ಲಂಡನ್: Corona New Variant - ಭಾರತದಲ್ಲಿ ಅಪಾರ ಹಾನಿ ಸೃಷ್ಟಿಸಿರುವ ಡೆಲ್ಟಾ ರೂಪಾಂತರಿ ವೈರಸ್ ಇದೀಗ ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಹಲವು ದೇಶಗಳಲ್ಲಿ ಡೆಲ್ಟಾ ವೈರಸ್ ಪ್ರಕರಣಗಳು ಪತ್ತೆಯಾಗುತ್ತಿವೆ. ಇನ್ನೊಂದೆಡೆ ಈ ಡೆಲ್ಟಾ ವೇರಿಯಂಟ್ ರೂಪಾಂತರಿಯಾಗಿ ಡೆಲ್ಟಾ ಪ್ಲಸ್ ಮೂಲಕ ಮತ್ತಷ್ಟು ಆತಂಕ ಹೆಚ್ಚಿಸಿದೆ. ಏತನ್ಮಧ್ಯೆ ಮತ್ತೊಂದು ಕೊರೊನಾ ರೂಪಾಂತರಿ ಮೆಲ್ಲಗೆ ಕದತಟ್ಟಲಾರಂಭಿಸಿದೆ. ಕೊರೋನಾದ ಈ ವೇರಿಯಂಟ್ 'ಲ್ಯಾಂಬ್ಡಾ ವೇರಿಯಂಟ್ ಆಗಿದೆ. ಈ ವೇರಿಯಂಟ್ ಅನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಸಂಘಟನೆಗಳು ಇದನ್ನು 'ವೇರಿಯಂಟ್ ಆಫ್ ಕನ್ಸರ್ನ್' ಅಡಿ ವರ್ಗೀಕರಿಸಿವೆ.


COMMERCIAL BREAK
SCROLL TO CONTINUE READING

ತುಂಬಾ ವೇಗವಾಗಿ ತನ್ನ ಪಾದಚಾಚುತ್ತಿದೆ
ವಿಶ್ವ ಆರೋಗ್ಯ ಸಂಘಟನೆ (WHO) ಈಗಾಗಲೇ 'ಲ್ಯಾಂಬ್ಡಾ ವೇರಿಯಂಟ್' ಅನ್ನು 'ವೇರಿಯಂಟ್ ಆಫ್ ಕನ್ಸರ್ನ್'  (Variant Of Concern) ಅಡಿ ಪಟ್ಟಿ ಮಾಡಿದೆ. ಜೂನ್ 15 ರಂದು ಹೇಳಿಕೆ ಬಿಡುಗಡೆ ಮಾಡಿದ್ದ ವಿಶ್ವ ಆರೋಗ್ಯ ಸಂಘಟನೆ, ವಿಶ್ವದ ಸುಮಾರು 29 ದೇಶಗಳಲ್ಲಿ ಲ್ಯಾಂಬ್ಡಾ ವೇರಿಯಂಟ್ ನಮೂನೆಗಳು ದೊರೆತಿವೆ ಎಂದು ಹೇಳಿತ್ತು. ಇದು ದಕ್ಷಿಣ ಅಮೇರಿಕಾದಿಂದ (South America) ತನ್ನ ಪಯಣ ಆರಂಭಿಸಿದೆ ಎನ್ನಲಾಗಿದೆ. ಇದೀಗ ದಕ್ಷಿಣ ಬ್ರೆಜಿಲ್ (Southern Brezil) ಸೇರಿದಂತೆ ಬ್ರಿಟನ್ (UK)ನಲ್ಲಿಯೂ ಕೂಡ ಲ್ಯಾಂಬ್ಡಾ ವೇರಿಯಂಟ್ ಪ್ರಕರಣಗಳು ಪತ್ತೆಯಾಗಿವೆ. ನ್ಯೂಸ್ ಮೆಡಿಕಲ್ ಲೈಫ್ ಸೈನ್ಸಸ್ (News Medical Life Sciences) ನಲ್ಲಿ ಪ್ರಕಟಗೊಂಡ ಇತ್ತೀಚಿನ ವರದಿಯ ಪ್ರಕಾರ, ಕೊರೊನಾ ವೈರಸ್ ನ ಈ ರೂಪಾಂತರಿ ಬ್ರಿಟನ್ ನಲ್ಲಿ ವೇಗವಾಗಿ ತನ್ನ ಪಾದ ಚಾಚುತ್ತಿದೆ ಎನ್ನಲಾಗಿದೆ. ಹಲವು ವರದಿಗಳ ಜೊತೆಗೆ ಪಬ್ಲಿಕ್ ಹೆಲ್ತ್  ಇಂಗ್ಲೆಂಡ್ ಕೂಡ ಈ ವೇರಿಯಂಟ್ ಕುರಿತು ಆತಂಕ ವ್ಯಕ್ತಪಡಿಸಿವೆ.


ಇದನ್ನೂ ಓದಿ- Covishield Vaccine Updates: ಎರಡು ಪ್ರಮಾಣಗಳ ನಡುವಿನ ಅಂತರ 10 ತಿಂಗಳು ಇದ್ದರೆ ಮತ್ತಷ್ಟು ಉತ್ತಮ ಎಂದ ಅಧ್ಯಯನ


ಈಗಾಗಲೇ 29 ದೇಶಗಳಲ್ಲಿ ಹರಡಿದೆ Lambda Variant
ಬ್ರಿಟನ್ ನಲ್ಲಿ ಆಗಸ್ಟ್ 2020ರಲ್ಲಿ ಎಲ್ಲಕ್ಕಿಂತ ಮೊದಲ ಬಾರಿಗೆ ಲ್ಯಾಂಬ್ಡಾ ವೇರಿಯಂಟ್ ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲಿಂದ ಇದುವರೆಗೆ ಸುಮಾರು 29 ದೇಶಗಳಿಗೆ ಈ ವೈರಸ್ ಸೋಂಕು ಹರಡಿದೆ. ಕೊರೊನಾ ವೈರಸ್ ನಾ ಈ ವೇರಿಯಂಟ್ ನ ಸ್ಪೈಕ್ ಪ್ರೋಟೀನ್ ನಲ್ಲಿ ಹಲವು ಮ್ಯೂಟೆಶನ್ ಗಳನ್ನು ಗಮನಿಸಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದರಿಂದ ಈ ವೈರಸ್ ನ ಟ್ರಾನ್ಸ್ಮಿಸಿಬಿಲಿಟಿ ಹೆಚ್ಚಾಗಿರುವುದು ಸಿದ್ಧವಾಗುತ್ತದೆ ಎಂದು ಅವರು ಹೇಳಿದ್ದಾರೆ. ಫೆಬ್ರವರಿ 23 ರಿಂದ ಜೂನ್ 7ರವರಗೆ ಲ್ಯಾಂಬ್ಡಾ ವೇರಿಯಂಟ್ ನ ಒಟ್ಟು 6 ಪ್ರಕರಣಗಳು ದೊರೆತಿರುವುದಾಗಿ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ಸಂಘಟನೆ  ಹೇಳಿದೆ. ಇದರ ಜೊತೆಗೆ ಸಂಘಟನೆ ಇದರ ಮೇಲೆ ನಿರಂತರವಾಗಿ ಸಂಶೋಧನೆ ನಡೆಸುತ್ತಿದೆ. 


ಇದನ್ನೂ ಓದಿ-Research On Covid-19: ಕೊರೊನಾ ವೈರಸ್ ಹೊಸದಲ್ವಂತೆ ! ಅಧ್ಯಯನದಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ


ಲ್ಯಾಂಬ್ಡಾ ವೇರಿಯಂಟ್ ಲಕ್ಷಣಗಳೇನು (Smyptoms Of Lambda Variant)
ಬ್ರಿಟನ್ ನ ರಾಷ್ಟ್ರೀಯ ಆರೋಗ್ಯ ಸೇವೆ ಲ್ಯಾಂಬ್ಡಾ ವೇರಿಯಂಟ್ ನ ಲಕ್ಷಣಗಳ ಪಟ್ಟಿ ಜಾರಿಗೊಳಿಸಿದೆ. ಈ ಪಟ್ಟಿಯ ಪ್ರಕಾರ, ಇದರಲ್ಲಿ ಮೊದಲು ರೋಗಿಗೆ ಜ್ವರ ಬರುತ್ತದೆ, ಸತತ ಕೆಮ್ಮು ಸತಾಯಿಸುತ್ತದೆ ಹಾಗೂ ನಾಲಿಗೆಯ ರುಚಿ, ವಾಸನೆ ಹೊರಟುಹೋಗುತ್ತದೆ. ತಜ್ಞರು ಹೇಳುವ ಪ್ರಕಾರ ಈ ಸೋಂಕಿಗೆ ಗುರಿಯಾದ ವ್ಯಕ್ತಿಯಲ್ಲಿ ಕನಿಷ್ಠ ಒಂದು ಲಕ್ಷಣವಾದರೂ ಇದ್ದೆ ಇರುತ್ತದೆ ಎನ್ನುತ್ತಾರೆ. ಸದ್ಯ ವ್ಯಾಕ್ಸಿನ್ ನ ಎರಡು ಪ್ರಮಾಣಗಳು ಈ ವೇರಿಯಂಟ್ ಮೇಲೆ ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ-Covid-19 Third Wave In India - ಬರುವ ಅಕ್ಟೋಬರ್ ನಲ್ಲಿ ದೇಶಕ್ಕೆ ಅಪ್ಪಳಿಸಲಿದೆ ಕೊವಿಡ್-19 ಮೂರನೇ ಅಲೆ! ವಿಶ್ವಾದ್ಯಂತದ ಸುಮಾರು 40 ತಜ್ಞರು ಹೇಳಿದ್ದೇನು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.