Viral Video: ಪೊದೆಯಿಂದ ಜಿಗಿದ ಹಾವು; ಮಹಿಳೆಗೆ ಏನಾಯ್ತು ನೋಡಿ..!
ಪೊದೆಯಲ್ಲಿ ಅಡಗಿ ಕುಳಿತ್ತಿದ್ದ ಹಾವು ಮಹಿಳೆ ಮೇಲೆ ಎರಗಿರುವ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನವದೆಹಲಿ: ಟೆಕ್ಸಾಸ್‌ನ ಮಹಿಳೆಯೊಬ್ಬರು ಮನೆಯಿಂದ ಹೊರ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಪೊದೆಯಿಂದ ಬುಸುಗುಡುತ್ತ ಆಕೆ ಮೇಲೆ ಹಾವೊಂದು(Snake) ಎರಗಿದೆ. ಈ ವೇಳೆ ನಾನು ಸತ್ತೇ ಹೋದೆ ಎಂದು ಮಹಿಳೆ ಭಯದಿಂದ ಜೋರಾಗಿ ಕಿರುಚಾಡಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಚೌನ್ವಾ ಲೆಕಾಂಪ್ಟೆ(Chaunva LeCompte) ಎಂಬುವರು ತಮ್ಮ ಮನೆಯ ಮುಂಭಾಗ ಕುಳಿತುಕೊಳ್ಳಲೆಂದು ನಡೆದುಕೊಂಡು ಹೊರಗಡೆ ಹೋಗುತ್ತಿದ್ದರು. ಈ ವೇಳೆ ಪೊದೆಯಲ್ಲಿ ಅವಿತುಕೊಂಡು ಕುಳಿತಿದ್ದ ಹಾವು ಇದ್ದಕ್ಕಿದ್ದಂತೆ ಆಕೆಯ ಮೇಲೆ ಹಾರಿದೆ. ಈ ಭಯಾನಕ ದೃಶ್ಯವು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಾವು ತನ್ನ ಮೇಲೆ ಎರಗುತ್ತಿದ್ದಂತೆ ಭಯದಿಂದ ಲೆಕಾಂಪ್ಟೆ ಜೋರಾಗಿ ಕಿರುಚಿದ್ದಾಳೆ. ಹಾವಿ(Snake)ನಿಂದ ರಕ್ಷಿಸಿಕೊಳ್ಳಲು ಸ್ಥಳದಿಂದ ಮನೆಯೊಳಗೆ ಓಟ ಕಿತ್ತಿದ್ದಾಳೆ.
ಮಹಿಳೆಯರು ಮಂತ್ರಿಯಾಗಲು ಸಾಧ್ಯವಿಲ್ಲ, ಅವರು ಮಕ್ಕಳನಷ್ಟೇ ಹೆರಬೇಕು: ತಾಲಿಬಾನ್ ವಕ್ತಾರ
ಟೆಕ್ಸಾಸ್‌ನ ಬರ್ಲೆಸನ್(Burleson) ಮನೆಯಲ್ಲಿ ಈ ಘಟನೆ ಸಂಭವಿಸಿದೆ. ‘ನಾನು ನನ್ನ ತಾಯಿಯೊಂದಿಗೆ ಕುಳಿತುಕೊಳ್ಳಲು ಮನೆಯಿಂದ ಹೊರಗಡೆ ನಡೆದುಕೊಂಡು ಹೋಗುತ್ತಿದ್ದೆ. ಈ ವೇಳೆ ಪೊದೆಯಲ್ಲಿ ಅಡಗಿ ಕುಳಿತಿದ್ದ ಹಾವು ನನ್ನ ಮೇಲೆ ಇದ್ದಕ್ಕಿದ್ದಂತೆ ಹಾರಿತು. ಹಾವು(Snake) ಪೊದೆಯಲ್ಲಿದೆ ಎಂಬುದು ನನಗೆ ಗೊತ್ತಿರಲಿಲ್ಲ. ನನಗಂತೂ ತುಂಬಾ ಭಯವಾಗಿತ್ತು. ಎಲ್ಲಿ ಹಾವು ಕಚ್ಚಿ ನಾನು ಸಾವನ್ನಪ್ಪುತ್ತೇನೋ ಅಂತಾ ಹೆದರಿಕೆಯಾಯ್ತು. ಹೀಗಾಗಿ ಜೋರಾಗಿ ಕಿರುಚುತ್ತಾ ನಾನು ಮನೆಯೊಳಗೆ ಓಡಿ ಹೋಗಿ ಪ್ರಾಣರಕ್ಷಣೆ ಮಾಡಿಕೊಂಡೆ’ ಎಂದು ಲೆಕಾಂಪ್ಟೆ ಹೇಳಿಕೊಂಡಿದ್ದಾರೆ.
ಲೆಕಾಂಪ್ಟೆ ತಮ್ಮ ಫೇಸ್‌ಬುಕ್(Facebook) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತಾನು ಹೇಗೆ ಹಾವಿನಿಂದ ಪಾರಾದೆ ಎಂಬುದನ್ನು ಅವರು ವಿವರಿಸಿದ್ದಾರೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಸಾವಿರಾರು ಜನರು ನೋಡಿದ್ದಾರೆ. ವೈರಲ್ ಹಾಗ್(Viral Hog) ಯೂಟ್ಯೂಬ್ ಚಾನೆಲ್ ನಲ್ಲಿ ಕೂಡ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: Pakistan: ಶಿಕ್ಷಕರಿಗೆ ಜೀನ್ಸ್ ಮತ್ತು ಟೀ ಶರ್ಟ್ ನಿಷೇಧಿಸಿದ ಪಾಕಿಸ್ತಾನ..!
ಲೆಕಾಂಪ್ಟೆಯವರ ಮೇಲೆ ಹಾವು ಎರಗಿದ ವಿಡಿಯೋ(Viral Video) ವೀಕ್ಷಿಸಿ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಪೊದೆಯಲ್ಲಿ ಅಡಗಿ ಕುಳಿತ್ತಿದ್ದ ಹಾವು ಏಕೆ ಅವರ ಮೇಲೆ ಹಾರಿತು ಅಂತಾ ಕೆಲವರು ತಲೆಕೆಡಿಸಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.