ನವದೆಹಲಿ: ಕರೋನವೈರಸ್ (Coronavirus) ಹಾವಳಿ ಯುರೋಪಿನ ಇಟಲಿಯಲ್ಲಿ ಅತ್ಯಧಿಕ ಪರಿಣಾಮವನ್ನು ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಯುರೋಪ್ ಖಂಡದಲ್ಲಿ ಇಟಲಿಯಲ್ಲಿ ಮೊದಲ ಬಾರಿಗೆ ಲಾಕ್‌ಡೌನ್ (Lockdown)  ಜಾರಿಗೊಳಿಸಲಾಯಿತು. ಸಾವಿರಾರು ಜನರ ಮರಣದ ನಂತರ, ಅಲ್ಲಿನ ಜನರು ನಿರಾಶೆಗೊಳ್ಳುವುದು ಸಹಜ. ಕೆಲವರು ತಮ್ಮವರನ್ನು ಕಳೆದುಕೊಂಡು ಒಬ್ಬಂಟಿಯಾಗಿ ವಾಸಿಸಬೇಕಾದ ಅನಿವಾರ್ಯತೆ ಎದುರಾದಾಗ ಇಂತಹ ಹಣವಿದ್ದು ಎಂದು ಪ್ರಯೋಜನ ಎಂಬ ಹತಾಶೆ ಮೂಡುವುದು ಸಹಜವೇ. ಏತನ್ಮಧ್ಯೆ, ಕಳೆದ ಕೆಲವು ದಿನಗಳಿಂದ ಇಂತಹ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಟಲಿ(Italy)ಯ ಜನರು ಹತಾಶೆಯಿಂದ ತಮ್ಮ ಹಣವನ್ನು ಬೀದಿಗಳಲ್ಲಿ, ಎಸೆಯಲು ಪ್ರಾರಂಭಿಸಿದ್ದಾರೆ ಎಂಬ ಸಂದೇಶವೂ ರವಾನೆಯಾಗುತ್ತಿದೆ. 


ವಿಶ್ವದಾದ್ಯಂತ 1 ಮಿಲಿಯನ್ ದಾಟಿದ COVID-19 ಪ್ರಕರಣ, 50,000 ಕ್ಕೂ ಹೆಚ್ಚು ಸಾವು


COMMERCIAL BREAK
SCROLL TO CONTINUE READING

ಆದಾಗ್ಯೂ ಈ ಫೋಟೋದಲ್ಲಿ ಕಂಡು ಬರುತ್ತಿರುವ ದೃಶ್ಯದಲ್ಲಿ ಎಷ್ಟರ ಮಟ್ಟಿಗೆ ಸತ್ಯವಿದೆ ಎಂಬ ಬಗ್ಗೆ ಪ್ರಶ್ನೆ ಉದ್ಭವಿಸುವುದು ಸಹಜ. ಹಣ ಬೀದಿಗಳಲ್ಲಿ ಎಸೆದಿರುವ ದೃಶ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.  ಆದರೆ ಅವುಗಳಿಗೂ ಇಟಲಿಗೂ ಯಾವುದೇ ಸಂಬಂಧವಿಲ್ಲ. ಏಕೆಂದರೆ ಮಾರ್ಚ್ 2019 ರಿಂದ ಇಂತಹ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ ಮತ್ತು ಆ ಸಮಯದಲ್ಲಿ ಜಗತ್ತು ಕರೋನಾ ವೈರಸ್ ಕೋವಿಡ್ -19 (Covid-19) ಎಂಬ ಪದವನ್ನೂ ಸಹ ಕೇಳಿರಲಿಲ್ಲ.


Lockdown: ಕಾಲ್ನಡಿಗೆಯಲ್ಲಿ ಸೂರತ್‌ನಿಂದ ಬಾಂಡಾ ತಲುಪಿದ ಗರ್ಭಿಣಿ ಮಹಿಳೆ


ಹಾಗಾದರೆ ಬೀದಿಗಳಲ್ಲಿ ಹಣ ಎಸೆದಿರುವ ದೃಶ್ಯದ ಹಿಂದಿನ ಸತ್ಯವೇನು?
ವಾಸ್ತವವಾಗಿ, ಅವ್ಯವಸ್ಥೆಯೊಂದಿಗೆ ಹೋರಾಡುತ್ತಿರುವ ಲ್ಯಾಟಿನ್ ಅಮೆರಿಕಾದ ವೆನಿಜುವೆಲಾ, ಆಗಸ್ಟ್ 2018 ರಲ್ಲಿ ತನ್ನ ಕರೆನ್ಸಿಯನ್ನು ಬದಲಾಯಿಸಲು ನಿರ್ಧರಿಸಿತು. ಆದ್ದರಿಂದ, ಅವರು ತಮ್ಮ ಹಳೆಯ ಕರೆನ್ಸಿಯಾದ ಬೊಲಿವಾರ್ ಫ್ಯುಯೆರ್ಟೆಯ ಬದಲಿಗೆ ಬೊಲಿವಾರ್ ಸೊಬೆರಾನೊವನ್ನು ನಡೆಸಲು ನಿರ್ಧರಿಸಿದರು. ಇದರ ಪರಿಣಾಮವಾಗಿ, ಹಳೆಯ ಕರೆನ್ಸಿಗೆ ಮೌಲ್ಯವಿಲ್ಲದಿದ್ದಾಗ ವೆನೆಜುವೆಲಾದ ಜನರು ಆ ನೋಟುಗಳನ್ನು ಬೀದಿಗಳಲ್ಲಿ ಎಸೆಯಲು ಪ್ರಾರಂಭಿಸಿದರು. ಆದಾಗ್ಯೂ, ಆ ಸಮಯದಲ್ಲಿ ವೆನೆಜುವೆಲಾದ ಕೆಲವರು ಬ್ಯಾಂಕನ್ನು ಲೂಟಿ ಮಾಡಿ ಅದರ ನೋಟುಗಳನ್ನು ಸುಟ್ಟುಹಾಕಿದ್ದಾರೆ ಎಂಬ ವರದಿಗಳು ಬಂದವು. ಆದ್ದರಿಂದ, ಕಳೆದ ಒಂದು ವರ್ಷದಿಂದ, ಬೀದಿಗಳಲ್ಲಿ ಹಣವನ್ನು ಎಸೆಯುವ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.