ನವದೆಹಲಿ: ಯುಕೆಯಿಂದ ಭಾರತಕ್ಕೆ ಭೇಟಿ ನೀಡುವ ಎಲ್ಲ ಪ್ರಯಾಣಿಕರಿಗೆ 10 ದಿನಗಳ ಸಂಪರ್ಕತಡೆಯನ್ನು ಕಡ್ಡಾಯಗೊಳಿಸುವ ಮೂಲಕ ಭಾರತ ಯುಕೆಗೆ ತಿರುಗೇಟು ನೀಡಿದೆ.ಈ ನಿಯಮವು ಲಸಿಕೆಯ ಸ್ಥಿತಿಯ ಹೊರತಾಗಿಯೂ ಎಲ್ಲರಿಗೂ ಅನ್ವಯವಾಗುತ್ತದೆ.
ಭಾರತ ಸೇರಿದಂತೆ ಹಲವು ರಾಷ್ಟ್ರಗಳ ನಾಗರಿಕರಿಗೆ ಸಂಪೂರ್ಣ ಲಸಿಕೆಯ ಹೊರತಾಗಿಯೂ ಸಂಪರ್ಕ ತಡೆ (Quarantine) ಯನ್ನು ಕಡ್ಡಾಯಗೊಳಿಸಿತ್ತು.ಯುಕೆ ಸರ್ಕಾರದ ಇತ್ತೀಚಿನ ಪ್ರಯಾಣ ನಿಯಮಗಳ ಪ್ರಕಾರ, ಕೋವಿಶೀಲ್ಡ್ ಕೋವಿಡ್ -19 ವಿರುದ್ಧ ಅನುಮೋದಿತ ಲಸಿಕೆಯಾಗಿದ್ದರೂ, ಭಾರತದ ಲಸಿಕೆ ಪ್ರಮಾಣಪತ್ರವನ್ನು ಗುರುತಿಸಿಲ್ಲ. ಈ ಹಿನ್ನಲೆಯಲ್ಲಿ ಈಗ ಇದಕ್ಕೆ ಪ್ರತಿಯಾಗಿ ಭಾರತದ ಕ್ರಮ ಬಂದಿದೆ.
ಇದನ್ನೂ ಓದಿ: COVID-19: 14 ದಿನಗಳ Quarantine ನಂತರ ಆರ್‌ಟಿ-ಪಿಸಿಆರ್ ಟೆಸ್ಟ್ ಏಕೆ ಅಗತ್ಯವಿಲ್ಲ? ತಜ್ಞರು ಏನ್ ಹೇಳ್ತಾರೆ?
ಭಾರತದ ಲಸಿಕೆ ಪ್ರಮಾಣೀಕರಣವು 18 ಅನುಮೋದಿತ ರಾಷ್ಟ್ರಗಳ ಪಟ್ಟಿಯಲ್ಲಿಲ್ಲದ ಕಾರಣ, ಯುಕೆಗೆ ಭಾರತೀಯ ಪ್ರಯಾಣಿಕರನ್ನು "ಲಸಿಕೆ ಹಾಕದವರು"ಎಂದು ಪರಿಗಣಿಸಲಾಗುತ್ತಿದೆ ಮತ್ತು ಆದ್ದರಿಂದ 10 ದಿನಗಳ ಕಾಲ ಸಂಪರ್ಕತಡೆಯನ್ನು ಮಾಡಬೇಕಾಗುತ್ತದೆ.
ಇದನ್ನೂ ಓದಿ: RT-PCR ಟೆಸ್ಟ್ ಗೆ ಯಾರು- ಯಾವಾಗ ಒಳಗಾಗಬೇಕು? ಇಲ್ಲಿದೆ ಮಾಹಿತಿ
ಇದು ಅಕ್ಟೋಬರ್ 4 ರಿಂದ ಅನ್ವಯವಾಗುತ್ತದೆ.ಅವರ ಲಸಿಕೆ ಸ್ಥಿತಿ ಏನೇ ಇರಲಿ, ಯುಕೆ ಪ್ರಯಾಣಿಕರೆಲ್ಲರೂ ಭಾರತಕ್ಕೆ ಬಂದ ಮೇಲೆ ಈ ಕಡ್ಡಾಯ ಸಂಪರ್ಕತಡೆಯನ್ನು ಮಾಡಬೇಕಾಗುತ್ತದೆ. ಪ್ರಸ್ತುತ, ಕೋವಿಶೀಲ್ಡ್‌ನ ಎರಡು ಡೋಸ್‌ಗಳನ್ನು ಪಡೆದಿರುವ ಭಾರತೀಯ ಪ್ರಯಾಣಿಕರನ್ನು (ಹಾಗೆಯೇ ಇತರ ಲಸಿಕೆಗಳನ್ನು) ಲಸಿಕೆ ಹಾಕಿಸಿಕೊಳ್ಳದವರು ಎಂದು ಪರಿಗಣಿಸಲಾಗುತ್ತದೆ ಮತ್ತು ಅವರು 10 ದಿನಗಳವರೆಗೆ ಸ್ವಯಂ-ಪ್ರತ್ಯೇಕತೆಗೆ ಒಳಗಾಗಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.