Miss Universe 2020ರ ಕಿರೀಟ ಮುಡಿಗೇರಿಸಿಕೊಂಡ ಮೆಕ್ಸಿಕೊದ ಆಂಡ್ರಿಯಾ ಮೆಜಾ , ಟಾಪ್ -5 ರಲ್ಲಿ ಸ್ಥಾನ ಪಡೆದ Adeline Castelino

ಅಂತಿಮ ಸುತ್ತಿನಲ್ಲಿ, ಆಂಡ್ರಿಯಾ ಮೇಜಾ ಅವರಿಗೆ ನೀವು ದೇಶದ ಪ್ರಮುಖ ನಾಯಕರಾಗಿದ್ದರೆ  ಕರೋನಾವೈರಸ್ ಸಾಂಕ್ರಾಮಿಕ ರೋಗವನ್ನು ಹೇಗೆ ಎದುರಿಸುತ್ತಿದ್ದಿರಿ ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಅಂತಹ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ಸರಿಯಾದ ಮಾರ್ಗವಿಲ್ಲ ಎಂದು ನಾನು ನಂಬುತ್ತೇನೆ. ಹೇಗಾದರೂ, ಪರಿಸ್ಥಿತಿ ಹದಗೆಡುವ ಮೊದಲು ನಾನು ಲಾಕ್‌ಡೌನ್‌ ಹಾಕುತ್ತಿದ್ದೆ ಎಂದು ಆಂಡ್ರಿಯಾ ಹೇಳಿದರು.

Written by - Yashaswini V | Last Updated : May 17, 2021, 12:59 PM IST
  • ಫ್ಲೋರಿಡಾದಲ್ಲಿ ನಡೆದ ಮಿಸ್ ಯೂನಿವರ್ಸ್ -2020
  • ಆಂಡ್ರಿಯಾ ಮೆಜಾ 2017 ರಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ
  • ಬ್ರೆಜಿಲ್‌ನ ಜೂಲಿಯಾ ಗಾಮಾ ಎರಡನೇ ಸ್ಥಾನ ಪಡೆದರು
Miss Universe 2020ರ ಕಿರೀಟ ಮುಡಿಗೇರಿಸಿಕೊಂಡ ಮೆಕ್ಸಿಕೊದ ಆಂಡ್ರಿಯಾ ಮೆಜಾ , ಟಾಪ್ -5 ರಲ್ಲಿ ಸ್ಥಾನ ಪಡೆದ Adeline Castelino title=
Miss Universe 2020 (Image courtesy: Twitter)

ಫ್ಲೋರಿಡಾ: ಮಿಸ್ ಯೂನಿವರ್ಸ್-2020ರ ಸ್ಪರ್ಧೆಯ ವಿಜೇತರನ್ನು ಘೋಷಿಸಲಾಗಿದೆ. ಮೆಕ್ಸಿಕೊದ (Mexico) ಆಂಡ್ರಿಯಾ ಮೆಜಾ (Andrea Meza) ಮಿಸ್ ಯೂನಿವರ್ಸ್ 2020  (Miss Universe 2020) ರ ವಿಜೇತರಾಗಿ ಹೊರ ಹೊಮ್ಮಿದ್ದಾರೆ. 

69 ನೇ ಮಿಸ್ ಯೂನಿವರ್ಸ್ ಸಮಾರಂಭವು ಫ್ಲೋರಿಡಾದ ಸೆಮಿನೋಲ್ ಹಾರ್ಡ್ ರಾಕ್ ಹೋಟೆಲ್‌ನಲ್ಲಿ ನಡೆಯಿತು, ಅಲ್ಲಿ ಮಾಜಿ ಮಿಸ್ ಯೂನಿವರ್ಸ್ ಜೊಜಿಬಿನಿ ಟೂಂಜಿ (Zozibini Tunzi) ಆಂಡ್ರಿಯಾ ಮೆಜಾ (Andrea Meza) ಅವರಿಗೆ ವಿಶ್ವ ಸುಂದರಿ ಕಿರೀಟಧಾರಣೆ ಮಾಡಿದರು. ಆಂಡ್ರಿಯಾ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಮೆಕ್ಸಿಕೊದ ಮೂರನೇ ಮಹಿಳೆ ಆಗಿದ್ದಾರೆ.

ಇದನ್ನೂ ಓದಿ - Corona Vaccine: ಮಕ್ಕಳಿಗೆ ಈಗಲೇ ಕರೋನಾ ಲಸಿಕೆ ಹಾಕಬೇಡಿ ಎಂದು WHO ಮನವಿ ಮಾಡಿದ್ದೇಕೆ?

ಡ್ರಿಯಾ ಸಾಫ್ಟ್‌ವೇರ್ ಎಂಜಿನಿಯರ್:
ನಮ್ಮ ಪಾಲುದಾರ ವೆಬ್‌ಸೈಟ್ WION ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಮಿಸ್ ಯೂನಿವರ್ಸ್ ಆಂಡ್ರಿಯಾ ಮೆಜಾ (Miss Universe Andrea Meza) ಮಾಡೆಲ್ ಮತ್ತು ಸಾಫ್ಟ್‌ವೇರ್ ಎಂಜಿನಿಯರ್. ಲಿಂಗ ಅಸಮಾನತೆ ಮತ್ತು ಲಿಂಗ ಹಿಂಸಾಚಾರದಂತಹ ವಿಷಯಗಳ ಬಗ್ಗೆ ಅವರು ಧ್ವನಿ ಎತ್ತಿದ್ದಾರೆ. ಆಂಡ್ರಿಯಾ ಜನಿಸಿದ್ದು ಚಿಹೋವಾ ನಗರದಲ್ಲಿ. ಅವರಿಗೆ ಇಬ್ಬರು ಸಹೋದರಿಯರಿದ್ದು, 2017 ರಲ್ಲಿ ಚಿಹೋವಾ ವಿಶ್ವವಿದ್ಯಾಲಯದಿಂದ ಸಾಫ್ಟ್‌ವೇರ್ ಎಂಜಿನಿಯರ್ ಪದವಿ ಪಡೆದರು.

ಸೌಂದರ್ಯದ ಅರ್ಥ:
ಸ್ಪರ್ಧೆಯ ಅಂತಿಮ ಇಬ್ಬರು ಸ್ಪರ್ಧಿಗಳು ಬ್ರೆಜಿಲ್‌ನ ಜೂಲಿಯಾ ಗಾಮಾ ಮತ್ತು ಮೆಕ್ಸಿಕೊದ ಆಂಡ್ರಿಯಾ ಮೆಜಾ. ಅದೇ ಸಮಯದಲ್ಲಿ, ಪೆರುವಿನ ಜಾನಿಕ್ ಮ್ಯಾಸೆಟಾ ಎರಡನೇ ರನ್ನರ್ ಅಪ್ ಆಗಿದ್ದು, ಭಾರತದ 22 ವರ್ಷದ ಅಡೆಲಿನ್ ಕ್ಯಾಸ್ಟೆಲಿನೊ (Adeline Castelino) ಟಾಪ್ 5ರಲ್ಲಿ ಸ್ಥಾನ ಪಡೆದಿದ್ದಾರೆ. ವಿಜಯದ ನಂತರ ಮಾತನಾಡಿದ, ಆಂಡ್ರಿಯಾ ಮೆಜಾ ಅವರು ಇಂದಿನ ಕಾಲದಲ್ಲಿ ಸೌಂದರ್ಯ ಎಂದರೆ ಕೇವಲ ನೋಟ, ಆದರೆ ನನಗೆ ಸುಂದರವಾಗಿರುವುದು ಎಂದರೆ ಹೃದಯದಿಂದ ಸುಂದರವಾಗಿರುವುದು ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ - ಭಾರತೀಯ ಹೊಸ ರೂಪಾಂತರಿ ತಳಿ ನಮ್ಮ ಪ್ರಗತಿಗೆ ಗಂಭೀರ ಅಡ್ಡಿ ಉಂಟುಮಾಡಬಹುದು-ಬೋರಿಸ್ ಜಾನ್ಸನ್

ಈ ಉತ್ತರದೊಂದಿಗೆ ಗೆಲುವು ಪ್ರಾಪ್ತಿ:
ಅಂತಿಮ ಸುತ್ತಿನಲ್ಲಿ, ಆಂಡ್ರಿಯಾ ಅವರು ದೇಶದ ನಾಯಕರಾಗಿದ್ದರೆ ಕರೋನಾ ವೈರಸ್ (Coronavirus) ಸಾಂಕ್ರಾಮಿಕ ರೋಗವನ್ನು ಹೇಗೆ ಎದುರಿಸುತ್ತಿದ್ದರು ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಆಂಡ್ರಿಯಾ, 'ಇಂತಹ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ಸರಿಯಾದ ಮಾರ್ಗವಿಲ್ಲ ಎಂದು ನಾನು ನಂಬುತ್ತೇನೆ. ಹೇಗಾದರೂ, ಪರಿಸ್ಥಿತಿ ಹದಗೆಡುವ ಮೊದಲು ನಾನು ಲಾಕ್‌ಡೌನ್‌ ಹಾಕುತ್ತಿದ್ದೆ. ಜನರ ಜೀವನವು ಈ ರೀತಿ ಚೂರುಚೂರಾಗುವುದನ್ನು ನಾವು ನೋಡಲಾಗುವುದಿಲ್ಲ. ಅದಕ್ಕಾಗಿ ನಾನು ಪ್ರಾಥಮಿಕ ಹಂತದಲ್ಲಿಯೇ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದೆ' ಎಂದು ಹೇಳಿದ್ದಾರೆ. ಜಡ್ಜ್ ಗಳಿಗೆ ಆಂಡ್ರಿಯಾ ಅವರ ಈ ಉತ್ತರ ಮನಸ್ಸನ್ನು ಮುಟ್ಟಿತು ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News