Viral News: ಹುಡುಗಿಯರ ಬಟ್ಟೆಗಳ ಬಗ್ಗೆ ಪ್ರೇಯಸಿಗೆ ಕೇಳುತ್ತಿದ್ದ ಬಾಯ್ಫ್ರೆಂಡ್, ಏನು ಮಾಡಿದ್ದಾನೆ ನೋಡಿ..!
ನನ್ನ ಬಾಯ್ ಫ್ರೆಂಡ್ ಬಟ್ಟೆಗಳನ್ನು ನನ್ನ ಆಪ್ತ ಸ್ನೇಹಿತೆಗೆ ಕಳುಹಿಸುತ್ತಿದ್ದ, ನನಗೆ ಮೋಸ ಮಾಡಿದ ಆತ ನನ್ನ ಸ್ನೇಹಿತೆಯೊಂದಿಗೂ ಪ್ರೀತಿ ಶುರುವಿಟ್ಟುಕೊಂಡಿದ್ದ ಎಂದು ಯುವತಿ ಹೇಳಿದ್ದಾಳೆ.
ನವದೆಹಲಿ: ಪ್ರೇಮಿಗಳು ಒಬ್ಬರಿಗೊಬ್ಬರು ಮೋಸ ಮಾಡುವ ಅನೇಕ ಘಟನೆಗಳು ಹೆಚ್ಚಾಗಿ ಮುನ್ನೆಲೆಗೆ ಬರುತ್ತವೆ. ಇದರಲ್ಲಿ ಕೆಲವರು ಬೀದಿ ರಂಪಾಟ ಮಾಡಿಕೊಂಡರೆ, ಇನ್ನು ಕೆಲವರು ತಮ್ಮ ರಾದ್ಧಾಂತವನ್ನು ದೀರ್ಘಕಾಲ ರಹಸ್ಯವಾಗಿ ಇಡುತ್ತಾರೆ. ಅದೇ ರೀತಿಯ ಘಟನೆಯೊಂದರಲ್ಲಿ ಯುವತಿಯೊಬ್ಬಳು ತನ್ನ ಬಾಯ್ ಫ್ರೆಂಡ್ ತನೆಗೆ ಹೇಗೆ ಮೋಸ(Boyfriend Cheating) ಮಾಡಿದ್ದರ ಬಗ್ಗೆ ಸೋಷಿಯಲ್ ಮೀಡಿಯಾ(Social Media)ದಲ್ಲಿ ಹಂಚಿಕೊಂಡಿದ್ದಾಳೆ.
ವರದಿಗಳ ಪ್ರಕಾರ, ಹುಡುಗಿಯರ ಬಟ್ಟೆಗಳ ಬಗ್ಗೆ ಪ್ರೇಯಸಿ ಬಳಿ ಆಕೆಯ ಬಾಯ್ ಫ್ರೆಂಡ್(Boyfriend) ಪದೇ ಪದೇ ಕೇಳುತ್ತಿದ್ದನಂತೆ. ಆಗಾಗ ಹುಡುಗಿಯರ ಬಟ್ಟೆಗಳನ್ನು ಆರ್ಡರ್ ಮಾಡುತ್ತಿದ್ದ ಆತ ಆ ಬಟ್ಟೆಗಳನ್ನು ತನ್ನ ಪ್ರೇಯಸಿಗೆ ಕೊಡುತ್ತಿರಲಿಲ್ಲವಂತೆ. ಆನ್ಲೈನಲ್ಲಿ ಬಟ್ಟೆಗಳನ್ನು ಆರ್ಡರ್ ಮಾಡುತ್ತಿದ್ದ ನನ್ನ ಬಾಯ್ ಫ್ರೆಂಡ್ ಅವುಗಳನ್ನು ಗಿಫ್ಟ್(Clothes Gift) ಆಗಿ ನನಗೆ ಕೊಡುತ್ತಾನೆ ಎಂದುಕೊಂಡಿದ್ದೆ. ಆದರೆ ಆತ ನನಗೆ ಒಂದು ಬಟ್ಟೆಯನ್ನು ಗಿಫ್ಟ್ ನೀಡಿಲ್ಲ ಅಂತಾ ಮೋಸ ಹೋದ ಯುವತಿ ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: ಜಮೀನಿನಲ್ಲಿ ಎಲೆಕೋಸು ಕೀಳುವ ಕೆಲಸಕ್ಕೆ ಬರೋಬ್ಬರಿ 63 ಲಕ್ಷ ರೂ. ಸಂಬಳ..!
ಈ ಬಗ್ಗೆ ಅನೇಕ ಬಾರಿ ಕೇಳಿದರೂ ಆತ ನನಗೆ ಏನೇನೂ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಇದು ಹಲವಾರು ದಿನಗಳವರೆಗೆ ಹೀಗೇ ನಡೆಯಿತು. ನಂತರ ನಾನು ಆಕಸ್ಮಿಕವಾಗಿ ನನ್ನ ಗೆಳೆಯನ ಇಮೇಲ್ ಖಾತೆಯನ್ನು ಪರೀಶಿಲಿಸಿದಾಗ ಒಂದು ವಿಚಿತ್ರ ಮೇಲ್ ಅನ್ನು ನೋಡಿದೆ. ಅದು ಆತನಿಗೆ ಬಟ್ಟೆ ಬರುತ್ತಿದ್ದ ಅದೇ ಬಟ್ಟೆ ಬ್ರಾಂಡ್ನ ಅಂಗಡಿಯದ್ದು. ಆತ ಆ ಅಂಗಡಿ ಮೂಲಕ ಹಲವಾರು ಬಾರಿ ಬಟ್ಟೆ(Women Clothes)ಗಳನ್ನು ಆರ್ಡರ್ ಮಾಡಿ ಪಡೆದುಕೊಂಡಿದ್ದ. ಇದನ್ನು ನೋಡಿದ ಬಳಿಕ ಆತ ಏನೋ ನನ್ನಿಂದ ಬಚ್ಚಿಡುತ್ತಿದ್ದಾನೆಂಬುದು ತಿಳಿಯಿತು. ನನ್ನ ಗೆಳೆಯ ನನಗೆ ಮೋಸ ಮಾಡುತ್ತಿದ್ದಾನೆ ಎಂದು ಅರಿವಾಯಿತು. ಆನ್ಲೈನಲ್ಲಿ ಆರ್ಡರ್ ಮಾಡುತ್ತಿದ್ದ ಆ ಬಟ್ಟೆಗಳನ್ನು ಆತ ಯಾರಿಗೆ ನೀಡುತ್ತಿದ್ದಾನೆಂಬುದು ನನಗೆ ಗೊತ್ತಾಗಲಿಲ್ಲ. ಇದರ ಬಗ್ಗೆ ನಾನು ಹಲವು ದಿನಗಳವರೆಗೆ ತಲೆಕೆಡಿಸಿಕೊಂಡಿದ್ದೆ. ಆದರೆ ನನ್ನ ಬಾಯ್ ಫ್ರೆಂಡ್ ಮಾಡುತ್ತಿರುವ ಮೋಸದ ಬಗ್ಗೆ ಹಲವು ದಿನಗಳವರೆಗೆ ತಿಳಿಯಲಿಲ್ಲ.
ಇದನ್ನೂ ಓದಿ: ಯುಕೆ ಪ್ರಯಾಣಿಕರಿಗೆ 10 ದಿನ ಕ್ವಾರಂಟೈನ್ ಕಡ್ಡಾಯಗೊಳಿಸುವ ಮೂಲಕ ತಿರುಗೇಟು ನೀಡಿದ ಭಾರತ
ನಿಜವಾದ ಸತ್ಯ ಹೊರಬಂದಾಗ
ನನ್ನ ಗೆಳೆಯ ಪದೇ ಪದೇ ಹುಡುಗಿಯರ ಬಟ್ಟೆಗಳ(Women Clothes)ಬಗ್ಗೆ ನನ್ನ ಬಳಿ ಕೇಳುತ್ತಿದ್ದ. ಆತನ ಇಮೇಲ್ಗಳ ವಿವರದ ಬಗ್ಗೆ ತಿಳಿದುಕೊಂಡೆ. ಆತ ಯಾರಿಗೆ ಬಟ್ಟೆ ನೀಡುತ್ತಿದ್ದಾನೆಂಬುದನ್ನು ಕಂಡುಹಿಡಿಯಲು ನಾನು ಖುದ್ದು ಬಟ್ಟೆ ತಯಾರಿಸುತ್ತಿದ್ದ ಅಂಗಡಿಗೆ ಭೇಟಿ ನೀಡಿದೆ. ಆದರೆ ಗೌಪ್ಯತೆ ಕಾರಣ ಸ್ಟೋರ್ ಮ್ಯಾನೇಜರ್ ಬಟ್ಟೆಗಳನ್ನು ಸಾಗಿಸುತ್ತಿದ್ದ ವಿಳಾಸವನ್ನು ಬಹಿರಂಗಪಡಿಸಲು ನಿರಾಕರಿಸಿದರು. ಆದರೆ ಅವರು ಯಾರ ಹೆಸರಿಗೆ ಬಟ್ಟೆ ಆರ್ಡರ್ ಹೋಗುತ್ತಿದೆ ಎಂಬುದರ ಬಗ್ಗೆ ಸುಳಿವು ನೀಡಿದ್ದರು. ಆ ವ್ಯಕ್ತಿಯ ಮೊದಲ ಹೆಸರನ್ನು ನನಗೆ ನೀಡಿದರು. ಆ ಹೆಸರು ನೋಡಿದ ನನಗೆ ಒಂದು ಕ್ಷಣ ಶಾಕ್ ಆಯಿತು. ನನ್ನ ಬಾಯ್ ಫ್ರೆಂಡ್ ಬಟ್ಟೆಗಳನ್ನು ನನ್ನ ಆಪ್ತ ಸ್ನೇಹಿತೆಗೆ ಕಳುಹಿಸುತ್ತಿದ್ದ. ನನಗೆ ಮೋಸ ಮಾಡಿದ ಆತ ನನ್ನ ಸ್ನೇಹಿತೆಯೊಂದಿಗೂ ಪ್ರೀತಿ ಶುರುವಿಟ್ಟುಕೊಂಡಿದ್ದ. ಇವರಿಬ್ಬರೂ ಪರಸ್ಪರ ಯಾವಾಗ ಪರಿಚಯವಾದರು, ಯಾವಾಗ ಪ್ರೀತಿಸಲು ಶುರು ಮಾಡಿದರು ಎಂಬುದೇ ನನಗೆ ಗೊತ್ತಾಗಲಿಲ್ಲ. ನನಗೆ ಬಾಯ್ ಫ್ರೆಂಡ್ ಜೊತೆಗೆ ನನ್ನ ಆಪ್ತ ಸ್ನೇಹಿತೆಯು ಮೋಸ ಮಾಡಿದ್ದಾಳೆಂದು ಯುವತಿ ಬೇಸರ ವ್ಯಕ್ತಪಡಿಸಿದ್ದಾಳೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.