ಚೀನಾದ ಯುಟು-2 ಮೂನ್ ರೋವರ್‌ನಿಂದ (Yutu-2 moon rover) ಚಂದ್ರನ ಮೇಲ್ಮೈಯಲ್ಲಿ ಗುರುತಿಸಲಾದ ವಿಚಿತ್ರವಾಗಿ ಕಾಣುವ, ಘನಾಕೃತಿಯ ವಸ್ತುವು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ.
ಕಳೆದ ವಾರ ಚೀನಾದ ಬಾಹ್ಯಾಕಾಶ ಸಂಸ್ಥೆ ಬಿಡುಗಡೆ ಮಾಡಿದ ಫೋಟೋಗಳಲ್ಲಿ ಈ ವಸ್ತು ಕಾಣಿಸಿಕೊಂಡಿದೆ. Space.com ಪ್ರಕಾರ, ರೋವರ್ ಚಂದ್ರನ ದೂರದ ಭಾಗದಲ್ಲಿ ವಾನ್ ಕರ್ಮನ್ ಕುಳಿಯ (Von Karman crater) ಮೂಲಕ ಸಾಗುತ್ತಿರುವಾಗ ಈ ವಸ್ತುವನ್ನು ಗುರುತಿಸಿತು.
CNET ಪ್ರಕಾರ, ವಸ್ತುವಿಗೆ "ಮಿಸ್ಟರಿ ಹೌಸ್" (Mystery House On Moon) ಎಂದು ಹೆಸರಿಸಲಾಗಿದೆ. ಉತ್ತಮ ನೋಟವನ್ನು ಪಡೆಯಲು ವಿಜ್ಞಾನಿಗಳು ರೋವರ್ ಅನ್ನು ಅದರ ಹತ್ತಿರ ಕಳುಹಿಸುವ ಸಾಧ್ಯತೆಯಿದೆ.
Ah. We have an update from Yutu-2 on the lunar far side, including an image of a cubic shape on the northern horizon ~80m away from the rover in Von Kármán crater. Referred to as "神秘小屋" ("mystery house"), the next 2-3 lunar days will be spent getting closer to check it out. pic.twitter.com/LWPZoWN05I
— Andrew Jones (@AJ_FI) December 3, 2021
ಆವಿಷ್ಕಾರವು ಟ್ವಿಟರ್‌ನಲ್ಲಿ ಹಲವು ಚರ್ಚೆಗೆ ಕಾರಣವಾಗಿದೆ. ವಸ್ತುವು ಉತ್ಖನನ ಮಾಡಿದ ಬಂಡೆಗಲ್ಲು (boulder that was excavated)ಎಂಬುದು ಅತ್ಯಂತ ಸಂಭವನೀಯ ವಿವರಣೆಯಾಗಿದೆ.
Chinese rover Yutu-2 has been exploring the far side of the moon since early 2019. This week it sent an image of a cubic shape on the northern horizon ~80m away from the rover in Von Kármán crater. Referred to as "神秘小屋" ("mystery house") [read more: https://t.co/BU8HFrPkRU] pic.twitter.com/XCBoHvjguo
— Massimo (@Rainmaker1973) December 5, 2021
2019 ರಲ್ಲಿ, ಯುಟು-2 (Yutu-2 moon rover)ಚಂದ್ರನ ಮೇಲೆ "ಹಸಿರು-ಲೇಪಿತ ಜೆಲ್ ತರಹದ ವಸ್ತು" ವನ್ನು (green-tinged gel-like substance) ಕಂಡುಹಿಡಿದಿದೆ. ಹೆಚ್ಚು ನಿರ್ದಿಷ್ಟವಾಗಿ, ಖನಿಜಗಳು ಮತ್ತು ಬಂಡೆಗಳು ಒಟ್ಟಿಗೆ ಬೆಸೆದಾಗ ರೂಪುಗೊಳ್ಳುವ ಕಲ್ಲಿನಂತಹ ವಸ್ತು ಇರಬಹುದು ಎನ್ನಲಾಗಿದೆ.
ಇನ್ನೂ, ಕ್ಯೂಬ್ ಆಕಾರದ ವಸ್ತು ಏನಾಗಿರಬಹುದು ಎಂಬುದರ ಕುರಿತು ಊಹಾಪೋಹಗಳು ಹರಿದಾಡುತ್ತಿವೆ.
ಇದನ್ನೂ ಓದಿ: ಫುಟ್‌ಪಾತ್‌ನಲ್ಲಿ ಪೆನ್ನು ಮಾರುತ್ತಿದ್ದ ಬಾಲಕಿಗೆ iPhone ಗಿಫ್ಟ್ ಕೊಟ್ಟ ಲಾಲೂ ಪುತ್ರ ತೇಜ್ ಪ್ರತಾಪ್