ನವದೆಹಲಿ: ಇಂಟರ್ನೆಟ್ ಪ್ರಪಂಚವು ಅದ್ಭುತ ಸಂಗತಿಗಳಿಂದ ತುಂಬಿದೆ. ಪ್ರತಿನಿತ್ಯ ಇಲ್ಲಿ ಯಾವುದೋ ಒಂದು ವಿಡಿಯೋ(Viral Video) ನಮ್ಮನ್ನು ಬೆರಗುಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ಹಾವಿನ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. ನೀವು ಕೂಡ ಹಾವಿನ ವಿಡಿಯೋಗಳನ್ನು ವೀಕ್ಷಿಸಿರುತ್ತೀರಿ. ಅದೇ ರೀತಿಯ ಮತ್ತೊಂದು ವಿಡಿಯೋ ಇದೀಗ ಸಖತ್ ಸೌಂಡ್ ಮಾಡುತ್ತಿದೆ.


COMMERCIAL BREAK
SCROLL TO CONTINUE READING

ಈ ವಿಡಿಯೋದಲ್ಲಿರುವ ದೈತ್ಯ ಹೆಬ್ಬಾವ(Pythons)ನ್ನು ನೋಡಿದರೆ ಪ್ರತಿಯೊಬ್ಬರೂ ಬೆಚ್ಚಿಬೀಳುತ್ತಾರೆ. ಆದರೆ ಈ ಮಗು ಮಾತ್ರ ಹೆದರದೆ ಅದರ ಜೊತೆಗೆ ಆಟವಾಡುತ್ತಿದೆ. ಸಣ್ಣ ಹಾವು ಕಂಡರೆ ಸಾಕು ಮಾರುದ್ದ ಹೋಗುವ ಜನರು ಇರುವಾಗ ಇಲ್ಲಿ ಈ ಪುಟ್ಟ ಮಗು ಯಾವುದೇ ರೀತಿ ಭಯಪಟ್ಟುಕೊಳ್ಳದೆ ಹಾವಿನ ಜೊತೆ ಸರಸವಾಡಿದೆ.


ಇದನ್ನೂ ಓದಿ: Mystery House On Moon:ಚಂದ್ರನ ಮೇಲೆ "ಮಿಸ್ಟರಿ ಹೌಸ್".! ಅಚ್ಚರಿ ತಂದ ಚೈನೀಸ್ ರೋವರ್ ಸೆರೆಹಿಡಿದ ಚಿತ್ರ


ದೈತ್ಯ ಹೆಬ್ಬಾವಿನ(Snakes) ಜೊತೆಗೆ ಆಟವಾಡುತ್ತಾ, ಅದರ ಮೇಲೆ ಹೊರಳಾಡುತ್ತಿರುವ ಪುಟ್ಟ ಮಗುವಿನ ಧೈರ್ಯ ಮೆಚ್ಚಲೇಬೇಕು. ಇಷ್ಟು ಸಣ್ಣ ವಯಸ್ಸಿನಲ್ಲಿ ಹೆಬ್ಬಾವು ಕಂಡರೂ ಭಯಪಟ್ಟುಕೊಳ್ಳದ ಈ ಪುಟ್ಟ ಮಗುವಿನ ಧೈರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ(Viral Video)ವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದು, ಅನೇಕರು ಇನ್ನೂ ಕೂಡ ಶೇರ್ ಮಾಡುತ್ತಲೇ ಇದ್ದಾರೆ.  


ದುಬಾರಿ ಸೂರ್ಯ! ಇನ್‌ಸ್ಟಾಗ್ರಾಮ್‌ನಲ್ಲಿ ಹವಾ ಎಬ್ಬಿಸಿದ ಈ ಫೋಟೋ ಬೆಲೆ ಎಷ್ಟುಗೊತ್ತೆ?


ಸದ್ಯ ಪುಟ್ಟ ಹುಡುಗಿ ದೈತ್ಯ ಹೆಬ್ಬಾವಿನ ಜೊತೆಗೆ ಸಲುಗೆಯಿಂದ ಇರುವ ವಿಡಿಯೋ ಭರ್ಜರಿ ವೈರಲ್ ಆಗಿದೆ. ವಿಡಿಯೋ ನೋಡಿದ ಪ್ರತಿಯೊಬ್ಬರಿಗೂ ಅಚ್ಚರಿ ಮೂಡಿಸಿದ್ದು, ಪುಟ್ಟ ಬಾಲಕಿಯ ಧೈರ್ಯ ಮೆಚ್ಚಿ ಶಹಬ್ಬಾಸ್ ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.