ನವದೆಹಲಿ: ಪಾಕಿಸ್ತಾನ(Pakistan)ದ ಫೆಡರಲ್ ಡೈರೆಕ್ಟರೇಟ್ ಆಫ್ ಎಜುಕೇಶನ್ (ಎಫ್‌ಡಿಇ) ಮಹಿಳಾ ಅಧ್ಯಾಪಕರು ಜೀನ್ಸ್ ಮತ್ತು ಬಿಗಿಯುಡುಪು ಧರಿಸದಂತೆ ಸೂಚನೆ ನೀಡಿದೆ. ಅದೇ ರೀತಿ ಪುರುಷ ಶಿಕ್ಷಕರು ಜೀನ್ಸ್ ಮತ್ತು ಟೀ ಶರ್ಟ್ ಧರಿಸುವುದನ್ನು ಬ್ಯಾನ್ ಮಾಡಲಾಗಿದೆ.
ಈ ಸಂಬಂಧ ಶಾಲಾ ಮತ್ತು ಕಾಲೇಜುಗಳ ಪ್ರಾಂಶುಪಾಲರಿಗೆ ಸೋಮವಾರ ಶೈಕ್ಷಣಿಕ ನಿರ್ದೇಶಕರು ಪತ್ರ(Dress Code)ವನ್ನು ಕಳುಹಿಸಿದ್ದಾರೆ ಎಂದು ಡಾನ್ ವರದಿ ಮಾಡಿದೆ. ಈ ಪತ್ರದಲ್ಲಿ ಪ್ರತಿ ಸಿಬ್ಬಂದಿಯ ದೈಹಿಕ ನೋಟ, ವೈಯಕ್ತಿಕ ಸ್ವಚ್ಛತೆಯನ್ನು ಸರಿಯಾದ ರೀತಿಯಲ್ಲಿ ಪಾಲಿಸುವಂತೆ ತಿಳಿಸಲಾಗಿದೆ. ನಿಯಮಿತವಾಗಿ ಕ್ಷೌರ, ಗಡ್ಡವನ್ನು ಕತ್ತರಿಸುವುದು, ಉಗುರು ಕತ್ತರಿಸಿರುವುದು, ಸ್ನಾನ ಮತ್ತು ಡಿಯೋಡರೆಂಟ್ ಅಥವಾ ಸುಗಂಧ ದ್ರವ್ಯದ ಬಳಕೆ ಮುಂತಾದವುಗಳ ಬಗ್ಗೆ ಪತ್ರದಲ್ಲಿ ವಿವರಿಸಲಾಗಿದೆ. ಶಾಲಾ-ಕಾಲೇಜು ಸಿಬ್ಬಂದಿ ನಿಯಮಗಳನ್ನು ಪಾಲಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಪ್ರಾಂಶುಪಾಲರಿಗೆ ಸೂಚಿಸಿದೆ.
ಇದನ್ನೂ ಓದಿ: Taliban : ಶಾಲಾ-ಕಾಲೇಜಿಗೆ ತೆರಳುವ ಹುಡುಗಿಯರಿಗಾಗಿ 7 ಕಠಿಣ ನಿಯಮ ಜಾರಿಗೊಳಿಸಿದ ತಾಲಿಬಾನ್
ಇಂತಹ ನಿಯಮಗಳನ್ನು ಪಾಕಿಸ್ತಾನ(Pakistan)ದ ಶಿಕ್ಷಕರು ತಮ್ಮ ಕಚೇರಿ ಸಮಯದಲ್ಲಿ, ಕ್ಯಾಂಪಸ್‌ನಲ್ಲಿ, ಅಧಿಕೃತ ಕೂಟಗಳು ಮತ್ತು ಸಭೆಗಳ ಸಮಯದಲ್ಲಿ ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ತಿಳಿಸಲಾಗಿದೆ. ಎಲ್ಲಾ ಬೋಧನಾ ಸಿಬ್ಬಂದಿ ತರಗತಿಯಲ್ಲಿ ಬೋಧನಾ ನಿಲುವಂಗಿ ಮತ್ತು ಪ್ರಯೋಗಾಲಯಗಳಲ್ಲಿ ಲ್ಯಾಬ್ ಕೋಟುಗಳನ್ನು ಧರಿಸುವಂತೆ ಪತ್ರವು ಶಿಫಾರಸು ಮಾಡಿದೆ. ಇದರ ಜೊತೆಗೆ ಗೇಟ್‌ಕೀಪರ್‌ಗಳು ಮತ್ತು ಸಹಾಯಕ ಸಿಬ್ಬಂದಿಗೆ ಸಮವಸ್ತ್ರವನ್ನು ಖಾತ್ರಿಪಡಿಸಿಕೊಳ್ಳಲು ಶಾಲೆ ಮತ್ತು ಕಾಲೇಜುಗಳಿಗೆ ನಿರ್ದೇಶಿಲಾಗಿದೆ. ಅಧಿಕೃತ ಕೂಟಗಳ ಸಂದರ್ಭದಲ್ಲಿ ಮಹಿಳಾ ಶಿಕ್ಷಕಿಯರು ಫ್ಯಾನ್ಸಿ ಮತ್ತು ಪಾರ್ಟಿ ಉಡುಪುಗಳನ್ನು ಧರಿಸದಂತೆ ಸೂಚಿಸಲಾಗಿದೆ.
ಮಹಿಳಾ ಶಿಕ್ಷಕಿಯರ ಉಡುಗೆ ಕೋಡ್ ಹೀಗಿದೆ
ಪತ್ರದ ಪ್ರಕಾರ ಮಹಿಳಾ ಶಿಕ್ಷಕರು(Teachers) ಜೀನ್ಸ್ ಅಥವಾ ಬಿಗಿಯುಡುಪು ಧರಿಸುವಂತಿಲ್ಲ. ಅವರು ಸರಳ ಮತ್ತು ಯೋಗ್ಯವಾದ ಶಾಲ್ವಾರ್ ಕಮೀಜ್, ಪ್ಯಾಂಟ್, ದುಪಟ್ಟಾ/ಶಾಲು ಇರುವ ಶರ್ಟ್ ಧರಿಸಬಹುದು. ಪರ್ದಾವನ್ನು ಗಮನಿಸುವ ಮಹಿಳೆಯರಿಗೆ ಸ್ಕಾರ್ಫ್/ಹಿಜಾಬ್ ಧರಿಸಲು ಅವಕಾಶ ನೀಡಲಾಗುವುದು. ಚಳಿಗಾಲದಲ್ಲಿ ಮಹಿಳಾ ಶಿಕ್ಷಕರು ಕೋಟ್, ಬ್ಲೇಜರ್, ಸ್ವೆಟರ್, ಜರ್ಸಿ, ಕಾರ್ಡಿಗನ್ಸ್ ಮತ್ತು ಯೋಗ್ಯ ಬಣ್ಣಗಳ ಮತ್ತು ವಿನ್ಯಾಸಗಳ ಶಾಲುಗಳನ್ನು ಧರಿಸಬಹುದು.ಇದಲ್ಲದೆ ಮಹಿಳಾ ಶಿಕ್ಷಕರು ಔಪಚಾರಿಕ ಶೂಗಳನ್ನು ಅಥವಾ ಸ್ನೀಕರ್ಸ್ ಮತ್ತು ಸ್ಯಾಂಡಲ್‌ಗಳನ್ನು ಧರಿಸಬಹುದು. ಆದರೆ ಚಪ್ಪಲಿಗಳನ್ನು ಧರಿಸುವಂತಿಲ್ಲವೆಂದು ಹೇಳಲಾಗಿದೆ.
ಇದನ್ನೂ ಓದಿ: Afghanistan: ತಾಲಿಬಾನ್ ಆಳ್ವಿಕೆಯಲ್ಲಿ ಅಫ್ಘಾನಿಸ್ತಾನ ಹೇಗಿರುತ್ತೆ? ತಾಲಿಬಾನ್‌ನ ನಾಯಕ ಹೇಳಿದ್ದೇನು?
ಪುರುಷ ಶಿಕ್ಷಕರ ಉಡುಗೆ ಕೋಡ್ ಹೀಗಿದೆ
ಫೆಡರಲ್ ಶಿಕ್ಷಣ ನಿರ್ದೇಶನಾಲಯದ (ಎಫ್‌ಡಿಇ) ಪತ್ರವು ಪುರುಷ ಶಿಕ್ಷಕರು ಶಲ್ವಾರ್ ಕಮೀಜ್ ಅನ್ನು ಸೊಂಟದ ಕೋಟ್ ಅಥವಾ ಪ್ಯಾಂಟ್ ಮತ್ತು ಟೈ ಹೊಂದಿರುವ ಶರ್ಟ್ ಧರಿಸುವುದು ಕಡ್ಡಾಯ ಎಂದು ಹೇಳಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.