ಲಾಸ್ ಏಂಜಲೀಸ್ : ಒಂದು ಮಾತಿದೆ . ಅದೃಷ್ಟ ಅನ್ನೋದು ಒಂದೇ ಸಲ ನಮ್ಮ ಮುಂದೆ ಬರುವುದಂತೆ, ಆಗ ಅದನ್ನು ಬರಮಾಡಿಕೊಳ್ಳದಿದ್ದರೆ ಹಾಗೇ ಮುಂದೆ ಸಾಗುತ್ತದೆಯಂತೆ. ಅಮೆರಿಕದ ಕ್ಯಾಲಿಫೋರ್ನಿಯಾದ (California) ಮಹಿಳೆಯೊಂದಿಗೆ ಇಂಥದ್ದೇ ಘಟನೆ ನಡೆದಿದೆ.  ಮಹಿಳೆ ಲಾಟರಿವೊಂದರರಲ್ಲಿ (Lottery)  26 ಮಿಲಿಯನ್ ಡಾಲರ್ ಅಂದರೆ ಬರೋಬ್ಬರಿ 190 ಕೋಟಿ ರೂಪಾಯಿ ಗೆದ್ದಿದ್ದಾರೆ. ಆದರೆ, ಗೆದ್ದ ಖುಷಿ ಅಷ್ಟೇ ಇದರಲ್ಲಿ ಒಂದು ಪೈಸೆ ಕೂಡಾ ಮಹಿಳೆ ಕೈಸೇರಲೇ ಇಲ್ಲ. 


COMMERCIAL BREAK
SCROLL TO CONTINUE READING

ಟಿಕೆಟ್ ಇಲ್ಲದೆ ಹಣ ಪಡೆಯಲು ಬಂದ ಮಹಿಳೆ : 
ವರದಿಯ ಪ್ರಕಾರ, ಮಹಿಳೆ ಲಾಟರಿ (Lottery) ಟಿಕೆಟ್ ಖರೀದಿಸಿದ ನಂತರ ಟಿಕೆಟ್ ಅನ್ನು ಪ್ಯಾಂಟಿನ ಜೇಬಿನಲ್ಲಿ ಇರಿಸಿದ್ದಾರೆ. ನಂತರ ಮರೆತು ಪ್ಯಾಟ್ ಅನ್ನು ಒಗೆಯಲು ಹಾಕಿದ್ದಾರೆ. ಆದರೆ, ಮಹಿಳೆ ತನ್ನ ಟಿಕೆಟ್ ನಂಬರ್ ಅನ್ನು ಬರೆದಿಟ್ಟುಕೊಂಡಿದ್ದರು. ಹಾಗಾಗಿ ಲಾಟರಿಯ ಫಲಿತಾಂಶ ಬಂದಾಗ  ತಾನು ಲಾಟರಿ ಗೆದ್ದಿರುವುದು ಖಾತ್ರಿಯಾಗುತ್ತಿದ್ದಂತೆ ಮಹಿಳೆ ಹಣ ಪಡೆಯಲು ತೆರಳಿದ್ದಾರೆ. ಆದರೆ ಮಹಿಳೆಯ ಬಳಿ ಲಾಟರಿ ಇರಲಿಲ್ಲ. ಇನ್ನು ಲಾಟರಿ ಅಂಗಡಿಯಲ್ಲಿದ್ದ ಸಿಸಿಟಿವಿ (CCTV) ಫೂಟೇಜ್ ನಲ್ಲೂ ಮಹಿಳೆ ಲಾಟರಿ ಖರೀದಿಸುತ್ತಿರುವ ದೃಶ್ಯ ಕೂಡಾ ಸೆರೆಯಾಗಿದೆ. ಈ ವಿಡಿಯೋ ತುಣುಕನ್ನು ಅಂಗಡಿಯವರು ಕ್ಯಾಲಿಫೂರ್ನಿಯಾದ ಲಾಟರಿ ಅಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ, ಮಹಿಳೆ ಲಾಟರಿ ಗೆದ್ದಿರುವುದನ್ನು ಸಾಬೀತುಪಡಿಸಲು ಈ ವಿಡಿಯೋ (Video) ತುಣುಕು ಕೂಡಾ ನೆರವಿಗೆ ಬಂದಿಲ್ಲ. 


ಇದನ್ನೂ ಓದಿ : Miss Universe 2020ರ ಕಿರೀಟ ಮುಡಿಗೇರಿಸಿಕೊಂಡ ಮೆಕ್ಸಿಕೊದ ಆಂಡ್ರಿಯಾ ಮೆಜಾ , ಟಾಪ್ -5 ರಲ್ಲಿ ಸ್ಥಾನ ಪಡೆದ Adeline Castelino


ತನಿಖೆಗೆ ಅರ್ಜಿ ಸಲ್ಲಿಸಬಹುದು : 
ಲಾಟರಿ ಅಧಿಕಾರಿಗಳ ಪ್ರಕಾರ ಮಹಿಳೆ ಲಾಟರಿ ಹಣ ಪಡೆಯಬೇಕಾದರೆ ಲಾಟರಿ ಟಿಕೆಟಿನ ಒಂದು ತುಣುಕನ್ನಾದರೂ ತೋರಿಸಬೇಕು. ಅಂದರೆ ಆ ಲಾಟರಿಯ ಒಂದೆರಡು ನಂಬರ್ ಗಳಾದರೂ ಕಾಣುವಂತಿರಬೇಕು.  ಆದರೂ ಮಹಿಳೆ ಈ ಬಗ್ಗೆ ತನಿಖೆ ನಡೆಸುವಂತೆ ಅರ್ಜಿ ಸಲ್ಲಿಸುವ ಹಕ್ಕನೂ ಹೊಂದಿದ್ದಾರೆ.   


ಟಿಕೆಟ್ ಮಾರಾಟ ಮಾಡಿರುವ ಅಂಗಡಿಗೆ 130,000 ಡಾಲರ್ ಬೋನಸ್ (bonus) ಬಂದಿದೆ. ಆದರೆ ಬಹುಮಾನದ ಹಣಕ್ಕೆ ಯಾವುದೇ ಹಕ್ಕುದಾರ ಇಲ್ಲದೇ ಇರುವ ಕಾರಣ, ಈ ಹಣವನ್ನು ಕ್ಯಾಲೊಪೋರ್ನಿಯಾದ ಶಾಲೆಗಳಿಗೆ ನೀಡಲಾಗುವುದು. 


ಇದನ್ನೂ ಓದಿ : ಕರೋನಾ ಲಸಿಕೆ ಹಾಕಿಸಿಕೊಂಡರೆ 7 ಕೋಟಿ ರೂ ಗೆಲ್ಲುವ ಅವಕಾಶ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.