ರಷ್ಯಾಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಏಕೆಂದರೆ, ಉಕ್ರೇನ್ನಲ್ಲಿನ ಯುದ್ಧ ಮತ್ತು ಪಾಶ್ಚಿಮಾತ್ಯರೊಂದಿಗಿನ ರಷ್ಯಾದ ಬಿಕ್ಕಟ್ಟಿನ ನಡುವೆ ಪುಟಿನ್ಗೆ ಸಹಾಯ ಮಾಡಲು ಅಮೆರಿಕವು ಕಡಿಮೆ ಆಸಕ್ತಿ ಹೊಂದಿಲ್ಲ
Russia Wagner Mutiny: ಖಾಸಗಿ ಸೈನ್ಯ ವ್ಯಾಗ್ನರ್ ಮುಖ್ಯಸ್ಥ ಮಾಸ್ಕೋ ಕಡೆಗೆ ಮುನ್ನುಗ್ಗುವುದನ್ನು ನಿಲ್ಲಿಸಲು ತನ್ನ ಸೈನ್ಯಕ್ಕೆ ಆದೇಶಿಸಿದ ನಂತರ ರಷ್ಯಾದಲ್ಲಿ ಬಿಕ್ಕಟ್ಟು ಅಂತ್ಯಾಕಂಡಂತಾಗಿದೆ. ಏತನ್ಮಧ್ಯೆ, ಈ ಘಟನೆಗೆ ಸಂಬಂಧಿಸಿದ ದೊಡ್ಡ ಸುದ್ದಿ ಇದೀಗ ಮುನ್ನೆಲೆಗೆ ಬಂದಿದೆ. ಶನಿವಾರ (ಜೂನ್ 24) ಮೂಲಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್, ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ತನ್ನ ಸೈನ್ಯದೊಂದಿಗೆ ರಷ್ಯಾ ಸರ್ಕಾರದ ವಿರುದ್ಧ ದೊಡ್ಡ ಆಕ್ರಮಣವನ್ನು ಯೋಜಿಸುತ್ತಿದ್ದಾರೆ ಎಂಬುದು ಯುಎಸ್ ಗುಪ್ತಚರ ಸಂಸ್ಥೆಗಳು ಆಗಲೇ ವರದಿ ಮಾಡಿದ್ದವು ಎಂದು ಹೇಳಿಕೊಂಡಿದೆ.
ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಯುಎಸ್ ಅಧಿಕಾರಿಗಳು, ಅನಾಮಧೇಯತೆಯ ಷರತ್ತಿನ ಮೇಲೆ, ಯುಎಸ್ ಅಧ್ಯಕ್ಷ ಜೋ ಬಿಡೆನ್ ಗೆ ಅವರ ಆಡಳಿತ ಮತ್ತು ಮಿಲಿಟರಿ ಕಮಾಂಡರ್‌ಗಳಿಗೆ ಬುಧವಾರವೇ ವ್ಯಾಗ್ನರ್ ಅವರ ಸಿದ್ಧತೆಗಳ ಬಗ್ಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ. ಇನ್ನೂ ಕೆಲವು ಮಾಹಿತಿ ಸಿಕ್ಕಿದ ತಕ್ಷಣ ಗುರುವಾರ ಮತ್ತೊಂದು ಸಭೆಯನ್ನು ಆಯೋಜಿಸಲಾಗಿದ್ದು, ಇದರಲ್ಲಿ ಕಾಂಗ್ರೆಸ್ ಮುಖಂಡರ ಗುಂಪು ಭಾಗಿಯಾಗಿದ್ದರು ಎನ್ನಲಾಗಿದೆ.
ರಷ್ಯಾದಲ್ಲಿ ವ್ಯಾಗ್ನರ್ ಸೈನ್ಯದ ದಂಗೆ
ಶುಕ್ರವಾರ ರಾತ್ರಿಯೇ ರಷ್ಯಾದಲ್ಲಿ ಪರಿಸ್ಥಿತಿಯು ಹದಗೆಟ್ಟಿತ್ತು, ಯೆವ್ನಿ ಪ್ರಿಗೊಜಿನ್ ರಷ್ಯಾದ ರಕ್ಷಣಾ ಸಚಿವಾಲಯ ವ್ಯಾಗ್ನರ್ ಶಿಬಿರದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ಆರೋಪಿಸಿದ್ದರು ಮತ್ತು ಪ್ರತೀಕಾರಕ್ಕೆ ಕರೆ ನೀಡಿದ್ದರು. ಆದಾಗ್ಯೂ, ಸಚಿವಾಲಯವು ಆರೋಪವನ್ನು ನಿರಾಕರಿಸಿದೆ ಮತ್ತು ಪ್ರಚೋದನೆ ಕುರಿತು ಆರೋಪಿಸಿದೆ. ಗಂಟೆಗಳ ನಂತರ, ವ್ಯಾಗ್ನರ್ ಪಡೆಗಳು ದಕ್ಷಿಣ ರಷ್ಯಾದ ನಗರವಾದ ರೋಸ್ಟೊವ್-ಆನ್-ಡಾನ್‌ನಲ್ಲಿ ಮಿಲಿಟರಿ ಸೌಲಭ್ಯವನ್ನು ವಶಕ್ಕೆ ಪಡೆದುಕೊಂಡಿದ್ದವು.
ಈ ಆದೇಶವನ್ನು ಯೆವ್ನಿ ಪ್ರಿಗೊಝಿನ್ ನೀಡಿದ್ದರು
ಇದರೊಂದಿಗೆ, ಯೆವ್ನಿ ಪ್ರಿಗೊಜಿನ್ ತನ್ನ ಸೈನಿಕರನ್ನು ಮಾಸ್ಕೋ ಕಡೆಗೆ ತೆರಳುವಂತೆ ಆದೇಶ ನೀಡಿದ್ದರು. ನ್ಯೂಯಾರ್ಕ್ ಟೈಮ್ಸ್ ಮೂಲಗಳ ಪ್ರಕಾರ, ದಂಗೆಗೆ ಮುಂಚಿತವಾಗಿ ಯುಎಸ್ ಅಧಿಕಾರಿಗಳು ಬೆದರಿಕೆಯ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಎಚ್ಚರಿಸಲು ಯಾವುದೇ ಯೋಜನೆಯನ್ನು ಹೊಂದಿರಲಿಲ್ಲ. ಏಕೆಂದರೆ ರಷ್ಯಾ ಅವರ ವಿರುದ್ಧ ದಂಗೆ ನಡೆಸುವ ಆರೋಪ ಮಾಡಬಹುದು ಎಂಬ ಭಯ ಅವರಲ್ಲಿತ್ತು
ಅಮೆರಿಕದ ಅಧಿಕಾರಿಗಳು ಈ ಕಳವಳ ವ್ಯಕ್ತಪಡಿಸಿದ್ದರು
ಯುಎಸ್ ಅಧಿಕಾರಿಗಳು ಈ ಸಂಭಾವ್ಯ ಸಂಘರ್ಷದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, ಏಕೆಂದರೆ ರಷ್ಯಾದಲ್ಲಿ ಅವ್ಯವಸ್ಥೆಯು ಪರಮಾಣು ಅಪಾಯಗಳನ್ನು ಉಂಟುಮಾಡಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಶನಿವಾರ ವ್ಯಾಗ್ನರ್ ದಂಗೆಯ ನಂತರ, ರಷ್ಯಾದ ವಿದೇಶಾಂಗ ಸಚಿವಾಲಯವು ರಷ್ಯಾದ ವಿರುದ್ಧ ಅಂತಹ ಯಾವುದೇ ಪ್ರಯತ್ನವು ನಿಷ್ಪ್ರಯೋಜಕವಾಗಿದೆ ಎಂದು ಪಶ್ಚಿಮಕ್ಕೆ ಎಚ್ಚರಿಕೆ ನೀಡಿತ್ತು. ಇನ್ನೊಂದೆಡೆ, ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಅವರು ಪ್ರಮುಖ ಪರಮಾಣು ಶಕ್ತಿಯಲ್ಲಿ ದಂಗೆಯು ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು ಮತ್ತು ಮಾಸ್ಕೋ ಇದನ್ನು ಎಂದಿಗೂ ಅನುಮತಿಸುವುದಿಲ್ಲ ಎಂದು ಹೇಳಿದ್ದರು.
ವ್ಲಾಡಿಮಿರ್ ಪುಟಿನ್ ಹೇಳಿದ್ದೇನು
ಈ ದಂಗೆಯ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದರು. ಅವರು ಅದನ್ನು ದ್ರೋಹ ಎಂದು ಕರೆದಿದ್ದರು ಮತ್ತು ಜನರನ್ನು ಹಾಗೂ ರಷ್ಯಾವನ್ನು ರಕ್ಷಿಸುವ ಭರವಸೆಯನ್ನು ಅವರು ನೀಡಿದ್ದರು. ರಷ್ಯಾ ತನ್ನ ಭವಿಷ್ಯಕ್ಕಾಗಿ ಅತ್ಯಂತ ಕಷ್ಟಕರವಾದ ಯುದ್ಧವನ್ನು ನಡೆಸುತ್ತಿದೆ ಎಂದು ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಇದರ ನಂತರ ಯೆವ್ಗೆನಿ ಪ್ರಿಗೊಜಿನ್ ಪುಟಿನ್ ಅವರ ದ್ರೋಹದ ಆರೋಪಗಳನ್ನು ನಿರಾಕರಿಸಿದ್ದರು ಮತ್ತು ಅವರ ಹೋರಾಟಗಾರರನ್ನು ದೇಶಭಕ್ತರೆಂದು ಕರೆದಿದ್ದರು. ಶನಿವಾರ, ಅವರು ಮಾಸ್ಕೋದತ್ತ ತಮ್ಮ ಪ್ರಯಾಣವನ್ನು ನಿಲ್ಲಿಸಲು ಸೈನಿಕರಿಗೆ ಆದೇಶ ನೀಡಿದ್ದರು.
ಪ್ರಿಗೋಜಿನ್ ಮತ್ತು ಅಮೆರಿಕ ನಡುವೆ ರಹಸ್ಯ ಒಪ್ಪಂದ?
ಈ ಬಂಡಾಯದ ಬಗ್ಗೆ ಇದೀಗ ಮಹತ್ವದ ಮಾಹಿತಿ ಬಹಿರಂಗಗೊಂಡಿದೆ. ಈ ಬಂಡಾಯಕ್ಕೆ ಸಂಬಂಧಿಸಿದಂತೆ ಯೆವಾನಿ ಪ್ರಿಗೋಜಿನ್ ಮತ್ತು ಅಮೆರಿಕ ನಡುವೆ ರಹಸ್ಯ ಒಪ್ಪಂದವಿತ್ತು ಎಂದು ಹೇಳಲಾಗುತ್ತಿದೆ. ಒಂದು ಕಾಲದಲ್ಲಿ ಪುಟಿನ್ ಅವರ ಅತ್ಯಂತ ವಿಶ್ವಾಸಾರ್ಹರಾಗಿದ್ದ ಪ್ರಿಗೋಜಿನ್ ಅವರು ಇದ್ದಕ್ಕಿದ್ದಂತೆ ರೆಬೆಲ್ ಆಗಿಲ್ಲ, ಆದರೆ ಅದರ ಹಿಂದೆ ಉತ್ತಮ ಯೋಜಿತ ಪಿತೂರಿ ಇತ್ತು. ಆದರೆ, ರಷ್ಯಾದಲ್ಲಿ ಏನೇ ನಡೆದರೂ ಅದರ ಹಿಂದೆ ಅಮೆರಿಕದ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಪ್ರಿಗೋಜಿನ್ ಇಟ್ಟ ಹೆಜ್ಜೆಯ ನಂತರ ಅವರಿಗೆ ಅಮೆರಿಕದಿಂದ ಬಿಗ್ ರಿಲೀಫ್ ಸಿಕ್ಕಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ-PM Modi Egypt Visit: ಕೈರೋ ತಲುಪಿದ ಪ್ರಧಾನಿ ಮೋದಿ, ಈಜಿಪ್ಟ್ ಪ್ರಧಾನಿ ಮದ್ಬೌಲಿಯಿಂದ ಸ್ವಾಗತ
ವ್ಯಾಗ್ನರ್ ಮೇಲೆ ಅಮೆರಿಕ ಮೃದುತ್ವ
ಪ್ರಿಗೋಜಿನ್‌ನ ದಂಗೆಯ ಸಮಯದ ಬಗ್ಗೆಯೂ ಇದೀಗ ಪ್ರಶ್ನೆಗಳು ಉದ್ಭವಿಸುತ್ತಿವೆ. ಈ ಬಂಡಾಯದ ಒಳ ಕಥೆಯೂ ಮುನ್ನೆಲೆಗೆ ಬಂದಿದೆ. ರಹಸ್ಯ ಒಪ್ಪಂದಕ್ಕೆ ಮೂರು ದೊಡ್ಡ ಪುರಾವೆಗಳಿವೆ. ಅಮೆರಿಕವು ಇದ್ದಕ್ಕಿದ್ದಂತೆ ವ್ಯಾಗ್ನರ್‌ನ ಮೇಲೆ ತುಂಬಾ ಮೃದುವಾಗಿದೆ ಎಂಬುದು ಮೊದಲ ಪುರಾವೆ. ಅಮೆರಿಕದ ಉನ್ನತ ಅಧಿಕಾರಿಗಳಿಂದ ಮಾಧ್ಯಮಗಳು ಸ್ವೀಕರಿಸಿದ ಮಾಹಿತಿಯ ಪ್ರಕಾರ, ಈ ಸಂಪೂರ್ಣ ದಂಗೆಯ ಬಗ್ಗೆ ಅಮೆರಿಕಗೆ ಮೊದಲೇ ತಿಳಿದಿತ್ತು ಎಂಬುದು ಎರಡನೇ ಪುರಾವೆಯಾಗಿದೆ. ಪುಟಿನ್ ವಿರುದ್ಧ ಅಮೆರಿಕಕ್ಕೆ ಪ್ರಿಗೋಝಿನ್ ದೊಡ್ಡ ಅಸ್ತ್ರವಾಗಬಲ್ಲರು ಎಂಬುದು ಮೂರನೇ ಪುರಾವೆಯಾಗಿದೆ. ಹೀಗಾಗಿ ಅಮೆರಿಕಾ ಪ್ರೀಗೋಜೀನ್ ನೊಂದಿಗಿನ ತನ್ನ ಮೃದುವ್ಯವಹಾರದ ದೊಡ್ಡ ಪ್ರಯೋಜನವನ್ನು ಹೊಂದಬಹುದು.
ಇದನ್ನೂ ಓದಿ-Yevgeny Prigozhin ಯಾರು? ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ನೇರ ಚಾಲೆಂಜ್!
ಯುಎಸ್ ವ್ಯಾಗ್ನರ್ ಗ್ರೂಪ್ ಅನ್ನು ನಿಷೇಧಿಸುವುದಿಲ್ಲ
ಇದೀಗ ಬಂದಿರುವ ಮಾಹಿತಿಯ ಪ್ರಕಾರ ವ್ಯಾಗ್ನರ್ ಗ್ರೂಪ್ ಅನ್ನು ಅಮೆರಿಕ ನಿಷೇಧಿಸುವುದಿಲ್ಲ. ಆಫ್ರಿಕನ್ ದೇಶಗಳಲ್ಲಿ ಚಿನ್ನದ ಗಣಿಗಾರಿಕೆಗಾಗಿ ವ್ಯಾಗ್ನರ್ ಅವರನ್ನು ನಿಷೇಧಿಸಲಾಗಿತ್ತು, ಅವರು ಚಿನ್ನದ ಗಣಿಗಾರಿಕೆಯ ಗಳಿಕೆಯೊಂದಿಗೆ ರಷ್ಯಾಕ್ಕೆ ಯುದ್ಧದಲ್ಲಿ ಸಹಾಯ ಮಾಡುತ್ತಿದ್ದಾರೆ ಎಂದು ಹೇಳಿದ್ದರು, ಆದರೆ ದಂಗೆಯ ಸಂಚಿಕೆಯ ನಡುವೆ, US ನಿಷೇಧವನ್ನು ಮುಂದೂಡಲು ನಿರ್ಧರಿಸಿದೆ. ವ್ಯಾಗ್ನರ್ ಸೈನ್ಯವು ಆಫ್ರಿಕನ್ ದೇಶಗಳಾದ ಲಿಬಿಯಾ, ಮಾಲಿ ಮತ್ತು ಸುಡಾನ್‌ನಲ್ಲಿ ನೆಲೆಗೊಂಡಿದೆ. ಅಲ್ಲಿ, ಸಂಪನ್ಮೂಲಗಳು ಮತ್ತು ರಾಜತಾಂತ್ರಿಕ ಬೆಂಬಲಕ್ಕೆ ಪ್ರತಿಯಾಗಿ, ವ್ಯಾಗ್ನರ್ ಗುಂಪು ಆಫ್ರಿಕಾಕ್ಕೆ ಸಹಾಯ ಮಾಡುತ್ತದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.