ವಿಶ್ವದಾದ್ಯಂತ 1 ಮಿಲಿಯನ್ ದಾಟಿದ COVID-19 ಪ್ರಕರಣ, 50,000 ಕ್ಕೂ ಹೆಚ್ಚು ಸಾವು

ಯುಎಸ್ ಮೂಲದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯವು ಒದಗಿಸಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಜಾಗತಿಕವಾಗಿ 10,13,157 ಕ್ಕೂ ಹೆಚ್ಚು COVID-19 ಸೋಂಕುಗಳು ಪತ್ತೆಯಾಗಿದ್ದು, 52,983 ಸಾವುಗಳು ಸಂಭವಿಸಿವೆ.  

Last Updated : Apr 3, 2020, 07:28 AM IST
ವಿಶ್ವದಾದ್ಯಂತ 1 ಮಿಲಿಯನ್ ದಾಟಿದ COVID-19 ಪ್ರಕರಣ,  50,000 ಕ್ಕೂ ಹೆಚ್ಚು ಸಾವು title=

ವಾಷಿಂಗ್ಟನ್ ಡಿಸಿ: ಡೆಡ್ಲಿ ಕರೋನವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮಾರಕ  ಕರೋನಾವೈರಸ್ (Coronavirus) ಪ್ರಪಂಚದಾದ್ಯಂತ ಒಂದು ದಶಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ ಮತ್ತು 50,000 ಸಾವಿರಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿದೆ. ಯುಎಸ್ ಮೂಲದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯವು ಒದಗಿಸಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಜಾಗತಿಕವಾಗಿ 10,13,157 ಕ್ಕೂ ಹೆಚ್ಚು COVID-19 ಸೋಂಕುಗಳು ಪತ್ತೆಯಾಗಿದ್ದು, 52,983 ಸಾವುಗಳು ಸಂಭವಿಸಿವೆ. ಮಾರಕ ವೈರಸ್ ಸೋಂಕಿಗೆ ತುತ್ತಾಗಿದ್ದವರಲ್ಲಿ ಸುಮಾರು 210,263 ರೋಗಿಗಳು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯವು ಸಂಗ್ರಹಿಸಿದ ಮಾಹಿತಿಯ ಪ್ರಕಾರ, ವಿಶ್ವದ ಅತಿ ಹೆಚ್ಚು ಹಾನಿಗೊಳಗಾದ ದೇಶ ಅಮೆರಿಕದಲ್ಲಿ ಒಟ್ಟು 5,926 ಮಂದಿ COVID-19 ಸೋಂಕಿಗೆ ಬಲಿಯಾಗಿದ್ದಾರೆ. ಇದಲ್ಲದೆ  242,182 ಕ್ಕೂ ಹೆಚ್ಚು ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಸ್ಪೇನ್‌ನಲ್ಲಿ ನಿನ್ನೆ ಒಂದೇ ದಿನದಲ್ಲಿ COVID-19 ಕಾರಣದಿಂದಾಗಿ 950 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಪೇನ್ (Spain)ನ ಒಟ್ಟು ಸಾವಿನ  ಸಂಖ್ಯೆ 9,053ಕ್ಕೆ ಏರಿದೆ. ಏತನ್ಮಧ್ಯೆ, ಪೀಡಿತರ ಸಂಖ್ಯೆ 112,065 ಕ್ಕೆ ಏರಿದೆ.

ಬಾಲ್ಟಿಮೋರ್ ವಿಶ್ವವಿದ್ಯಾನಿಲಯದ ಸಿಸ್ಟಮ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಕೇಂದ್ರವು 200,000 ಕ್ಕೂ ಹೆಚ್ಚು ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ ಎಂದು ವರದಿ ಮಾಡಿದೆ. ಅವರಲ್ಲಿ 75,000 ಕ್ಕೂ ಹೆಚ್ಚು ಜನರಿಗೆ ಚೀನಾದಲ್ಲಿ ಕಳೆದ ವರ್ಷ ಕೊನೆಯಲ್ಲಿ ಈ ವೈರಸ್ ಹರಡಿತ್ತು ಎನ್ನಲಾಗಿದೆ. ಅಧಿಕೃತ ದಾಖಲೆಗಳ ಆಧಾರದ ಮೇಲೆ ರಾಯಿಟರ್ಸ್ ಲೆಕ್ಕಾಚಾರದ ಪ್ರಕಾರ ಮೊದಲ 100,000 ಪ್ರಕರಣಗಳು ಸುಮಾರು 55 ದಿನಗಳಲ್ಲಿ ಮತ್ತು ಮೊದಲ 500,000 ಪ್ರಕರಣಗಳು  76 ದಿನಗಳಲ್ಲಿ ವರದಿಯಾಗಿದೆ.

ಕಳೆದ ಎಂಟು ದಿನಗಳಲ್ಲಿ ಪ್ರಕರಣಗಳು 1 ಮಿಲಿಯನ್‌ಗೆ ದ್ವಿಗುಣಗೊಂಡಿವೆ ಎಂದು ರಾಯಿಟರ್ಸ್ ಡೇಟಾ ತೋರಿಸಿದೆ.

ಭಾರತದಲ್ಲಿ ಕೊರೋನಾ ಹಾವಳಿ: 
ಭಾರತದಲ್ಲಿ ಗುರುವಾರ (ಏಪ್ರಿಲ್ 2, 2020) ಕರೋನವೈರಸ್ COVID-19 ಸಕಾರಾತ್ಮಕ ಪ್ರಕರಣಗಳ ಸಂಖ್ಯೆಯಲ್ಲಿ ಸ್ಥಿರ ಏರಿಕೆ ಕಂಡಿದ್ದು ಪ್ರಕರಣಗಳ ಸಂಖ್ಯೆ 2069 ಕ್ಕೆ ತಲುಪಿದೆ. ಇವರಲ್ಲಿ 53 ಮಂದಿ ಸಾವನ್ನಪ್ಪಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,860 ಆಗಿದ್ದರೆ, 156 ರೋಗಿಗಳು ಗುಣಮುಖರಾಗಿದ್ದಾರೆ.  53 ಮಂದಿ ಸಾವನ್ನಪ್ಪಿದ್ದಾರೆ.

ಏತನ್ಮಧ್ಯೆ,  ವ್ಯಾಪಕ ಸಮುದಾಯ ಪ್ರಸರಣಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಪ್ರತಿಪಾದಿಸಿದೆ. ವಿಶೇಷವೆಂದರೆ, ದೇಶಾದ್ಯಂತ ಕರೋನಾ ವೈರಸ್ ಹೆಚ್ಚು ಅಸ್ತಿತ್ವದಲ್ಲಿರುವ 20 ಮತ್ತು 22 ಸಂಭಾವ್ಯ ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ.

ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತ ಹರಡಿರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರಗಳು ಕಾರ್ಖಾನೆಗಳು ಮತ್ತು ವ್ಯವಹಾರಗಳನ್ನು ಮುಚ್ಚಿವೆ, ವಿಮಾನಯಾನ ಸಂಸ್ಥೆಗಳನ್ನು ಎಪ್ರಿಲ್ 14ರವರೆಗೆ ಸ್ಥಗಿತಗೊಳಿಸಲಾಗಿದೆ. ಲಕ್ಷಾಂತರ ಜನರಿಗೆ ಮನೆಯಿಂದಲೇ ಕೆಲಸ ಮಾಡಲು ಕಂಪನಿಗಳು ಅನುವು ಮಾಡಿಕೊಟ್ಟಿವೆ.

ಅಭಿವೃದ್ಧಿ ಹೊಂದಿದ ಇತರ ದೇಶಗಳಿಗೆ ಹೋಲಿಸಿದರೆ, ಭಾರತವು 21 ದಿನಗಳ ರಾಷ್ಟ್ರವ್ಯಾಪಿ ಸರ್ಕಾರ ಕೈಗೊಂಡ ಲಾಕ್‌ಡೌನ್‌ನಂತಹ  ದಿಟ್ಟ ನಿರ್ಧಾರದಿಂದಾಗಿ ಈ ವೈರಸ್ ಹರಡುವಿಕೆಯ ಪ್ರಮಾಣ ಕಡಿಮೆಯಾಗಿದೆ. ಈ ಕಾರಣದಿಂದಾಗಿಯೇ ಹೆಚ್ಚು ಸಾವು-ನೋವುಗಳು ಸಂಭವಿಸಿಲ್ಲ ಎಂದೇ ಹೇಳಬಹುದು.
 

Trending News