ಬೀಜಿಂಗ್: ಕರೋನಾವೈರಸ್ ಸಾಂಕ್ರಾಮಿಕ ರೋಗದಿಂದ ಚೀನಾ ಮತ್ತೊಮ್ಮೆ ವಿಶ್ವ ಆರೋಗ್ಯ ಸಂಸ್ಥೆ (World Health Organization)  ರಕ್ಷಣೆಗೆ ಒಳಪಟ್ಟಿದೆ. ಡಬ್ಲ್ಯುಎಚ್‌ಒನಿಂದ ಯುಎಸ್ ಬೇರ್ಪಡುತ್ತಿದೆ ಎಂದು ಚೀನಾ ಟೀಕಿಸಿದ್ದು ಮತ್ತು ಕರೋನಾವೈರಸ್  ಕೋವಿಡ್ -19 (COVID-19) ವಿರುದ್ಧ ಹೋರಾಡುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಯುಎಸ್ ಏಕಪಕ್ಷೀಯವಾಗಿ ಹಿಂದೆ ಸರಿಯುತ್ತಿರುವುದು ಅದರ ಏಕಪಕ್ಷೀಯ ನಡೆಗೆ ಮತ್ತೊಂದು ಉದಾಹರಣೆಯಾಗಿದೆ ಎಂದು ಹೇಳಿದರು. ಈ ಮೊದಲು ಸಹ ಅಮೆರಿಕ ಈ ರೀತಿಯ ಅನೇಕ ಒಪ್ಪಂದಗಳು ಮತ್ತು ಸಂಸ್ಥೆಗಳಿಂದ ಬೇರ್ಪಟ್ಟಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಸಾರ್ವಜನಿಕ ಆರೋಗ್ಯ ಭದ್ರತಾ ಕ್ಷೇತ್ರದಲ್ಲಿ ಅತ್ಯಂತ ಅಧಿಕೃತ ಮತ್ತು ವೃತ್ತಿಪರ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ ಎಂದು ಅವರು ದೈನಂದಿನ ಬ್ರೀಫಿಂಗ್‌ನಲ್ಲಿ  ವಿಶ್ವ ಆರೋಗ್ಯ ಸಂಸ್ಥೆಯನ್ನು ಶ್ಲಾಘಿಸಿದರು.


ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುವುದರಿಂದ ಎದುರಾಗುವ ಬಹುದೊಡ್ಡ ಸವಾಲು


ಇದೇ ವೇಳೆ ಮತ್ತೊಮ್ಮೆ ವಿಶ್ವ ಆರೋಗ್ಯ ಸಂಸ್ಥೆಯನ್ನು ಸಮರ್ಥಿಸಿಕೊಂಡ ಚೀನಾ ಅದರ ಕಾರ್ಯಚಟುವಟಿಕೆಯನ್ನು ಶ್ಲಾಘಿಸಿದ ರೀತಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೊದಲನೆಯದಾಗಿ ಮುಂದಿನ ವಾರ ಚೀನಾವನ್ನು ತಲುಪುವ WHO ತಂಡವನ್ನು ಮೆಚ್ಚಿಸಲು ಈ ವ್ಯಾಯಾಮವೇ? ಕರೋನಾ ಸಾಂಕ್ರಾಮಿಕ ರೋಗದ ತನಿಖೆಗಾಗಿ ಡಬ್ಲ್ಯುಎಚ್‌ಒ ತಂಡ ಮುಂದಿನ ವಾರ ವುಹಾನ್‌ಗೆ ಪ್ರಯಾಣಿಸಲಿದೆ. ತಂಡವು ತನ್ನ ತೊಂದರೆಗಳನ್ನು ಹೆಚ್ಚಿಸುವಂತಹದನ್ನು ಹೇಳಲು ಚೀನಾ ಬಯಸುವುದಿಲ್ಲ ಎಂಬುದು ಸಮಂಜಸವಾಗಿದೆ, ಬಹುಶಃ ಅದು ಡಬ್ಲ್ಯುಎಚ್‌ಒ (WHO)  ಅನ್ನು ಅಭಿನಂದನೆಗಳ ಜಾಲದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.


ಚೀನಾದಡಿಯಲ್ಲಿ ಕೆಲಸ ಮಾಡುತ್ತಿರುವ ಆರೋಪ:
ವಿಶೇಷವೆಂದರೆ ಜುಲೈ 6 ರಿಂದ ಯುಎಸ್ ವಿಶ್ವ ಆರೋಗ್ಯ ಸಂಸ್ಥೆಯಿಂದ ತನ್ನನ್ನು ಪ್ರತ್ಯೇಕಿಸಿಕೊಂಡಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ನಿರ್ಧಾರವನ್ನು ಡಬ್ಲ್ಯುಎಚ್‌ಒಗೆ ಕಳುಹಿಸಿದ್ದಾರೆ. ಕರೋನಾವೈರಸ್‌ ಹರಡಲು ಚೀನಾ ಕಾರಣ ಮತ್ತು ಚೀನಾಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಶ್ರೀರಕ್ಷೆ ಇದೇ ಎಂದು ಟ್ರಂಪ್ ಸರ್ಕಾರ ಮೊದಲಿನಿಂದಲೂ ಚೀನಾ ಮತ್ತು ಡಬ್ಲ್ಯುಎಚ್‌ಒಗಳನ್ನು ಗುರಿಯಾಗಿಸಿಕೊಂಡಿದೆ. ಡಬ್ಲ್ಯುಎಚ್‌ಒ ಚೀನಾ ನೇತೃತ್ವದಲ್ಲಿ ಕೆಲಸ ನಡೆಯುತ್ತಿದೆ ಎಂದು  ಡೊನಾಲ್ಡ್ ಟ್ರಂಪ್ (Donald Trump)  ಆರೋಪಿಸಿದ್ದರು.  


ಇದು COVOD-19 ಅಲ್ಲ ಚೀನಾದಿಂದ ಬಂದ ಪ್ಲೇಗ್: ಯುಎಸ್​ ಅಧ್ಯಕ್ಷ ಟ್ರಂಪ್​ ಹೊಸ ವರಸೆ


ಸ್ವದೇಶದಲ್ಲಿಯೇ ಟ್ರಂಪ್ ನಿರ್ಧಾರಕ್ಕೆ ವಿರೋಧ:
ಟ್ರಂಪ್ ಸರ್ಕಾರ ಡಬ್ಲ್ಯುಎಚ್‌ಒನಿಂದ ತನ್ನ ಸದಸ್ಯತ್ವವನ್ನು ಹಿಂಪಡೆಯಲು ಸಂಬಂಧಿಸಿದ ಪತ್ರವನ್ನು ಕಳುಹಿಸಿದೆ. ಆದಾಗ್ಯೂ 1984ರಲ್ಲಿ ನಿಗದಿಪಡಿಸಿದ ನಿಯಮಗಳ ಪ್ರಕಾರ, ಯಾವುದೇ ದೇಶವನ್ನು WHO ಯಿಂದ ಹೊರಹಾಕಲಾಗುತ್ತದೆ. ಇದರ ಹೊರತಾಗಿ ಅಮೆರಿಕ ಡಬ್ಲ್ಯುಎಚ್‌ಒನ ಎಲ್ಲಾ ಬಾಕಿಗಳನ್ನು ಮರುಪಾವತಿಸಬೇಕಾಗಿದೆ. ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಅವರ ದೇಶದಲ್ಲಿಯೇ ವಿರೋಧಿಸಲಾಗುತ್ತಿದೆ. ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್ ಅವರು ಚುನಾಯಿತರಾದರೆ ತಕ್ಷಣ ಈ ನಿರ್ಧಾರವನ್ನು ರದ್ದುಗೊಳಿಸುವುದಾಗಿ ಹೇಳಿದ್ದಾರೆ.