ಹಾರಾಟ ನಡೆಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ನಾಪತ್ತೆಯಾದ ಅಮೆರಿಕಾದ ಅತ್ಯಂತ ಅಪಾಯಕಾರಿ ಯುದ್ಧ ವಿಮಾನ!
US Fighter Jet Missing: ಬೇಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಅವರು ಚಾರ್ಲ್ಸ್ಟನ್ ನಗರದ ಉತ್ತರಕ್ಕೆ ಎರಡು ಸರೋವರಗಳ ಬಳಿ ವಿಮಾನವನ್ನು ಹುಡುಕುತ್ತಿದ್ದಾರೆ. ಇದಲ್ಲದೆ, ಹವಾಮಾನ ಸುಧಾರಿಸಿದ ನಂತರ, ದಕ್ಷಿಣ ಕೆರೊಲಿನಾದ ನ್ಯಾಯಾಂಗ ಇಲಾಖೆಯ ಹೆಲಿಕಾಪ್ಟರ್ ಕೂಡ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ ಎನ್ನಲಾಗಿದೆ.
ವಾಷಿಂಗ್ಟನ್: US ವಾಯುಪಡೆಯ ಅತ್ಯಂತ ಅಪಾಯಕಾರಿ ಯುದ್ಧ ವಿಮಾನಗಳಲ್ಲಿ F-35 ಕೂಡ ಒಂದಾಗಿದೆ. ಈ ವಿಮಾನವು ಅಡಗಿಕೊಂಡೇ ಶತ್ರುಗಳನ್ನು ಸಾವಿನ ಕೂಪಕ್ಕೆ ತಳ್ಳುತ್ತದೆ. ಆದರೆ ಈ ವಿಮಾನದ ಕುರಿತು ಒಂದು ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ದಕ್ಷಿಣ ಕೆರೊಲಿನಾದ ನಾರ್ತ್ ಚಾರ್ಲ್ಸ್‌ಟನ್ ಏರ್ ಬೇಸ್‌ನಿಂದ ಟೇಕಾಫ್ ಆದ ನಂತರ F-35 ಯುದ್ಧ ವಿಮಾನವು ಇದ್ದಕ್ಕಿದ್ದಂತೆ ಕಣ್ಮರೆಯಾಗಿದೆ. ಅದರ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಈ ವಿಮಾನವು ಯುಎಸ್ ಮೆರೈನ್ ಕಾರ್ಪ್ಸ್ಗೆ ಸೇರ್ಪಡೆಯಾಗಿತ್ತು. ಇದೀಗ ವಿಮಾನ ಪತ್ತೆಗೆ ಸಾರ್ವಜನಿಕರ ನೆರವು ಕೋರಲಾಗಿದೆ. ಮೆರೈನ್ ಕಾರ್ಪ್ಸ್ ವಿಮಾನಕ್ಕಾಗಿ ಹುಡುಕಾಟ ಆರಂಭಿಸಿದೆ. ವಿಮಾನದ ಪೈಲಟ್‌ನ ಸ್ಥಿತಿ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಮಾರು $80 ಮಿಲಿಯನ್ ಮೌಲ್ಯದ F-35 ಯುದ್ಧ ವಿಮಾನವನ್ನು ಹುಡುಕಲು ಸಹಾಯ ಮಾಡಲು ವಾಯುನೆಲೆ ಸ್ಥಳೀಯ ಸಾರ್ವಜನಿಕರಿಂದ ಸಹಾಯವನ್ನು ಕೋರಿದೆ. ಈ ಕುರಿತು ಟ್ವೀಟ್ ಮಾಡಿರುವ ಏರ್ಬೇಸ್ 'ಎಫ್-35 ಅನ್ನು ಪತ್ತೆಹಚ್ಚಲು ಸಹಾಯ ಮಾಡುವ ಯಾವುದೇ ಮಾಹಿತಿಯನ್ನು ನೀವು ಹೊಂದಿದ್ದರೆ, ದಯವಿಟ್ಟು ಬೇಸ್ ಡಿಫೆನ್ಸ್ ಆಪರೇಷನ್ ಸೆಂಟರ್‌ಗೆ ಕರೆ ಮಾಡಿ ಮತ್ತು ನಮಗೆ ತಿಳಿಸಿ' ಎಂದು ಕೋರಿದೆ.
ಲಾಕ್ಹೀಡ್ ಮಾರ್ಟಿನ್ F-35 ಅನ್ನು ತಯಾರಿಸುತ್ತದೆ
ಬೇಸ್ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಅವರು ಚಾರ್ಲ್ಸ್ಟನ್ ನಗರದ ಉತ್ತರಕ್ಕೆ ಎರಡು ಸರೋವರಗಳ ಬಳಿ ವಿಮಾನವನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಹವಾಮಾನ ಸುಧಾರಿಸಿದ ನಂತರ, ದಕ್ಷಿಣ ಕೆರೊಲಿನಾದ ನ್ಯಾಯಾಂಗ ಇಲಾಖೆಯ ಹೆಲಿಕಾಪ್ಟರ್ ಕೂಡ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ ಎಂದು ಅವರು ಹ್ಲೇದ್ದಾರೆ. ಎಫ್-35 ಯುದ್ಧ ವಿಮಾನವನ್ನು ಲಾಕ್‌ಹೀಡ್ ಮಾರ್ಟಿನ್ ಎಂಬ ಕಂಪನಿ ತಯಾರಿಸುತ್ತದೆ.
ಇದನ್ನೂ ಓದಿ-1000 ಪ್ರಕಾಶವರ್ಷ ದೂರದಲ್ಲಿ ಹುಟ್ಟುತ್ತಿದ್ದಾನೆ ಹೊಸ ಸೂರ್ಯ, ಫೋಟೋ ಕ್ಲಿಕ್ಕಿಸಿದ ನಾಸಾದ ಜೇಮ್ಸ್ ವೆಬ್ ಟೆಲಿಸ್ಕೋಪ್
ಬೇಸ್ ಗೆ ಮರಳಿದ ಎರಡನೇ ಪೈಲಟ್
F-35 ಯುದ್ಧ ವಿಮಾನದ ಎರಡನೇ ಪೈಲಟ್ ಪ್ರಸ್ತುತ ಬೇಸ್‌ಗೆ ಮರಳಿದ್ದಾರೆ ಎಂಬುದು ಗಮನಾರ್ಹ. ಕಾಣೆಯಾದ ಫೈಟರ್ ಜೆಟ್ ಮತ್ತು ಅದರ ಪೈಲಟ್ ಅನ್ನು ಬ್ಯೂಫೋರ್ಟ್‌ನಲ್ಲಿರುವ ಯುಎಸ್ ಮೆರೈನ್ ಫೈಟರ್ ಅಟ್ಯಾಕ್ ಟ್ರೈನಿಂಗ್ ಸ್ಕ್ವಾಡ್ರನ್ 501 ಗೆ ಜೋಡಿಸಲಾಗಿದೆ. ಈ ಸ್ಕ್ವಾಡ್ರನ್ ಸಮುದ್ರದಲ್ಲಿ ನಡೆಯುವ ಯುದ್ಧಗಳಿಗೆ ಸೈನಿಕರಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ಹೊಂದಿದೆ. ಅಮೆರಿಕದ ಪೈಲಟ್‌ನ ಹೆಸರನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಇದನ್ನೂ ಓದಿ-ಕರೆಂಟ್ ಬಿಲ್ ಮರೆತ್ಹೋಗಿ, ಇನ್ಮುಂದೆ ಮನೆಗೆ ಉಚಿತವಾಗಿ ವಿದ್ಯುತ್ ಸಿಗಲಿದೆ, ಇಲ್ಲಿದೆ ಟ್ರಿಕ್!
6900 ಎಕರೆಗಳಲ್ಲಿ ಹರಡಿರುವ ಅಮೆರಿಕದ ಬ್ಯೂಫೋರ್ಟ್ ಮೆರೈನ್ ಕಾರ್ಪ್ಸ್ ಏರ್ ಸ್ಟೇಷನ್‌ನಲ್ಲಿ 4700 ಸೈನಿಕರನ್ನು ನಿಯೋಜಿಸಲಾಗಿದೆ. ತರಬೇತಿಯನ್ನು ನೀಡುವುದರ ಹೊರತಾಗಿ, ಇದು ದಕ್ಷಿಣ ಕೆರೊಲಿನಾ ಮತ್ತು ಜಾರ್ಜಿಯಾದಲ್ಲಿ ವಾಯು ಮೇಲ್ಮೈ ದಾಳಿಯನ್ನು ನಡೆಸುತ್ತದೆ. ಇದಲ್ಲದೆ, ಇದು ಶತ್ರು ಸ್ಥಾನಗಳನ್ನು ಸಹ ನಾಶಪಡಿಸುತ್ತದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.