Viral Video: ಎತ್ತರದ ಗುಡ್ಡದಿಂದ ಸೈಕಲ್ ಸಮೇತ ಜಿಗಿದ ಬಾಲಕಿ! ಆಮೇಲೇನಾಯ್ತು..?
ಹುಡುಗಿಯೊಬ್ಬಳು ಸೈಕಲ್ ಸಮೇತ ಅಪಾಯಕಾರಿ ಸ್ಟಂಟ್ ಮಾಡಿರುವುದನ್ನು ನೋಡಿದರೆ ಬೆಚ್ಚಿ ಬೀಳುತ್ತೀರಿ. ಇಂತಹ ಸ್ಟಂಟ್ ಅನ್ನು ನೀವು ಹಿಂದೆಂದೂ ಕಂಡಿರುವುದಿಲ್ಲ. ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿ ಎತ್ತರದ ಗುಡ್ಡದಿಂದ ಸೈಕಲ್‍ನೊಂದಿಗೆ ಜಿಗಿಯುತ್ತಿರುವುದನ್ನು ಕಾಣಬಹುದು.
ನವದೆಹಲಿ: ನೀವು ಸಿನಿಮಾಗಳಲ್ಲಿ ಸೈಕಲ್ ಸ್ಟಂಟ್‌ಗಳ ಅನೇಕ ಅಪಾಯಕಾರಿ ವಿಡಿಯೋಗಳನ್ನು ನೋಡಿರಬೇಕು. ಆದರೆ, ನಿಜ ಜೀವನದಲ್ಲಿ ಯಾರಾದರೂ ಎತ್ತರದ ಬೆಟ್ಟದಿಂದ ಸೈಕಲ್‌ನಲ್ಲಿ ಅಪಾಯಕಾರಿ ಸಾಹಸಗಳನ್ನು ಮಾಡುವುದನ್ನು ನೀವು ನೋಡಿದ್ದೀರಾ? ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಬಾಲಕಿಯೊಬ್ಬಳು ಸೈಕಲ್ ಸಮೇತ ಎತ್ತರದ ಬೆಟ್ಟದಿಂದ ಜಿಗಿಯುತ್ತಿರುವ ದೃಶ್ಯವಿದೆ. ಈ ವಿಡಿಯೋ ನೋಡಿದರೆ ನೀವು ಹೌಹಾರುವುದು ಗ್ಯಾರೆಂಟಿ..!
ಅಪಾಯಕಾರಿ ಸಾಹಸ ಮಾಡಿದ ಯುವತಿ
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಸೈಕಲ್ ತುಳಿಯುತ್ತಾ ಅಪಾಯಕಾರಿ ಸ್ಟಂಟ್ ಮಾಡಿದ್ದಾಳೆ. ಇಂತಹ ಸಾಹಸವನ್ನು ನೀವು ಹಿಂದೆಂದೂ ನೋಡಿರಲಿಕ್ಕಿಲ್ಲ. ಎತ್ತರದ ಬೆಟ್ಟದ ಮೇಲೆ ಯುವತಿ ಸೈಕಲ್ ಹಿಡಿದು ನಿಂತಿರುತ್ತಾಳೆ. ಈ ವೇಳೆ ಕೆಲವರು ಆ ಯುವತಿಯ ಸ್ಟಂಟ್ ಸಾಹಸವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿಯುತ್ತಿರುವುದನ್ನು ನೀವು ಕಾಣಬಹುದು. ಕಣ್ಣು ಬಿಟ್ಟು ನೋಡುವಷ್ಟರಲ್ಲಿ ಯುವತಿ ಎತ್ತರದ ಗುಡ್ಡದ ಮೇಲಿಂದ ಸೈಕಲ್‍ನೊಂದಿಗೆ ಸಾಗಿ ಬೆಟ್ಟದಿಂದ ಜಿಗಿಯುತ್ತಾಳೆ. ಮೇಲಿಂದ ಕೆಳಗೆ ಸೈಕಲ್ ಜಿಗಿಸಿದ ಬಳಿಕ ಮತ್ತೆ ಆಕೆ ಆಚೆ ಬೆಟ್ಟದ ತುದಿಯನ್ನು ಏರುತ್ತಾಳೆ. ಈ ದೃಶ್ಯ ಬಹಳ ರೋಚಕವಾಗಿದೆ.
ಇದನ್ನೂ ಓದಿ: Ukraine : "ಮರಿಯುಪೋಲ್‌ನಲ್ಲಿ ರಷ್ಯಾ ಸಾವಿರಾರು ಜನರನ್ನು ಹತ್ಯೆಗೈದಿದೆ": ಝೆಲೆನ್‌ಸ್ಕಿ ಆರೋಪ
ಬೆಟ್ಟದಿಂದ ಜಿಗಿದ ನಂತರ ಬಾಲಕಿ ಸುರಕ್ಷಿತವಾಗಿ ಕೆಳಗೆ ಇಳಿಯುತ್ತಾಳೆ. ಈ ವಿಡಿಯೋ ಒಂದುಕ್ಷಣ ನಿಮ್ಮನ್ನು ಮೈರೋಮಾಂಚನಗೊಳ್ಳುತ್ತದೆ. ತುಂಬಾ ಕಡಿದಾದ ಬೆಟ್ಟದಲ್ಲಿ ಆಕೆ ಸೈಕಲ್ ಸಮೇತ ಅಪಾಯಕಾರಿ ಸ್ಟಂಟ್ ಮಾಡಿರುವುದನ್ನು ನೋಡುವುದೇ ಒಂದು ರೀತಿಯ ರೋಮಾಂಚನಕಾರಿ ಅನುಭವ ನೀಡುತ್ತದೆ.
ಸ್ವಲ್ಪವೂ ಹೆದರದ ಯುವತಿ!
ಯುವತಿ ತುಂಬಾ ಡೇಂಜರಸ್ ಸ್ಟಂಟ್ ಮಾಡಿದರೂ ಕೊಂಚಯೂ ಭಯಪಡುವುದಿಲ್ಲ. ಈ ವಿಡಿಯೋವನ್ನು beautifuldestinations ಹೆಸರಿನ Instagram ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು 95 ಮಿಲಿಯನ್ ಜನರು ವೀಕ್ಷಿಸಿದ್ದಾರೆ. 61ಲಕ್ಷಕ್ಕೂ ಹೆಚ್ಚು ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿದ ಬಳಕೆದಾರರೊಬ್ಬರು, ‘ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಕ್ಕೆ ಕುತ್ತಾಗುತ್ತದೆ’ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: America Green Card:ಗ್ರೀನ್ ಕಾರ್ಡ್ ಸಂಬಂಧಿತ ದೇಶವಾರು ಮಿತಿ ರದ್ದು: ಮಸೂದೆಗೆ ಅಂಗೀಕಾರ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.