ಇಸ್ಲಾಮಾಬಾದ್/ಕರಾಚಿ: ಪಾಕಿಸ್ತಾನದಲ್ಲಿ ಗೋಧಿ (Wheat) ಹಿಟ್ಟಿನ ಬೆಲೆ ಗಗನಕ್ಕೇರಿದೆ. ಅದರ ಬೆಲೆ ಎಷ್ಟೆಂದು ತಿಳಿದರೆ ನಿಮಗೂ ಶಾಕ್ ಆಗಬಹುದು. ದೊಡ್ಡ ಪ್ರಮಾಣದ ಗೋಧಿ ಉತ್ಪಾದನೆಯ ಹೊರತಾಗಿಯೂ ದೇಶದಲ್ಲಿ ಬ್ಲಾಕ್ ಮಾರ್ಕೆಟಿಂಗ್ ನಿಂದಾಗಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಸರ್ಕಾರ ಗೋಧಿಯನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ.


COMMERCIAL BREAK
SCROLL TO CONTINUE READING

ಪಾಕಿಸ್ತಾನದ (Pakistan) ಪತ್ರಿಕೆ ಡಾನ್ ನ್ಯೂಸ್‌ನ ವರದಿಯ ಪ್ರಕಾರ ಮುಕ್ತ ಮಾರುಕಟ್ಟೆಯಲ್ಲಿ ಹಿಟ್ಟಿನ ಗಿರಣಿಗಳ ಬೆಲೆ ನಾಲ್ಕು ರೂಪಾಯಿ ಹೆಚ್ಚಾಗಿದ್ದು ಕೆಜಿಗೆ 54 ರೂ. ತಲುಪಿದೆ. ಇದು ಕರಾಚಿಯಲ್ಲಿನ ಮಾರುಕಟ್ಟೆಯ ಬೆಲೆ ಆದರೆ ಪಂಜಾಬ್ ಮತ್ತು ಇತರ ರಾಜ್ಯಗಳಲ್ಲಿ ಬೆಲೆ ಇನ್ನೂ ಹೆಚ್ಚಾಗಿದೆ.


ಪಾಕಿಸ್ತಾನದಲ್ಲಿ ಜನಸಾಮಾನ್ಯರಿಗೆ ದಿನನಿತ್ಯ ರೋಟಿ ಸಿಗುವಂತೆ ಮಾಡಬೇಕು. ಇದಕ್ಕಾಗಿ ಈ ವಿಷಯದ ಬಗ್ಗೆ ಸರ್ಕಾರ ಕ್ಯಾಬಿನೆಟ್ ಸಭೆ ಕರೆಯಬೇಕು ಮತ್ತು ಹೊರಗಿನಿಂದ ಗೋಧಿ ಸಂಗ್ರಹಿಸಲು ಆದೇಶಗಳನ್ನು ನೀಡಬೇಕಾಗಿದೆ. ಇದರಿಂದಾಗಿ ಬೆಲೆಗಳ ಹೆಚ್ಚಳವನ್ನು ತಡೆಯಬಹುದು. ಸರ್ಕಾರದ ಪ್ರಕಾರ ಹಿಟ್ಟಿನ ಬೆಲೆ ಏಪ್ರಿಲ್‌ನಿಂದ 18.50 ರೂ. ಏರಿಕೆಯಾಗಿದೆ. ಆದಾಗ್ಯೂ ಚಿಲ್ಲರೆ ಮಾರುಕಟ್ಟೆಯಲ್ಲಿ ಈ ಹೆಚ್ಚಳವು ಸಾಕಷ್ಟು ಹೆಚ್ಚಾಗಿದೆ.


ಬ್ಲಾಕ್ ಮಾರ್ಕೆಟಿಂಗ್ ನಲ್ಲಿ ಗಿರಣಿ ಮಾಲೀಕರು :
ಗಿರಣಿ ಮಾಲೀಕರು ಗೋಧಿಯ ಕಪ್ಪು-ಮಾರಾಟವನ್ನು ಪ್ರಾರಂಭಿಸಿದ್ದಾರೆ, ಈ ಕಾರಣದಿಂದಾಗಿ ಬೆಲೆಗಳಲ್ಲಿ ದೊಡ್ಡ ಏರಿಕೆ ಕಂಡುಬಂದಿದೆ. 32 ಅಗತ್ಯ ವಸ್ತುಗಳ ಬ್ಲಾಕ್ ಮಾರ್ಕೆಟಿಂಗ್ ಕಂಡು ಬಂದರೆ ಮೂರು ವರ್ಷಗಳ ಶಿಕ್ಷೆ ಮತ್ತು ವಶಪಡಿಸಿಕೊಂಡ ವಸ್ತುಗಳ ಮೇಲೆ ಶೇ. 50 ರಷ್ಟು ದಂಡ ವಿಧಿಸುವ ಮಸೂದೆಯನ್ನು ಏಪ್ರಿಲ್‌ನಲ್ಲಿ ಪರಿಚಯಿಸಲಾಗಿದ್ದರೂ ಯಾವುದೇ ಅಡೆತಡೆ ಇಲ್ಲದೆ ಗೋಧಿಯನ್ನು ಬ್ಲಾಕ್ ಮಾರ್ಕೆಟ್ ನಲ್ಲಿ ಮಾರಾಟಮಾಡಲಾಗುತ್ತಿದೆ.


ಅಗತ್ಯಕ್ಕೆ ಅನುಗುಣವಾಗಿ ಗೋಧಿ ಪೂರೈಸಲು ಸರ್ಕಾರದ ಕ್ರಮ:
ದೇಶದಲ್ಲಿ ತಲೆದೋರಿರುವ ಸಮಸ್ಯೆಯನ್ನು ನಿವಾರಿಸಲು ಸರ್ಕಾರವು ಗೋಧಿ ಆಮದು ಮಾಡಲು ಅನುಮೋದನೆ ನೀಡಿದೆ. ಆದಾಗ್ಯೂ ಈ ಹಂತವು ಗೋಧಿಯನ್ನು ಹೆಚ್ಚು ದುಬಾರಿಯಾಗಿಸುತ್ತದೆ ಮತ್ತು ಇದಕ್ಕಾಗಿ ಈಗಾಗಲೇ ಹಣದುಬ್ಬರದ ಸಮಸ್ಯೆಯನ್ನು ಎದುರಿಸುತ್ತಿರುವ ದೇಶವು ವಿದೇಶಿ ವಿನಿಮಯಕ್ಕಾಗಿ ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ. ಪ್ರಸ್ತುತ ರಷ್ಯಾ ಮತ್ತು ಉಕ್ರೇನ್ 120,000 ಟನ್‌ಗಳನ್ನು ಸಾಗಿಸಲು ಅನುಮೋದನೆ ಪಡೆದಿವೆ, ಇದರ ಬೆಲೆ ಪ್ರತಿ ಟನ್‌ಗೆ - 220-232 ಡಾಲರ್. ಇದರೊಂದಿಗೆ 100 ಕೆಜಿ ಗೋಧಿ ಚೀಲಕ್ಕೆ ದೇಶೀಯ ಮಾರುಕಟ್ಟೆಯಲ್ಲಿ 4200 ರೂ. ಆದಾಗ್ಯೂ ಸರಕು ಮತ್ತು ಇತರ ಖರ್ಚುಗಳನ್ನು ಸೇರಿಸಿದರೆ, ಬೆಲೆ 100 ಕೆಜಿಗೆ 4900 ರೂ. ಆಗಲಿದೆ.


ಪಂಜಾಬ್‌ನ ಖೈಬರ್ ಪಖ್ತುನ್‌ವಾಲಾದಲ್ಲಿ ಕಳ್ಳಸಾಗಣೆ ಆತಂಕ:
ಪಂಜಾಬ್ ಮತ್ತು ಖೈಬರ್ ಪಖ್ತುನ್ವಾಲಾದಲ್ಲಿ ಗೋಧಿ ಕಳ್ಳಸಾಗಣೆ ಮಾಡುವ ಸಾಧ್ಯತೆಯಿದೆ ಎಂದು ವಿತರಕರು ಆತಂಕಪಡುತ್ತಾರೆ. ಹೇಗಾದರೂ ಇಲ್ಲಿ ಗೋಧಿ ಮತ್ತು ಹಿಟ್ಟಿನ ಬೆಲೆ ತುಂಬಾ ಹೆಚ್ಚಾಗಿದೆ. ಪ್ರಸ್ತುತ ಪಾಕಿಸ್ತಾನ ಮಾಧ್ಯಮ ವರದಿಗಳ ಪ್ರಕಾರ ಪಂಜಾಬ್‌ನ ಅನೇಕ ನಗರಗಳಲ್ಲಿ 20 ಕೆಜಿ ಗೋಧಿ ಹಿಟ್ಟಿನ ಚೀಲದ ಬೆಲೆ 1030-1050 ರೂ. ಆಗಿದೆ.