ವಾಷಿಂಗ್ಟನ್: ಮಹಾಮಾರಿ ಕರೋನಾವೈರಸ್ (Coronavirus)  ಕೋವಿಡ್-19 ಹರಡುವಿಕೆಯಿಂದ ದೇಶದಲ್ಲಿ ತಲೆದೋರಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಅಮೆರಿಕ ಹೆಚ್ಚು ನುರಿತ ಭಾರತೀಯ ಐಟಿ ವೃತ್ತಿಪರರಲ್ಲಿ ಜನಪ್ರಿಯವಾಗಿರುವ ಹೆಚ್ -1 ಬಿ (H-1B) ಯಂತಹ ಕೆಲವು ಕೆಲಸದ ಆಧಾರಿತ ವೀಸಾಗಳ ವಿತರಣೆಗೆ ಅಮೆರಿಕ ತಾತ್ಕಾಲಿಕ ನಿಷೇಧ ಹೇರಲಿದೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

H-1B ಎಂಬುದು ಅಮೆರಿಕ(America)ದಲ್ಲಿರುವ ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅವಕಾಶ ನೀಡುತ್ತದೆ. ಪ್ರಸ್ತುತ ಯುಎಸ್ ನಲ್ಲಿ H-1B ವೀಸಾ ಪಡೆದು ಸುಮಾರು 5,00,000 ಮಂದಿ ಕೆಲಸಮಾಡುತ್ತಿದ್ದಾರೆ.


ಸದ್ಯ ಈ ಕುರಿತಂತೆ ವರದಿ ಸಿದ್ದಪಡಿಸಿ ಆದೇಶಕ್ಕಾಗಿ ಯೋಜನೆ ರೂಪಿಸುತ್ತಿರುವ ಅಮೆರಿಕ ಅಧ್ಯಕ್ಷರ ವಲಸೆ ಸಲಹೆಗಾರರು ಹೊಸ ತಾತ್ಕಾಲಿಕ ಕೆಲಸ ಆಧಾರಿತ ವೀಸಾಗಳ ವಿತರಣೆಯನ್ನು ನಿಷೇಧಿಸುವ ಪ್ರಯತ್ನದಲ್ಲಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಶುಕ್ರವಾರ ವರದಿ ಮಾಡಿದೆ.


ಹೆಚ್ಚು ನುರಿತ ಕೆಲಸಗಾರರಿಗಾಗಿ ವಿನ್ಯಾಸಗೊಳಿಸಲಾದ ಎಚ್ -1 ಬಿ ಮತ್ತು ಕಾಲೋಚಿತ ವಲಸೆ ಕಾರ್ಮಿಕರಿಗಾಗಿ ಎಚ್ -2 ಬಿ ಹಾಗೂ ವಿದ್ಯಾರ್ಥಿ ವೀಸಾಗಳು ಮತ್ತು ಅವರೊಂದಿಗೆ ಬರುವ ಕೆಲಸದ ದೃಢೀಕರಣ ಸೇರಿದಂತೆ ವೀಸಾ ವಿಭಾಗಗಳ ಮೇಲೆ ಈ ಆದೇಶವು ಗಮನ ಹರಿಸುವ ನಿರೀಕ್ಷೆಯಿದೆ.


ಆದಾಗ್ಯೂ ಈ ಕುರಿತಂತೆ ಆಡಳಿತಾಧಿಕಾರಿಗಳು ಒಮ್ಮತದ ನಿರ್ಧಾರಕ್ಕೆ ಬಂದಿಲ್ಲ. ಇದು ಸಂಪೂರ್ಣ ವೀಸಾ ವರ್ಗಗಳ ಅಮಾನತುಗಳಿಂದ ಹಿಡಿದು ವಜಾಗೊಳಿಸುವಿಕೆಯವರೆಗೆ ಹೆಚ್ಚು ಹಾನಿಗೊಳಗಾದ ಕೈಗಾರಿಕೆಗಳಲ್ಲಿ ಅಮೆರಿಕನ್ನರನ್ನು ನೇಮಿಸಿಕೊಳ್ಳಲು ಯಾವ ರೀತಿ ಪ್ರೋತ್ಸಾಹ ನೀಡಬಹುದು ಎಂಬುದರ ಬಗ್ಗೆ ರೂಪುರೇಷೆ ಸಿದ್ಧಪಡಿಸುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.


ಕೆಲವು ಹೊಸ ರಿಪಬ್ಲಿಕನ್ ಸೆನೆಟರ್‌ಗಳು ಟ್ರಂಪ್‌ಗೆ ಪತ್ರ ಬರೆದು  ವರ್ಷ ಅಥವಾ ನಿರುದ್ಯೋಗ ಅಂಕಿಅಂಶಗಳು ದೇಶದಲ್ಲಿ ಸಾಮಾನ್ಯ ಮಟ್ಟಕ್ಕೆ ಮರಳುವವರೆಗೆ ಎಲ್ಲಾ ಹೊಸ ಅತಿಥಿ ಕೆಲಸಗಾರರ ವೀಸಾಗಳನ್ನು 60 ದಿನಗಳವರೆಗೆ ಮತ್ತು ಎಚ್ -1 ಬಿ ವೀಸಾ ಸೇರಿದಂತೆ ಅದರ ಕೆಲವು ವಿಭಾಗಗಳನ್ನು ಕನಿಷ್ಠ ಮುಂದಿನ ಅವಧಿಗೆ ಅಮಾನತುಗೊಳಿಸುವಂತೆ ಒತ್ತಾಯಿಸಿದೆ ಮನವಿ ಮಾಡಿವೆ. ಈ ಪತ್ರ ಬರೆದ ಒಂದು ದಿನದ ನಂತರ ದಿ ವಾಲ್ ಸ್ಟ್ರೀಟ್ ಜರ್ನಲ್‌ನ ವರದಿಯು ಬಂದಿದೆ.


ಕೋವಿಡ್-19 (Covid-19)  ಸಾಂಕ್ರಾಮಿಕ ರೋಗದಿಂದಾಗಿ ಯುಎಸ್ (US) ಆರ್ಥಿಕತೆಯನ್ನು ಸ್ಥಗಿತಗೊಂಡಿದ್ದು ಕಳೆದ ಎರಡು ತಿಂಗಳಲ್ಲಿ 33 ದಶಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಉದ್ಯೋಗ ಕಳೆದುಕೊಂಡಿದ್ದಾರೆ. ಎರಡನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆಯು ಶೇಕಡಾ 15 ರಿಂದ 20 ರಷ್ಟು ಋಣಾತ್ಮಕವಾಗಿ ಬೆಳೆಯುವ ಸಾಧ್ಯತೆಯಿದೆ ಎಂದು ಶ್ವೇತಭವನದ ಅಧಿಕಾರಿಗಳು ಅಂದಾಜಿಸಿದ್ದಾರೆ.


ಯುಎಸ್ ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ ಶುಕ್ರವಾರ (ಮೇ 8) ಬಿಡುಗಡೆಯಾದ ಇತ್ತೀಚಿನ ಮಾಸಿಕ ಉದ್ಯೋಗ ವರದಿಯು ಯುಎಸ್ನಲ್ಲಿ ಏಪ್ರಿಲ್ ತಿಂಗಳಲ್ಲಿ ನಿರುದ್ಯೋಗ ದರವನ್ನು ಶೇಕಡಾ 14.7ಕ್ಕೆ ಇಳಿಸಿದೆ, ಇದು ಅಮೆರಿಕದ ಇತಿಹಾಸದಲ್ಲೇ ಅತಿ ಹೆಚ್ಚು ಎನ್ನಲಾಗಿದೆ.